ನಳಿನ್ ಕುಮಾರ್ ಕಟೀಲ್‍ಗೆ ಮೆದುಳು ಇದ್ಯೋ ಗೊತ್ತಿಲ್ಲ : ಎಂ.ಬಿ. ಪಾಟೀಲ್ ಕಿಡಿ

ರಾಜ್ಯ ಸರಕಾರದ ಇಲಾಖೆಗಳಲ್ಲಿ ಶೇ40 ಕಮಿಷನ್ ಪಡೆಯಲಾಗಿದೆ ಎಂದು ಗುತ್ತಿಗೆ ದಾರರು ಪ್ರಧಾನಿ ಮೋದಿಗೆ ನೀಡಿದ ದೂರಿನ ಬಗ್ಗೆ ಹಾಲಿ ನ್ಯಾಯಾಧೀಶರು ಅಥವಾ ನಿವೃತ್ತ ನ್ಯಾಯಾಧೀಶ ರ ಮೂಲಕ ತನಿಖೆ ನಡೆಯಲಿ’ ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
‘ರಾಜ್ಯದಲ್ಲಿ 40 ಶೇ. ಕಮೀಷನ್ ಪಡೆಯುವ ಆರೋಪ ಹೊಂದಿರುವ ಇಲಾಖೆಗಳ ಮೇಲೆ ಐ.ಟಿ, ಇ.ಡಿ ದಾಳಿ ಏಕೆ ನಡೆಯುತ್ತಿಲ್ಲ. ಮೋದಿ ಅಧಿಕಾರಕ್ಕೆ ಬರುವ ಮೊದಲು ದೇಶದ ಜನಕ್ಕೆ ಅಚ್ಛೇದಿನ ಇತ್ತು ಈಗ ಇಲ್ಲ ಎನ್ನುವು ದನ್ನು ದೇಶದ ಜನ ಹೇಳುತ್ತಿದ್ದಾರೆ. ದೇಶದಲ್ಲಿ ಮೋದಿ ಅಧಿಕಾರಕ್ಕೆ ಬಂದ ಬಳಿಕ ದೇಶ ಯುವ ಜನರಿಗೆ ಭ್ರಮ ನಿರಸನ ವಾಗಿದೆ. ಸಾಕಷ್ಟು ಕಂಪೆನಿಗಳು ಖಾಸಗಿಯವರ ಪಾಲಾಗಿದೆ ಎಂದು ಆರೋಪಿಸಿದರು.
‘ನಳಿನ್ ಕುಮಾರ್ ಕಟೀಲ್ ವಿರುದ್ಧ ದೂರು ದಾಖಲಿಸಿ ಸೂಕ್ತ ಕ್ರಮಕ್ಕೆ ಕಾನೂನು ಹೋರಾಟ’: ಎಂ.ಬಿ.ಪಾಟೀಲ್ ವಿರುದ್ಧ ನಳಿನ್ ಕುಮಾರ್ ಕಟೀಲ್ ಮಲಪ್ರಭಾ ಕಾಲುವೆ ನಿರ್ಮಾಣ ಕ್ಕೆ ಸಂಬಂಧಿಸಿದಂತೆ ಮಾಡಿರುವ ಭೃಷ್ಟಾಚಾರದ ಆರೋಪದ ವಿರುದ್ಧ ಅವರಿಗೆ ಕಾನೂನು ಪ್ರಕಾರ ನೋಟೀಸ್ ಜಾರಿ ಮಾಡ ಸೂಕ್ತ ಕ್ರಮಕ್ಕಾಗಿ ಕಾನೂನು ಹೋರಾಟ ನಡೆಸುವುದಾಗಿ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್,ಶಾಸಕರಾದ ಯು.ಟಿ.ಖಾದರ್, ಮಂಜುನಾಥ ಭಂಡಾರಿ,ಮಾಜಿ ಸಚಿವರಾದ ಬಿ.ರಮಾನಾಥ ರೈ,ಅಭಯ ಚಂದ್ರ ಜೈನ್ ,ವಿನಯ ಕುಮಾರ್ ಸೊರಕೆ,ಮಾಜಿ ಶಾಸಕ ರಾದ ಶಕುಂತಳಾ ಶೆಟ್ಟಿ, ಜೆ.ಆರ್. ಲೋಬೊ, ಐವನ್ ಡಿ ಸೋಜ, ಮೊಹಿಯು ದ್ದೀನ್ ಬಾವ,ಕಾಂಗ್ರೆಸ್ ಮುಖಂಡ ರಾದ ಮಮತಾ ಗಟ್ಟಿ, ಕೃಪಾ ಅಮರ್ ಆಳ್ವ, ಮಿಥುನ್ ರೈ ಮೊದಲಾದವರು ಉಪಸ್ಥಿತರಿದ್ದರು.