ಕಾಪು ತಾಲೂಕು ಏಳನೇ ಸಾಹಿತ್ಯ ಸಮ್ಮೇಳನ ಪ್ರಯುಕ್ತ ಹೆಜಮಾಡಿಯ ಬಿಲ್ಲವ ಸಂಘದಲ್ಲಿ ಪೂರ್ವಭಾವಿ ಸಭೆ

ಹೆಜಮಾಡಿ:ಏಳನೇ ಕಾವು ತಾಲೂಕು ಸಾಹಿತ್ಯ ಸಮ್ಮೇಳನವು ನ. 15 ರಂದು ಹೆಜಮಾಡಿಯ ಬಿಲ್ಲವ ಸಂಘದಲ್ಲಿ ನಡೆಯಲಿದ್ದು,ಆ ಪ್ರಯುಕ್ತ ಇಂದು ಹೆಜಮಾಡಿಯ ಬಿಲ್ಲವ ಸಂಘದಲ್ಲಿ ಪೂರ್ವಭಾವಿ ಸಭೆಯು ನಡೆಯಿತು.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅವರು ಮಾತನಾಡಿ ಸಾಹಿತ್ಯ ಸಮ್ಮೇಳನ ಯಶಸ್ವಿ ಗೊಳಿಸೋಣ ಹಾಗೂ
ಸಾಮಾಜಿಕ ನ್ಯಾಯ, ಪ್ರತಿಭಾ ನ್ಯಾಯ, ಪ್ರಾದೇಶಿಕ ನ್ಯಾಯವನ್ನು ಪ್ರತಿಪಾದಿ ಸುತ್ತಲೇ ಹಿಂದಿನ ಕಾಪು ತಾಲೂಕು ಸಮ್ಮೇಳನಗಳನ್ನು ನಡೆಸಿದ್ದಾರೆ. ಈ ವರೆಗೆ ಒಟ್ಟು 91 ಸಮ್ಮೇಳನ ಗಳು ಕಳೆದ 12 ವರ್ಷಗಳಲ್ಲಿ ನಡೆದಿವೆ.
ಹೆಜಮಾಡಿಯಲ್ಲಿ ಹಿರಿಯರೆಡೆಗೆ ನಮ್ಮ ನಡಿಗೆಯ ಕಾರ್ಯಕ್ರಮದಲ್ಲಿ 150 ಹಿರಿಯರನ್ನು ನಾವು ತಲುಪಿದ್ದೇವೆ. ಪರಸ್ಪರ ಚರ್ಚಿಸಿ ಸುಂದರ ಕನ್ನಡದ ಹಬ್ಬ ನಡೆಯಲಿ ಎಂದು ಅವರು ಹೇಳಿದರು.

ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷ ಮೋಹನ್‌ದಾಸ್ ಹೆಜಮಾಡಿ, ಹೆಜಮಾಡಿ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ದಯಾನಂದ ಹೆಜಮಾಡಿ, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಹೆಜಮಾಡಿ, ಹೆಜಮಾಡಿ ಗ್ರಾ.ಪಂ. ಅಧ್ಯಕ್ಷೆ ರೇಶಾ ಮೆಂಡನ್, ಉಪಾಧ್ಯಕ್ಷ ಮೋಹನ್ ಸುವರ್ಣ, ದೇವದಾಸ ಹೆಬ್ಬಾರ್ ಮತ್ತಿತರರು ಉಪಸ್ಥಿತರಿದ್ದರು.

ಸಮ್ಮೇಳನದ ಯಶಸ್ಸಿಗೆ ನಾನಾ ಸಮಿತಿಗಳನ್ನು ರಚಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ತಾಲೂಕು ಪರಿಷತ್ ಅಧ್ಯಕ್ಷ ಪುಂಡಲೀಕ ಮರಾಶೆ ಸ್ವಾಗತಿಸಿದರು. ವಿದ್ಯಾಧರ ಪುರಾಣಿಕ್ ಪ್ರಾಸ್ತಾವಿಕ ಮಾತನಾಡಿದರು.

ಸಮಿತಿ ರಚನೆ: ಕಾರ್ಯಾಧ್ಯಕ್ಷ ದಯಾನಂದ ಹೆಜಮಾಡಿ, ಗೌರವಾಧ್ಯಕ್ಷರು ಗುರ್ಮೆ ಸುರೆಣ್ ಶೆಟ್ಟಿ, ರೇಶ್ಚಾ ಎ. ಮೆಂಡನ್, ಮೋಹನ್‌ದಾಸ್ ಹೆಜ ಮಾಡಿ, ಉಪಾಧ್ಯಕ್ಷರು: ಮೋಹನ್ ಸುವರ್ಣ, ಶೇಖರ್ ಹೆಜಮಾಡಿ, ಸಂಜೀವ ಟಿ, ಹರೀಶ್ ಹೆಜ್ಮಾಡಿ.ಕಾರ್ಯದರ್ಶಿ:ಪ್ರಾಣೇಶ್ ಹೆಜಮಾಡಿ,ಜತೆ ಕಾರ್ಯದರ್ಶಿ: ಪವಿತ್ರಾ ಗಿರೀಶ್,ಮೆರವಣಿಗೆ ಸಂಚಾಲಕರು ಭರತ್ ಕಾಂಚನ್ ಮತ್ತು ಸನಾ ಇಬ್ರಾಹಿಂ

Related Posts

Leave a Reply

Your email address will not be published.