ಪುತ್ತೂರು:ವಿದ್ಯಾಸಮೃದ್ಧಿ ಲೋಕಾರ್ಪಣೆ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಮೊದಲ Tuition App ಆಗಿರುವ Vidyasamruddhi Tuition App ಪುತ್ತೂರಿನ Rotary GL Sabhabhavanaದಲ್ಲಿ ಲೋಕಾರ್ಪಣೆಗೊಂಡಿತು.

ವಿದ್ಯಾಸಮೃದ್ಧಿಯ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ SRK Laddersನ ಕೇಶವ ಅಮೈ ಕಲಾಯಿಗುತ್ತು ಅವರು ಮಾತನಾಡಿ ಇಂದು 10ನೇ ತರಗತಿಯ ಮಕ್ಕಳಿಗೆ ನೀವು ಪಾಠಗಳನ್ನು App ಮೂಲಕ ಕೊಟ್ಟಿದ್ದೀರಿ. ಮುಂದೆ ಸಾರ್ವಜನಿಕರಿಗೆ ಉಪಯೋಗವಾಗುವ Spoken English ಮಸ್ತು ಇತರ ಭಾಷೆಗಳನ್ನು ಸಹ ನೀಡುವ ಕೆಲಸ ಮಾಡಿ ಎಂದು ಸಲಹೆ ನೀಡಿದರು.

VIDYASAMRUDDHI ICON AWARD 2025 ಪ್ರದಾನ
ಸುಬ್ರಹ್ಮಣ್ಯದಲ್ಲಿ ಸಮಾಜ ಸೇವೆಯ ಮೂಲಕ ಪ್ರಖ್ಯಾತರಾಗಿರುವ ಡಾ. ರವಿ ಕಕ್ಕೆಪದವು ಅವರಿಗೆ VIDYASAMRUDDHI ICON AWARD 2025 ನ್ನು ಪ್ರದಾನ ಮಾಡಲಾಯಿತು. ಸನ್ಮಾನ ಸ್ವೀಕರಿಸಿದ ರವಿಯವರು ವಿದ್ಯಾಸಮೃದ್ಧಿಯು ಬಡಮಕ್ಕಳ ಆಶಾಕಿರಣವಾಗಿದೆ ಎಂದರು.

ರಾಶಿಯವರಿಗೆ ವಿಶೇಷ ಸನ್ಮಾನ
ಕಾರ್ಯಕ್ರಮದಲ್ಲಿ ಕಾಣಿಯೂರಿನ ರಾಶಿ ಕಾಂಪ್ಲೆಕ್ಸ್ ನ ಮಾಲಕರಾದ ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು. ವಿದ್ಯಾಸಮೃದ್ಧಿಯ ಕನಸುಗಾರ ಹರಿಪ್ರಸಾದ್ ಬಿ. ಅವರು ಕಳೆದ 15 ವರ್ಷಗಳಿಂದ ನಡೆಸುತ್ತಿರುವ ಸ್ಮಾರ್ಟ್ ಟ್ಯೂಷನ್ ತರಗತಿಗಳಿಗೆ ತನ್ನ ಕಟ್ಟಡವನ್ನು ಅತಿ ಕಡಿಮೆ ದರದಲ್ಲಿ ಬಾಡಿಗೆಗೆ ನೀಡಿ ಇವರು ಬೆಂಬಲ ನೀಡುತ್ತಿದ್ದಾರೆ.

Vidyasamruddhi Work Book ಬಿಡುಗಡೆ
ವಿದ್ಯಾಸಮೃದ್ಧಿ ಟ್ಯೂಷನ್ ಆಪ್ ನ ಜೊತೆಗೆ ಸುಮಾರು ಒಂದು ಸಾವಿರ ರೂಪಾಯಿ ಮೌಲ್ಯದ Work Book ಸಹ ಚಂದಾದಾರರಿಗೆ ದೊರೆಯಲಿದೆ.. ಆ Work Bookನ್ನು ಬಿಡುಗಡೆಗೊಳಿಸಿ ಮಾತನಾಡಿದ ಸರಸ್ವತಿ ವಿದ್ಯಾಮಂದಿರದ ಸಂಸ್ಥಾಪಕರಾದ ಅವಿನಾಶ್ ಕೊಡಂಕಿರಿಯವರು ಮಾತನಾಡಿ ಡಿಜಿಟಲ್ ಯುಗಕ್ಕೆ ಹೊಂದಿಕೊಳ್ಳುವ ಮಾದರಿಯಲ್ಲಿ ರೂಪುಗೊಂಡ ವಿದ್ಯಾಸಮೃದ್ಧಿಯು ಯಶಃ ಕಾಣಲಿ ಎಂದು ಹಾರೈಸಿ ಅವರ ಸಂಪೂರ್ಣ ಬೆಂಬಲ ಘೋಷಿಸಿದರು.

ಸೋತು ಗೆದ್ದವರಿಗೆ ಅಭಿನಂದನೆ – ವಿಶೇಷ ಕಾರ್ಯಕ್ರಮ
2025ರ ಮಾರ್ಚ್ ನಲ್ಲಿ ಪರೀಕ್ಷೆ 1ರಲ್ಲಿ ಅನುತ್ತೀರ್ಣಗೊಂಡು ಪರೀಕ್ಷೆ 2ರಲ್ಲಿ ತೇರ್ಗಡೆಯಾಗಿ ಸಾಧನೆ ಮಾಡಿದ ಕಾಣಿಯೂರು ಸ್ಮಾರ್ಟ್ ಟ್ಯೂಷನ್ ತರಗತಿಯ ಯಶಸ್ ಎಂ. ಪಿ. ಮತ್ತು ಬೆಳ್ಳಾರೆ ಜ್ಞಾನದೀಪ ತರಬೇತಿ ಕೇಂದ್ರದ ರೋಷನ್ ಫೆರ್ನಾಂಡಿಸ್ ಇವರನ್ನು ಅಭಿನಂದಿಸಿ ಗೌರವಿಸಲಾಯಿತು.

ಮೊದಲ ಚಂದಾದಾರಿಕೆ
ವಿದ್ಯಾಸಮೃದ್ಧಿಯ ಮೊದಲ ಚಂದಾದಾರಿಕೆಯನ್ನು ಪಾಲ್ತಾಡಿ ಬೂಡಿಯಾರಿನ ನ್ಯಾಯವಾದಿ ಹರೀಶ್ ಅವರ ಪುತ್ರ ವರುಣ್ ಬಿ. ಅವರಿಗೆ ನೀಡಲಾಯಿತು

ವಿದ್ಯಾಸಮೃದ್ಧಿಯ ತಂಡದ ಸದಸ್ಯರಿಗೆ ಗುರುತಿನ ಕಾರ್ಡ್ ನೀಡಿಕೆ ಮತ್ತು ಗೌರವ
ಅತಿಥಿಯಾಗಿದ್ದ ಪುತ್ತೂರು ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷರಾದ ಅಬ್ರಹಾಂ ಎಸ್. ಎ. ಅವರು ಮಾತನಾಡಿ ಸಕಾಲಿಕವಾದ ಕಲಿಕಾ ಉಪಕರಣವೊಂದನ್ನು ನೀಡಿದ ವಿದ್ಯಾಸಮೃದ್ಧಿಯನ್ನು ಅಭಿನಂದಿಸಿ ಶುಭ ಹಾರೈಸಿ ವಿದ್ಯಾಸಮೃದ್ಧಿಯ ತಂಡದ ಸದಸ್ಯರಿಗೆ ಗುರುತಿನ ಕಾರ್ಡ್ ನೀಡಿ ಗೌರವಿಸಿದರು.

ವಿದ್ಯಾಸಮೃದ್ಧಿ ಕರಪತ್ರ ಬಿಡುಗಡೆ
ಸುಂದರ ಮಾತು ಅರ್ಥಪೂರ್ಣವಾದ ವಿದ್ಯಾಸಮೃದ್ಧಿ ಕರಪತ್ರವನ್ನು ವಿದ್ಯಾಸಮೃದ್ಧಿಯ ಮುಖ್ಯ ಸಲಹೆಗಾರರಾದ ಪ್ರೊ. ಪದ್ಮನಾಭರು ನೆರವೇರಿಸಿ ಮಾತನಾಡಿ ವಿದ್ಯಾಸಮೃದ್ಧಿಯು ಅತ್ಯಂತ ಅಗತ್ಯದ ಸಮಯದಲ್ಲಿ ಲೋಕಾರ್ಪಣೆಗೊಂಡಿದೆ ಎಂದು ಅಭಿಪ್ರಾಯಪಟ್ಟರು.

ವಿದ್ಯಾಸಮೃದ್ಧಿಯ ಪ್ರಧಾನ ಪೋಷಕರಾದ ವಿಶಾಲಾಕ್ಷಿ ನೆಟ್ಟಾರು ಅವರು ವಿದ್ಯಾಸಮೃದ್ಧಿಯ ಸಾಧಕರನ್ನು ಗೌರವಿಸಿ ಶುಭ ಹಾರೈಸಿದರು.

ವಿಡಿಯೋ ಎಡಿಟಿಂಗ್ ತಂಡದ ದೀಪಿಕಾ ಮತ್ತು ಶ್ರಾವ್ಯ, workbook ತಯಾರಿ ತಂಡದ ಕಾವ್ಯಾ ಮತ್ತು ಕೃತಿಯವರನ್ನು ಗೌರವಿಸಲಾಯಿತು. ಸುಬ್ರಹ್ಮಣ್ಯದ ಶ್ರೀನಾಥ್ app ಅಭಿವೃದ್ಧಿ ಪಡಿಸಿ ನೀಡಿದರು. ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಸುತನ್ ಕೇವಳ ಅವರು launching video ತಯಾರಿಸಿಕೊಟ್ಟಿದ್ದರು.

ಅಧ್ಯಕ್ಷತೆ ವಹಿಸಿದ್ದ ಹರಿಪ್ರಸಾದ್ ಬಿ. ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸರ್ವರನ್ನೂ ಸ್ವಾಗತಿಸಿದರು. ವಿದ್ಯಾಸಮೃದ್ಧಿ ಶಿಕ್ಷಕ ತಂಡದ ಚಂದನಲಕ್ಷ್ಮಿ ಪ್ರಾರ್ಥಿಸಿ ಮಾರ್ಕೆಟಿಂಗ್ ತಂಡದ ಶಶಿಧರ್ ಎಂ. ಜೆ. ಧನ್ಯವಾದ ಸಮರ್ಪಿಸಿದರು. ವಿದ್ಯಾಸಮೃದ್ಧಿಯ ಕಚೇರಿಯ ಮುಖ್ಯ ಪ್ರಬಂಧಕಿ ನಾಗವೇಣಿ ಬಿ. ಅವರು ಸನ್ಮಾನ ಪತ್ರ ವಾಚನ ಮಾಡಿದರು. ವಿದ್ಯಾಸಮೃದ್ಧಿಯ ಪ್ರಧಾನ ಕಾರ್ಯನಿರ್ವಾಹಕ ಅಧಿಕಾರಿ ಸೀತಾರಾಮ ಕೇವಳ ಕಾರ್ಯಕ್ರಮ ನಿರೂಪಿಸಿದರು.

Related Posts

Leave a Reply

Your email address will not be published.