ಗರಿಷ್ಠ ಪ್ರಮಾಣದ ಮತದಾನದೊಂದಿಗೆ ಅಭ್ಯರ್ಥಿಗಳ ಗೆಲುವು ನಮ್ಮದಾಗಬೇಕು: ದ.ಕ. ಜಿಲ್ಲಾ ಚುನಾವಣಾ ಸಂಚಾಲಕ ಪ್ರತಾಪ್ ಸಿಂಹ ನಾಯಕ್ ಹೇಳಿಕೆ

ಪುತ್ತೂರು: ನೈರುತ್ಯ ಪದವೀಧರರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ದ.ಕ. ಜಿಲ್ಲೆಯಲ್ಲಿ ವಿಶೇಷ ಗಮನಕ್ಕೆ ಪಕ್ಷದ ರಾಜ್ಯಾಧ್ಯಕ್ಷರು ಸೂಚಿಸಿದ್ದಾರೆ. ಗರಿಷ್ಠ ಪ್ರಮಾಣದ ಮತದಾನದೊಂದಿಗೆ ಎರಡೂ ಅಭ್ಯರ್ಥಿಗಳ ಗೆಲುವು ನಮ್ಮದಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ, ಶಿಕ್ಷಕರ ಕ್ಷೇತ್ರದ ದ.ಕ. ಜಿಲ್ಲಾ ಚುನಾವಣಾ ಸಂಚಾಲಕ ಪ್ರತಾಪ್ ಸಿಂಹ ನಾಯಕ್ ಹೇಳಿದರು.

ಪುತ್ತೂರಿನ ಕಲ್ಲೇಗ ಭಾರತ್ ಮಾತಾ ಸಮುದಾಯ ಭವನದಲ್ಲಿ ನೈರುತ್ಯ ಪದವೀಧರ ಮತ್ತು ಶಿಕ್ಷಕರ ಚುನಾವಣೆಗೆ ಸಂಬಂಧಿಸಿ ಆಯೋಜಿಸಲಾದ ಪುತ್ತೂರು ವಿಧಾನಸಭಾ ಕ್ಷೇತ್ರದ ಶಕ್ತಿ ಕೇಂದ್ರಗಳ ಮತ್ತು ಘಟ ನಾಯಕರ ಸಭೆಯಲ್ಲಿ ಅವರು ಮಾತನಾಡಿದರು.ರಾಜ್ಯ ನಾಯಕರು ಕೂಡಾ ಆಡಿಯೋ ಕಾನ್ಸರೆನ್ಸ್ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖರನ್ನು ಸಂಪರ್ಕಿಸಿದ್ದಾರೆ. ಮತದಾರರನ್ನು ಸಂಪರ್ಕಿಸುವ ಕೆಲಸ ಈಗಾಗಲೇ ನಡೆಯುತ್ತಿದೆ. ಈ ಬಾರಿ ಕಳೆದ ಪುತ್ತೂರು ಕ್ಷೇತ್ರದಲ್ಲಿ ಕಳೆದ ಬಾರಿಗಿಂತ 2500 ಮಂದಿ ಪದವೀಧರ ಕ್ಷೇತ್ರದ ಮತದಾರರನ್ನು ಸೇರಿಸಿದ್ದೇವೆ. ಅವರಿಗೆ ಮತದಾನದ ಪ್ರಕ್ರಿಯೆ ಕುರಿತು ತಿಳಿಸಬೇಕು. ಮತದಾನಕ್ಕೆ ಇವಿಎಂ ಇರುವುದಿಲ್ಲ. ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದ ಬೂತ್ ಪ್ರತ್ಯೇಕ ಇರುತ್ತದೆ. ಬೇರೆ ಬೇರೆ ಮತ ಪತ್ರ ಕೊಡುತ್ತಾರೆ ಎಂದ ಅವರು ಮತದಾನ ಬೆಳಗ್ಗೆ 8 ರಿಂದ ಸಂಜೆ ಗಂಟೆ 4 ರ ತನಕ ಮಾತ್ರ ಇರುತ್ತದೆ. ಇದನ್ನು ಮತದಾರರಿಗೆ ತಿಳಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

pratap simha nayak

ವೇದಿಕೆಯಲ್ಲಿ ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪದವೀಧರ ಕ್ಷೇತ್ರದ ಜಿಲ್ಲಾ ಚುನಾವಣಾ ಸಂಚಾಲಕ ಹರೀಶ್ ಪೂಂಜಾ, ಸಹ ಸಂಚಾಲಕ ವಿಕಾಸ್ ಪುತ್ತೂರು, ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್, ಪ್ರಮುಖರಾದ ಅರುಣ್ ಕುಮಾರ್ ಪುತ್ತಿಲ, ಪುರುಷೋತ್ತಮ ಮುಂಗ್ಲಿಮನೆ, ಯುವರಾಜ್ ಪೆರಿಯತ್ತೋಡಿ ಉಪಸ್ಥಿತರಿದ್ದರು.

bharath bank

Related Posts

Leave a Reply

Your email address will not be published.