ಪಡುಬಿದ್ರಿ: ಚಾಲಕನ ನಿಯಂತ್ರಣ ಕಳೆದುಕೊಂಡು ಢಿಕ್ಕಿಯಾದ ಕಾರು: ನಜ್ಜುಗುಜ್ಜಾದ ಕಾರು, ಪ್ರಯಾಣಿಕರು ಅಪಾಯದಿಂದ ಪಾರು
![](https://v4news.com/wp-content/uploads/2023/11/WhatsApp-Image-2023-11-17-at-12.30.40-2-1140x620.jpeg)
ಪಡುಬಿದ್ರಿ: ಚಾಲಕನ ನಿಯಂತ್ರಣ ಕಳೆದುಕೊಂಡು ಢಿಕ್ಕಿಯಾದ ಕಾರು: ನಜ್ಜುಗುಜ್ಜಾದ ಕಾರು, ಪ್ರಯಾಣಿಕರು ಅಪಾಯದಿಂದ ಪಾರು ಅತೀ ವೇಗದ ಚಾಲನೆಯಿಂದಾಗಿ ನಿಯಂತ್ರಣ ಕಳೆದುಕೊಂಡ ಕಾರೊಂದು ಸರಣಿ ಢಿಕ್ಕಿಯಾಗಿದ್ದು, ಕಾರು ಸಂಪೂರ್ಣ ಜಖಂಗೊಂಡ ಘಟನೆ ಪಡುಬಿದ್ರಿ ಸೇತುವೆ ಬಳಿ ನಡೆದಿದೆ.
ಕಾರು ಚಾಲಕನ ಅಜಾಗರೂಕತೆಯ ಚಾಲನೆಯಿಂದಾಗಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ, ವಾಯುವೇಗದಲ್ಲಿ ಮುಂದೆ ಸಾಗಿ ತೆಂಗಿನ ಮರಕ್ಕೆ ಡಿಕ್ಕಿಯಾಗಿ ಅಲ್ಲಿಂದ ಹಿಮ್ಮುಖವಾಗಿ ಚಲಿಸಿ ಮತ್ತೊಂದು ತೆಂಗಿನ ಮರಕ್ಕೆ ಡಿಕ್ಕಿಯಾಗಿದೆ. ಕಾರು ಭಾಗಶಃ ಜಖಂಗೊಂಡಿದ್ದು ಪ್ರಯಾಣಿಕರು ಅಲ್ಪಸ್ವಲ್ಪ ಗಾಯಗೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
![](https://v4news.com/wp-content/uploads/2023/11/WhatsApp-Image-2023-11-17-at-10.54.43-575x1024.jpeg)
ಕೇರಳ ನೋಂದಾಯಿತ ಸಂಖ್ಯೆಯ ಕಾರು ಇದಾಗಿದ್ದು, ತಡರಾತ್ರಿ ಹನ್ನೆರಡರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಕಾರಿನಲ್ಲಿದ್ದವರು, ಮಣಿಪಾಲಕ್ಕೆ ಹೋಗಿ ಮಂಗಳೂರಿಗೆ ಮರಳುತ್ತಿದ್ದರು ಎನ್ನಲಾಗಿದೆ. ವೇಗವಾಗಿ ಮುನ್ನುಗ್ಗಿ ಬಂದ ಕಾರು ಪಡುಬಿದ್ರಿ ಸೇತುವೆ ಬಳಿಯ ತಿರುವಲ್ಲಿ ನಿಯಂತ್ರಣ ಕಳೆದುಕೊಂಡು ಪಕ್ಕದ ಗುಂಡಿಗೆ ಉರುಳಿದೆ. ಪ್ರಯಾಣಿಕರು ಗುದ್ದಿದ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
![](https://v4news.com/wp-content/uploads/2023/11/WhatsApp-Image-2023-11-16-at-14.45.21-744x1024.jpeg)