ಪಡುಬಿದ್ರಿ ಯುವಕನೋರ್ವ ನೇಣಿಗೆ ಶರಣು

ಪೈಂಟಿಂಗ್ ವೃತ್ತಿ ನಡೆಸುತ್ತಿದ್ದ ಯುವಕನೋರ್ವ ಅಣ್ಣನೊಂದಿಗೆ ವಾಸವಿದ್ದ ಬಾಡಿಗೆ ಮನೆಯಲ್ಲಿ ನೇಣೆಗೆ ಶರಣಾದ ಘಟನೆ ನಡೆದಿದೆ.
ಮೃತ ಯುವಕ ಸೋನಿತ್ ಪೂಜಾರಿ(30), ಇವರು ಅಣ್ಣ ಅತ್ತಿಗೆಯೊಂದಿಗೆ ಅವರಾಲು ಮಟ್ಟು ರಸ್ತೆಯ ಬೀಡು ಬಳಿಯ ಬಾಡಿಗೆ ಮನೆಯಲ್ಲಿ ವಾಸವಿದ್ದು, ಅಣ್ಣ ಅತ್ತಿಗೆ ಕೆಲಸಕ್ಕೆ ಹೋಗುತ್ತಿದ್ದು, ಅವರ ಮಗು ಶಾಲೆಗೆ ಹೋಗುತ್ತಿತ್ತು, ಇಂದು ಕೆಲಸಕ್ಕೆ ಹೋಗದ ಈತ ಸಂಜೆ ಸುಮಾರು ಐದು ಗಂಟೆಯ ವರಗೆ ಪೇಟೆಯಲ್ಲೇ ಇದ್ದ ಈತ ಮತ್ತೆ ಮನೆಗೆ ಮರಳಿದ್ದ. ಈತನ ಅತ್ತಿಗೆ ಆರುವರೆ ಗಂಟೆಗೆ ಕೆಲಸ ಬಿಟ್ಟು ಮನೆಗೆ ಬಂದಾಗ ಬಾಗಿಲ ಚಿಲಕ ಒಳಗಿದ ಹಾಕಲಾಗಿದ್ದು, ಬೆಲ್ ಆಕಿದರೂ ತೆರೆಯದಿದ್ದಾಗ ಕಿಟಕಿ ಮೂಲಕ ನೋಡಿದಾಗ ಪ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ. ಸ್ಥಳಕ್ಕೆ ಬಂದ ಪಡುಬಿದ್ರಿ ಎಸ್ಸೈ ಪುರುಷೋತ್ತಮ್ ಪರಿಶೀಲಿಸಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸಾಗಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related Posts

Leave a Reply

Your email address will not be published.