ನೆಲ್ಯಾಡಿ:ಶ್ರೀರಾಮ ವಿದ್ಯಾಲಯ ಸೂರ್ಯ ನಗರ ಶ್ರೀರಾಮೋತ್ಸವ

ನೆಲ್ಯಾಡಿ: ಶ್ರೀರಾಮ ವಿದ್ಯಾಲಯ ಸೂರ್ಯ ನಗರದಲ್ಲಿ ಜ.22ರಂದು ಅಯೋಧ್ಯೆಯಲ್ಲಿ ನಡೆದ ಪ್ರಭು ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠೆ ಮಹೋತ್ಸವದ ಪ್ರಯುಕ್ತ ಪ್ರಾರ್ಥನೆ, ಭಜನೆ, ಶ್ರೀರಾಮ ರಕ್ಷಾಸ್ತೋತ್ರ, ಹನುಮಾನ್ ಚಾಲೀಸ್, ರಾಮಾಯಣ ಆಧಾರಿತ ರಸಪ್ರಶ್ನೆಗಳು, 108 ಬಾರಿ ರಾಮ ತಾರಕ ಮಂತ್ರ, ಶ್ರೀ ರಾಮೋತ್ಸವವು ನಡೆಯಿತು.

ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಣೆ ಜೊತೆಗೆ ಅಯೋಧ್ಯೆಯ ಕರಸೇವೆಯಲ್ಲಿ ಪಾಲ್ಗೊಂಡ ಕರ ಸೇವಕರಾದ ಕೃಷ್ಣಪ್ಪ ಕಟ್ಟೆಮಜಲು, ಪೂವಪ್ಪ ಕೊಣಾಲು, ಕೊರಗಪ್ಪ ಆಲಂತಾಯ, ಬಾಬು ನಾಯ್ಕ ಆಲಂತಾಯ, ಪ್ರತಾಪ, ಗಂಗಾಧರ, ಪದ್ಮನಾಭ (ಅಣ್ಣಿ) ಬಂಗೇರ, ಕುಶಾಲಪ್ಪ ಪೂವಾಜೆ, ದಿ.ಉಮೇಶ್ ಕುಡ್ತಾಜೆ, ಇವರ ಪರವಾಗಿ ಇವರ ಪುತ್ರಿಯಾದ ಕು.ಸುಕನ್ಯ ಇವರನ್ನು ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕುಶಾಲಪ್ಪ ಪೂವಾಜೆ ಮತ್ತು ಪೂವಪ್ಪ ಕೊಣಾಲು ರವರು ಅಯೋಧ್ಯೆಯ ಕರಸೇವೆಯಲ್ಲಿ ಭಾಗವಹಿಸಿ ಪಡೆದ ಅನುಭವವನ್ನು ಕಾರ್ಯಕ್ರಮದಲ್ಲಿ ಹಂಚಿಕೊಂಡರು.

Related Posts

Leave a Reply

Your email address will not be published.