ಸಮೃದ್ಧ ಬೈಂದೂರು ವತಿಯಿಂದ ಪ್ರೇರಣಧಾರೆ -ನಿವೃತ್ತ ಶಿಕ್ಷಕರ ಸಮಾಗಮ ಕಾರ್ಯಕ್ರಮ
ರೈತ ಸಿರಿ ಸಭಾಭವನ ಉಪ್ಪುಂದ ಇಲ್ಲಿ ಜರುಗಿತು. ” ಶಿಕ್ಷಕರೆಂದರೆ ನಿವೃತ್ತಿ ಇಲ್ಲದವರು, ಅವರು ಸಮಾಜಕ್ಕೆ ಸದಾಕಾಲ ಬೆಳಕು ನೀಡುವ ದೀಪಗಳು” ಎನ್ನುವ ಪರಿಕಲ್ಪನೆ ಅಡಿಯಲ್ಲಿ, ಬೈಂದೂರು ಕ್ಷೇತ್ರ ವ್ಯಾಪ್ತಿಯ ನಿವೃತ್ತ ಶಿಕ್ಷಕರ ವಿಶ್ರಾಂತ ಬದುಕು ಮೆಲುಕು ಹಾಕುವ ಉದ್ದೇಶದಿಂದ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರ ಕಲ್ಪನೆಯೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಯಮಿಗಳಾದ ಗೋಕುಲ್ ಶೆಟ್ಟಿ ಉದ್ಘಾಟಿಸಿ ಈ ವಿಶೇಷ ಕಾರ್ಯಕ್ರಮವು ದೇಶದ ಭವಿಷ್ಯ ರೂಪಿಸುವ ಶಿಕ್ಷಕರನ್ನು ಸ್ಮರಿಸುವ ಮೂಲಕ ಅರ್ಥಪೂರ್ಣವೆನಿಸಿದೆ ಎಂದು ಅಭಿಪ್ರಾಯಪಟ್ಟರು. ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್ ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಉದ್ಘಾಟನೆಯ ನಂತರ ” ವೃತ್ತಿ ಮತ್ತು ಪ್ರವೃತ್ತಿ ” ಎಂಬ ಅವಧಿಯನ್ನು ಶ್ರೀ ದಿವಾಕರ್ ಶೆಟ್ಟಿ, ವಿಶ್ರಾಂತ ಉಪನಿರ್ದೇಶಕರು ಉಡುಪಿ ಇವರು ನಡೆಸಿಕೊಟ್ಟರು. ಹಿರಿಯ ನ್ಯಾಯವಾದಿಗಳಾದ ಎ.ಎಸ್. ಎನ್. ಹೆಬ್ಬಾರ್ ಅವರು ” ನಿವೃತ್ತಿ ನಂತರದ ಉಲ್ಲಾಸಮಯ ಜೀವನ” ಎಂಬ ಅವಧಿಯಲ್ಲಿ ನಿವೃತ್ತಿ ಕೇವಲ ವೃತ್ತಿಗೆ ಮಾತ್ರ ಬದುಕಿಗೆ ಅಲ್ಲ ಎಂಬ ಸಾರಾಂಶದ ಜೊತೆ ವಿಚಾರ ಮಂಡಿಸಿದರು. ಬೈಂದೂರು ಶಾಸಕರಾದ ಶ್ರೀ ಗುರುರಾಜ ಗಂಟಿಹೊಳೆ ಯವರು ಸಭೆಯಲ್ಲಿ ಭಾಗಿಯಾದ ನಿವೃತ್ತ ಶಿಕ್ಷಕರ ಜೊತೆ ” ಶಿಕ್ಷಣ ಕ್ಷೇತ್ರದಲ್ಲಿ ಇರುವ ಸವಾಲು ಮತ್ತು ವಿಶ್ರಾಂತ ಜೀವನದ ಮೆಲುಕು” ಸಂವಾದವನ್ನು ನಡೆಸಿದರು. ರೇಡಿಯೋ ಕುಂದಾಪುರ ನಿರ್ದೇಶಕರಾದ ಶ್ರೀಮತಿ ಜ್ಯೋತಿಯವರು ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸಮಾರಂಭದಲ್ಲಿ ಭಾಗಿಯಾದ ಎಲ್ಲಾ ನಿವೃತ್ತ ಶಿಕ್ಷಕರಿಗೆ ಶಾಸಕರು ಸನ್ಮಾನಿಸಿದರು. ಈ ಸಮಾಗಮವು ಕೇವಲ ಒಂದು ಔಪಚಾರಿಕ ಭೇಟಿಯಾಗದೆ, ನಮ್ಮ ಗುರುಗಳ ಬದುಕಿನ ಜ್ಞಾನ ಮತ್ತು ಅನುಭವದ ದೃಷ್ಟಿಕೋನಗಳನ್ನು ಅರ್ಥಮಾಡಿಕೊಳ್ಳುವ ಒಂದು ಸುಂದರ ಪ್ರಯತ್ನವಾಗಿತ್ತು ಎಂದು ಶಾಸಕರು ಅಭಿಪ್ರಾಯಪಟ್ಟರು.
.ಶಿಕ್ಷಕರಾದ ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಸುಧಾಕರ್. ಪಿ. ಕಾರ್ಯಕ್ರಮದ ಪ್ರಸ್ತಾವಿಕಾ ಮಾತನಾಡಿದರು. ಶ್ರೀಧರ್ ವಸ್ರೆ ವಂದಿಸಿದರು. ರಾಘವೇಂದ್ರ. ಡಿ ಅವರು ಸ್ವಾಗತಿಸಿದರು.


















