ಪುದುಚೇರಿಯಲ್ಲಿ ಉಗ್ರ ಚಟುವಟಿಕೆಗೆ ಕಡಿವಾಣ ಪ್ರವಾಸಿಗರ ಸುರಕ್ಷತೆಗೆ ಆದ್ಯತೆ : ಗೃಹಸಚಿವ ಎ. ನಮಸ್ಸಿವಾಯಂ
ಸುರತ್ಕಲ್: “ಪುದುಚೇರಿ ಸರಕಾರ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು ವಿದೇಶಿಗರೂ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಉಗ್ರ ಚಟುವಟಿಕೆಗೆ ಮೇಲೆ ಹದ್ದಿನ ಕಣ್ಣಿರಿಸಲಾಗಿದ್ದು ಸುರಕ್ಷತಾ ಕ್ರಮಕ್ಕೆ ಒತ್ತು, ಕಾನೂನು ಸುವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ” ಎಂದು ಪುದುಚೇರಿ ಗೃಹಸಚಿವ ಎ. ನಮಸ್ಸಿವಾಯಂ ಅವರು ಹೇಳಿದರು.
ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ ಶ್ರೀ ಕಟೀಲೇಶ್ವರಿ ಕಲ್ಲಿದ್ದಲು ನಿರ್ವಹಣಾ ಘಟಕಕ್ಕೆ ಭೇಟಿ ನೀಡಿದ ಅವರು ಕಲ್ಲಿದ್ದಲು ಉದ್ಯಮದ ಕುರಿತು ಮಾಹಿತಿ ಪಡೆದುಕೊಂಡರು.
ಪುದುಚೇರಿ ಸಣ್ಣ ರಾಜ್ಯವಾಗಿದ್ದು ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಹೆಚ್ಚೆಚ್ಚು ಆಕರ್ಷಿಸುತ್ತಿದೆ. ಕರ್ನಾಟಕದ ಯುವ ಉದ್ಯಮಿಗಳು ಅಲ್ಲಿ ಬಂದು ಪ್ರವಾಸೋದ್ಯಮ, ಐಟಿ, ಎಲೆಕ್ಟ್ರಿಕ್ ವೆಹಿಕಲ್ ಮತ್ತಿತರ ಉದ್ಯಮವನ್ನು ಸ್ಥಾಪಿಸುವುದಾದರೆ ಸರಕಾರ ಎಲ್ಲಾ ರೀತಿಯ ನೆರವು ಕಲ್ಪಿಸುವುದಾಗಿ ಇದೇ ಸಂದರ್ಭದಲ್ಲಿ ಸಚಿವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾಗೆ ಹೆಚ್ಚಿನ ಗಮನ ನೀಡಿದ್ದೇವೆ.ಅವರ ನಾಯಕತ್ವದಲ್ಲಿ ದೇಶವು ಉತ್ತಮ ಅಭಿವೃದ್ಧಿ ಹೊಂದುತ್ತಿದೆ ಎಂದು ನುಡಿದರು.
ಕಟೀಲೇಶ್ವರಿ ಕೋಲ್ ಕಾಪೆರ್Çೀರೇಷನ್ ಪಾಲುದಾರರಾದ ನಾಗರಾಜ್ ಅಮೀನ್, ಮಂಜುನಾಥ್ ನೋಟಗಾರ್, ಬಾಲಮುರಳಿ, ಗಣೇಶ್, ಅಶ್ರಫ್ ಸಿಬ್ಬಂದಿಯಾದ ಶಿವು, ಮುಹಮ್ಮದ್ ರಿಲ್ವಾನ್, ಶಿವಕುಮಾರ್ ನೋಟಗಾರ್, ಶ್ರುತಿ, ಶಬೀರ್, ದೇವು ಮತ್ತಿತರರು ಉಪಸ್ಥಿತರಿದ್ದರು.



















