ಮಣಿಪುರ ಗಲಭೆ ತಡೆಯುವಲ್ಲಿ ಕೇಂದ್ರ ಸರ್ಕಾರ ವಿಫಲ : ಪುತ್ತೂರು ಕ್ರಿಶ್ಚಿಯನ್ ಕಮ್ಯುನಿಟಿ ಅಧ್ಯಕ್ಷ ಮೌರೀಸ್ ಮಸ್ಕರೇನಸ್ ಹೇಳಿಕೆ

ಮಣಿಪುರ ರಾಜ್ಯದಲ್ಲಿ ಕಳೆದ ಎರಡು ತಿಂಗಳಿನಿಂದ ಗಲಭೆ ನಡೆಯುತ್ತಿದ್ದು, 100 ಕ್ಕೂ ಮಿಕ್ಕಿದ ಜನ ಸಾವನ್ನಪ್ಪಿದ್ದು, ಗಲಭೆಯನ್ನು ತಡೆಯುವಲ್ಲಿ ಕೇಂದ್ರ ಮತ್ತು ಅಲ್ಲಿನ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಪುತ್ತೂರು ಕ್ರಿಶ್ಚಿಯನ್ ಕಮ್ಯುನಿಟಿ ಅಧ್ಯಕ್ಷ ಮೌರೀಸ್ ಮಸ್ಕರೇನಸ್ ಹೇಳಿದರು.

ಪುತ್ತೂರು ಪ್ರೆಸ್‍ಕ್ಲಬ್ ನಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಮಣಿಪುರದಲ್ಲಿ ಮಿಥೈ ಮತ್ತು ಕುಕ್ಕೀ ಜನಾಂಗಗಳ ಮಧ್ಯೆ ನಿರಂತರ ಗಲಭೆ ನಡೆಯುತ್ತಿದ್ದು, ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಈ ಗಲಭೆ ಆರಂಭಗೊಂಡಿದೆ. ಪೊಲೀಸ್ ಠಾಣೆಯಿಂದ ಬಂಡುಕೋರರು ಪೊಲೀಸ್ ರೈಫಲ್ ಗಳನ್ನು ದೋಚಿದ ಘಟನೆ ನಡೆದಿದೆ. ಮಣಿಪುರದಂತ ಪುಟ್ಟ ರಾಜ್ಯದಲ್ಲಿ ಇಷ್ಟೊಂದು ಗಂಭೀರ ಸ್ವರೂಪದ ಗಲಭೆಗಳು ಆಗುತ್ತಿದ್ದರೂ, ಪ್ರಧಾನಿ ನರೇಂದ್ರ ಮೋದಿ ಮೌನವಾಗಿದ್ದಾರೆ. ಮಣಿಪುರದಲ್ಲಿ ಅಧಿಕಾರ ನಡೆಸುತ್ತಿರುವ ಸರಕಾರವನ್ನು ಅಮಾನತುಗೊಳಿಸಬೇಕೆಂದು ಅವರು ಒತ್ತಾಯಿಸಿದರು.

manju shree silks and sarees

Related Posts

Leave a Reply

Your email address will not be published.