ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಳದ ವಾರ್ಷಿಕ ಜಾತ್ರೋತ್ಸವ ಪ್ರಯುಕ್ತ ಹೊರೆಕಾಣಿಕೆ ಕಚೇರಿ ಉದ್ಘಾಟನೆ
ಪುತ್ತೂರಿನ ಇತಿಹಾಸ ಪ್ರಸಿದ್ಧ ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಹೊರೆಕಾಣಿಕೆಯ ಕಚೇರಿ ಉದ್ಘಾಟನಾ ಕಾರ್ಯಕ್ರಮ ಜರುಗಿತು.
ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನ ಪ್ರಧಾನ ಅರ್ಚಕರಾದ ವಿ.ಎಸ್ ಭಟ್ ದೀಪ ಬೆಳಗಿಸುವ ಮೂಲಕ ಹೊರೆ ಕಾಣಿಕೆ ಕಚೇರಿಯನ್ನು ಉದ್ಘಾಟಿಸಿದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪಕರಾದ ಹರೀಶ್ ಶೆಟ್ಟಿ ಅವರ ನೇತೃತ್ವದಲ್ಲಿ ಕಚೇರಿ ಪ್ರಾರಂಭಗೊಂಡಿತು.
ಈ ಸಂದರ್ಭದಲ್ಲಿ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಈಶ್ವರ ಭಟ್ ಪಂಜಿಗುಡ್ಡೆ, ದಿನೇಶ್ ಪಿ.ವಿ ಸುದೇಶ್ ಶೆಟ್ಟಿ ಕೋಡಿಂಬಾಡಿ ಶಾಂತಿನಗರ, ನವೀನ್ ನೈಕ್ ಬೆದ್ರಾಳ, ಸುಭಾಶ್ ರೈ ಬೆಳ್ಳಿ ಪಾಡಿ, ಉಮೇಶ್ ಆಚಾರ್ಯ, ನಳಿನಿ ಪಿ ಶೆಟ್ಟಿ ಡ್ಯಾಶ್ ಮಾರ್ಕೆಟಿಂಗ್, ಯನ ರೈ ನೆಲ್ಲಿಕಟ್ಟೆ, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ರವಿ ಪ್ರಸಾದ್ ಶೆಟ್ಟಿ ಬನ್ನೂರು, ಅರವಿಂದ್ ಪೆರಿಗೇರಿ ಉಪಸ್ಥಿತರಿದ್ದರು.