ಮೂಡುಬಿದಿರೆ ವಿದ್ಯಾಗಿರಿಯ ಆಳ್ವಾಸ್ ಕ್ಯಾಂಪಸ್ ನಲ್ಲಿ ನಡೆಯಲಿರುವ “ಆಳ್ವಾಸ್ *ಪ್ರಗತಿ” ಬೃಹತ್ ಉದ್ಯೋಗ ಮೇಳದ ಪೂರ್ವಭಾವಿ ಸಭೆ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮೂಡುಬಿದಿರೆ ವತಿಯಿಂದ ಆಗಸ್ಟ್ 01 ಮತ್ತು 02 ತಾರೀಖಿನಂದು ಮೂಡುಬಿದಿರೆ
ವಿದ್ಯಾಗಿರಿಯ ಆಳ್ವಾಸ್ ಕ್ಯಾಂಪಸ್ ನಲ್ಲಿ ನಡೆಯಲಿರುವ “ಆಳ್ವಾಸ್ ಪ್ರಗತಿ” ಬೃಹತ್ ಉದ್ಯೋಗ ಮೇಳದ ಪೂರ್ವಭಾವಿಯಾಗಿ ಇಂದು ದಿನಾಂಕ 22-07-2025 ರಂದು ಹಿಂದೂ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆದ “ಉದ್ಯೋಗ ಮಾಹಿತಿ ಶಿಬಿರ” ಕಾರ್ಯಕ್ರಮವನ್ನು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು

ಈ ಸಂದರ್ಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವೇಕ್ ಆಳ್ವ, ವಿದ್ಯಾವರ್ಧಕ ಸಂಘ (ರಿ.) ಶಿರ್ವ ಇದರ ಆಡಳಿತಾಧಿಕಾರಿಗಳಾದ ವೈ ಭಾಸ್ಕರ್ ಶೆಟ್ಟಿ, ಪ್ರಾಂಶುಪಾಲರಾದ ಮಿಥುನ್ ಚಕ್ರವರ್ತಿ, ಸುಂದರ್ ಮೇರಾ, ಮುಖ್ಯ ಶಿಕ್ಷಕರಾದ ವಸಂತಿ, ನಿವೃತ್ತ ಮುಖ್ಯ ಶಿಕ್ಷಕರಾದ ಶಕಿಲಾ ಉಪಸ್ಥಿತರಿದ್ದರು.