ಕಸಬಾ ಬೆಂಗ್ರೆಯಲ್ಲಿ ಸಿಪಿಐಎಮ್‌ನಿಂದ ರಾಜಕೀಯ ಸಮಾವೇಶ

ಕೇಂದ್ರ ಹಾಗೂ ರಾಜ್ಯ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ,ಬೆಲೆ ಏರಿಕೆ, ನಿರುದ್ಯೋಗ- ರೈತರ ಭೂಸ್ವಾಧೀನ ನೀತಿಯ ವಿರುದ್ಧ CPIMದಕ್ಷಿಣ ‌ಕನ್ನಡ ಜಿಲ್ಲೆಯಾದ್ಯಂತ 2025 ಆಗಸ್ಟ್ 3 ರಿಂದ 11ರ ವರೆಗೆ ನಡೆಯುವ ರಾಜಕೀಯ ಪ್ರಚಾರಾಂದೋಲನದ ಭಾಗವಾಗಿ ಇವತ್ತು ಮಂಗಳೂರಿನ CPIM ದಕ್ಷಿಣ ಭಾಗದ ಕಸಬಾ ಬೆಂಗ್ರೆ ಪ್ರದೇಶದ ಫುಟ್ಬಾಲ್ ಮೈದಾನದ ಸಮೀಪ ಪಿ‌.ಜಿ.ಪಾಯಿಂಟ್ ಬಳಿ ರಾಜಕೀಯ ಸಮಾವೇಶ ಕಾರ್ಯಕ್ರಮ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು CPIM ಬೆಂಗ್ರೆ ಮುಖಂಡರಾದ ನೌಶಾದ್ ಬೆಂಗ್ರೆ ವಹಿಸಿದ್ದರು. ಸಮಾವೇಶದ ಪ್ರಮುಖ ಉದ್ಘಾಟನ ಭಾಷಣವನ್ನು CPIM ಜಿಲ್ಲಾ ಕಾರ್ಯದರ್ಶಿ ಸಾಮಾಜಿಕ ಹೋರಾಟಗಾರರು ಮುನೀರ್ ಕಾಟಿಪಳ್ಳ ಮಾತಾಡಿ ದೇಶಾದ್ಯಂತ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತಾಡಿದರು ಕೇಂದ್ರ ಸರಕಾರದ ವಿಫಲವಾದ ಆರ್ಥಿಕ ನೀತಿಗಳು, ನಿರುದ್ಯೋಗ ಸಮಸ್ಯೆ ಜಾಗತಿಕವಾಗಿ ಭಾರತ ದೇಶ ಎದುರಿಸುತ್ತಿರುವ ಸಮಸ್ಯೆಗಳು ಡಾಲರ್ ಎದುರು ರೂಪಾಯಿ ಮೌಲ್ಯದ ಕುಸಿತ ರಫ್ತು ಮೇಲೆ ವಿಧಿಸುತ್ತಿರುವ ಸುಂಕ ಜಾಗತಿಕವಾಗಿ ಇತರ ದೇಶಗಳೊಂದಿಗೆ ಕೆಟ್ಟು ಹೋಗಿರುವ ಸಂಬಂಧ ಅರ್ಥ ವ್ಯವಸ್ಥೆಗೆ ಆಗಿರುವ ಪರಿಣಾಮಗಳನ್ನು ವಿವರಿಸಿದರು.

ರಾಜ್ಯದ ಆರ್ಥಿಕ ಜನವಿರೋಧಿ ನೀತಿಗಳು,ರೈತರ ಭೂ ಸ್ವಾಧಿನ ರೈತ, ಕೃಷಿ ವಿರೋಧಿ ಕಾಯಿದೆಗಳ ಬಗ್ಗೆ,ದುಡಿಯುವ ಸಮಯದ ಹೆಚ್ಚಳಕ್ಕೆ ಸರ್ಕಾರದ ನಡೆಯ ಬಗ್ಗೆಯೂ ತಳಿಸಿದರು. ಜಿಲ್ಲೆಯಲ್ಲಿ ನಿರುದ್ಯೋಗ, ಕಾರ್ಮಿಕರ ಸಮಸ್ಯೆ, ಕೋಮುವಾದದ ಅಪಾಯ,ಕೋಮು ಪ್ರಚೋದನೆ ಭಾಷಣಗಳು, ಅಲ್ಪಸಂಖ್ಯಾತರ ಮೇಲೆ ದಾಳಿ‌ ಜಿಲ್ಲೆಯ ಕೋಮು ಸೌಹಾರ್ದಕ್ಕೆ ಎದುರಾಗಿರುವ ಸಮಸ್ಯೆಗಳ ಬಗ್ಗೆ ವಿವರಿಸಿದರು. ಸೌಹಾರ್ದ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಜಿಲ್ಲೆಯಲ್ಲಿ ನಡೆಯಬೇಕೆಂದು ತಿಳಿಸಿದರು.

CPIM ಜಿಲ್ಲಾ ಮುಖಂಡರಾದ ಬಿ.ಕೆ ಇಮ್ತಿಯಾಝ್ ಮಾತನಾಡಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಬಡತನ, ನಿರುದ್ಯೋಗದ ಸಮಸ್ಯೆ ಇಲ್ಲಿಯ ಬಡಜನರಿಗೆ ಬೇಕಾದ ವಸತಿ ನಿವೇಶನ ಸರಕಾರ ಕೊಡಲು ವಿಫಲವಾಗಿರುವ ವಿಚಾರ ಜನರ ಆರೋಗ್ಯಕ್ಕೆ ಸಂಬಂಧಿಸಿ ಉತ್ತಮ ದರ್ಜೆಯ ಸರಕಾರಿ ಮೇಡಿಕಲ್ ಕೊರತೆ ಬಡ ಮಕ್ಕಳಿಗೆ ಸರಕಾರಿ ಕಾಲೇಜು ಸಮಸ್ಯೆ ‌ಜಿಲ್ಲೆಯ ಹಲವು ಸಮಸ್ಯೆಗಳ ಬಗ್ಗೆ ವಿವರಿಸಿದರು. ಬೆಂಗ್ರೆಯಲ್ಲಿ CPIM ಹಾಗೂ ಇಲ್ಲಿನ ಯುವಜನ ಸಂಘಟನೆ ಜನಪರ ಬೇರೆ ಬೇರೆ ವಿಚಾರಗಳಲ್ಲಿ ಇಲ್ಲಿಯ ಸ್ಥಳೀಯರೊಂದಿಗೆ ಸೇರಿ ನಡೆಸಿದ,ಗಾಲ್ಫ್‌ ಹೋರಾಟ,ಫಿಶಮಿಲ್ ಹೋರಾಟ, ಹಕ್ಕು ಪತ್ರ ಹೋರಾಟ ಇತ್ತೀಚಿನ ಸಾಗರಮಲಕ್ಕೆ ಸಂಬಂಧಿಸಿ ನಡೆಸಿದ ಹೋರಾಟಗಳ ಬಗ್ಗೆ ತಿಳಿಸಿದರು.ಈ ಮುಂಚೆ ಇಲ್ಲಿನ ಸ್ಥಳೀಯರಿಗೆ ಸ್ಥಳೀಯ ಪೋಲಿಸ್ ಠಾಣೆಯಲ್ಲಿ‌ ಅಮಾಯಕರಿಗೆ ಪಾಸ್‌ಪೋರ್ಟ್ ವಿಚಾರಣೆ ಸಂಧರ್ಭದಲ್ಲಿ ಮಾಡುತ್ತಿರುವ ಕಿರುಕುಳ ವಿಚಾರದಲ್ಲಿ ಮದ್ಯಸ್ತಿಕೆ ವಹಿಸಿ ಧ್ವನಿ ಎತ್ತಿದ ವಿಚಾರ ಇಲ್ಲಿನ ಜನಪರ ಕಾರ್ಯಕ್ರಮ,ವಿದ್ಯುತ್ ಸಮಸ್ಯೆಗೆ ಸ್ಪಂದನೆ,ಪಿ ಯು ಕಾಲೇಜಿಗಾಗಿ ಬೇಡಿಕೆ,ಸರಕಾರಿ ಬಸ್ಸಿಗೆ ಬೇಡಿಕೆ ಹಲವು ವಿಚಾರಗಳನ್ನು ತಿಳಿಸಿದರು.

CPIM ಮಂಗಳೂರು ಸಮಿತಿ ಯ ತೈಯೂಬ್ ಬೆಂಗ್ರೆ ಸ್ವಾಗತಿಸಿ ಮಾತನಾಡಿ ಇಲ್ಲಿ CPIM ಜನಪರ ಹೋರಾಟಗಳ CPIM ಜನಪರ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಕೊನೆಯಲ್ಲಿ ಮುಖಂಡರಾದ CPIM ನೌಶಾದ್ ಬೆಂಗ್ರೆ ಮಾತನಾಡಿ ಸಲ್ಲಿಸಿದರು.ವೇದಿಕೆಯಲ್ಲಿ CPIM ಮುಖಂಡರಾದ ರಫೀಕ್ ಪಿ.ಜಿ,ಬಿಲಾಲ್ ಬೆಂಗ್ರೆ ಉಪಸ್ಥಿತರಿದ್ದರು.

Related Posts

Leave a Reply

Your email address will not be published.