ಪಿಂಕ್ ವಾಟ್ಸಪ್ ಗ್ರಾಹಕರೆ ಎಚ್ಚರ !!

ಸೈಬರ್ ವಂಚಕರು ಮೋಸ ಮಾಡಲು ಹೊಸ ತಂತ್ರಗಳನ್ನು ಹುಡುಕುತ್ತಿದ್ದಾರೆ. Whatsapp ಹೊಸ ವೈಶಿಷ್ಟ್ಯಗಳೊಂದಿಗೆ ಪಿಂಕ್ ಬಣ್ಣದಲ್ಲಿ ಬಂದಿದೆ & ನವೀಕರಿಸಲು ಲಿಂಕ್‌ಗಳನ್ನು ಕಳುಹಿಸಲಾಗುತ್ತಿದೆ ಎಂಬ ಸಂದೇಶ ಕಳುಹಿಸುವ ವಂಚನಾ ಜಾಲ ಸಕ್ರೀಯವಾಗಿದ್ದು ನಿಮ್ಮ ಬ್ಯಾಂಕ್ ಖಾತೆಯ ಹಣ ದೋಚುವ ಸಾಧ್ಯತೆ ಇದೆ.
ನಿಮ್ಮ ವಾಟ್ಸ್‌ಆಪ್ ಪಿಂಕ್ ಬಣ್ಣ ಬಂದಿದೆ ಅದರ ಮೇಲೆ ಕ್ಲಿಕ್ ಮಾಡಿ ಅದು ಕೇಳುವ ಮಾಹಿತಿಯನ್ನು ನಮೂದಿಸಿದರೆ ನಿಮ್ಮ ಮಾಹಿತಿಯು ಸೈಬರ್ ಅಪರಾಧಿಗಳ ಕೈ ಸೇರುತ್ತದೆ. ನಿಮ್ಮ ಬ್ಯಾಂಕ್ ಪಾಸ್ ವರ್ಡ್ ಕದ್ದು ಹಣ ದೋಚುವ ಸಾಧ್ಯತೆ ಇದೆ. ಹೀಗಾಗಿ ಈ ಹೆಸರಿನಲ್ಲಿ ಲಿಂಕ್ ಗಳು ಬಂದರೆ ಅದನ್ನು ಓಪನ್ ಮಾಡಬೇಡಿ ಎಂದು ಉಡುಪಿ ಸೆನ್ ಇನ್ಸ್ಪೆಕ್ಟರ್ ಮಂಜುನಾಥ್ ಸೂಚಿಸಿದ್ದಾರೆ.
