ಪುತ್ತೂರು: ಈಶ್ವರಮಂಗಲದ ಮೇನಾಲ ದರ್ಗಾಗೆ ಶಾಸಕ ಅಶೋಕ್ ರೈ ಭೇಟಿ
ಪುತ್ತೂರು: ಈಶ್ವರಮಂಗಲ ಮೇನಾ ಮಖಾಂ ದರ್ಗಾ ಶರೀಫ್‌ಗೆ ಪುತ್ತೂರು ಶಾಸಕರಾದ ಅಶೋಕ್ ರೈ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ದರ್ಗಾದ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ನಡೆದಿತ್ತು. ಈ ಸಂದರ್ಭದಲ್ಲಿ ಮಸೀದಿಯ ಧರ್ಮಗುರುಗಳಾದ ಜಮಾಲುದ್ದೀನ್ ತಂಙಳ್ ದುಗ್ಗಲಡ್ಕ, ನೆಟ್ಟಣಿಗೆ ಮುಡ್ನೂರು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಮೂಸಾನ್, ನೆಟ್ಟನಿಗೆ ಮುಡ್ನೂರು ಗ್ರಾಪಂ ಸದಸ್ಯರಾದ ಶ್ರೀರಾಂ ಪಕ್ಕಳ, ಅಕ್ರಮಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು ಮೊದಲಾದವರು ಭಾಗವಹಿಸಿದ್ದರು.