ಪುತ್ತೂರು: ಪೆರ್ನಾಜೆ ಬಳಿ ಕೃಷಿತೋಟಕ್ಕೆ ಒಂಟಿಸಲಗ ದಾಳಿ, ತೋಟ ನಾಶ

ಪುತ್ತೂರು : ಪೆರ್ನಾಜೆ ಬಳಿ ಕೃಷಿತೋಟಕ್ಕೆ ಒಂಟಿಸಲಗ ದಾಳಿ ಮಾಡಿದ್ದು, ಅಪಾರ ನಷ್ಟ ಸಂಭಸಿದೆ ತೋಟದಲ್ಲಿದ್ದ ಅಡಿಕೆ,ಬಾಳೆ,ತೆಂಗು ಗಿಡಗಳು ನಾಶಗೊಂಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪುತ್ತೂರು ಕಾಡಂಚಿನ ಪ್ರದೇಶಗಳಲ್ಲಿ ಕಾಡಾನೆಗಳ ಉಪಟಳ ತೀವ್ರಗೊಂಡಿದ್ದು ಜನತೆ ಅದರಲ್ಲೂ ಕೃಷಿಕರು ಆನೆ ದಾಳಿಯಿಂದ ಕಂಗಲಾಗಿದ್ದಾರೆ. ಪುತ್ತೂರಿನ ಪೆರ್ನಾಜೆ ಎಂಬಲ್ಲಿ ಬುಧವಾರ ತಡರಾತ್ರಿ ಕಾಡಾನೆ ಯೋಟಕ್ಕೆ ದಾಳಿ ನಡೆಸಿದ್ದು ಅಪಾರ ಪ್ರಮಾಣದಲ್ಲಿ ಗಿಡ ಮರಗಳನ್ನು ನಾಶ ಮಾಡಿದೆ.

ಈ ಭಾಗದಲ್ಲಿ ಕಾಡಾನೆ ಇದೇ ಮೊದಲಬಾರಿ ದಾಳಿ ನಡೆಸಿದೆ.ಕಾಡಾನೆ ದಾಳಿಯಿಂದ ತೋಟದಲ್ಲಿದ್ದ ಅಡಿಕೆ,ಬಾಳೆ,ತೆಂಗು ಗಿಡಗಳು ಸರ್ವ ನಾಶ ವಾಗಿದೆ. ಕೃಷಿಕರು ಆತಂಕಕ್ಕೊಳಗಾಗಿದ್ದು,ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.

Related Posts

Leave a Reply

Your email address will not be published.