ಪುತ್ತೂರು: ಹಿಂಜಾವೇ ಮುಖಂಡ ಸತೀಶ್ ದಾವಣಗೆರೆ ಬಂಧನಕ್ಕೆ ಖಂಡನೆ
ಪುತ್ತೂರು: ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮದಲ್ಲಿ ಕೋಮು ದ್ವೇಷ ಭಾಷಣ ಮಾಡಿದ ಹಿಂದೂ ಜಾಗರಣ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ್ ಸತೀಶ್ ದಾವಣೆಗೆರೆಯವರನ್ನು ಗೌರಿಬಿದನೂರು ಪೊಲೀಸರು ಬಂಧಿಸಿದನ್ನು ಖಂಡಿಸಿ ಪುತ್ತೂರಿನಲ್ಲಿ ಹಿಂದು ಜಾಗರಣ ವೇದಿಕೆಯ ನೇತೃತ್ವದಲ್ಲಿ ದೊಂದಿ ಹಿಡಿದು ಪ್ರತಿಭಟನೆ ನಡೆಸಿದರು.
ಹಿಂದು ಜಾಗರಣ ವೇದಿಕೆ ಪ್ರಾಂತ ಸಂಪರ್ಕ ಪ್ರಮುಖ್ ಹರೀಶ್ ಶಕ್ತಿನಗರ ಅವರು ಮಾತನಾಡಿ ಹಿಂ.ಜಾ.ವೇ. ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ್ ಸತೀಶ್ ದಾವಣೆಗೆರೆಯುವರು ಅಖಂಡ ಭಾರತ ಸಂಕಲ್ಪ ಕಾರ್ಯಕ್ರಮದಲ್ಲಿ ಸಮಾಜದ ಹಿತದೃಷ್ಟಿಯಿಂದ ಭಾಷಣ ಮಾಡಿದ್ದಾರೆ. ಆದರೆ ಅದನ್ನೇ ಯಾರದ್ದೋ ಒತ್ತಡಕ್ಕೆ ಮಣಿದು 4 ದಿನದ ಬಳಿಕ ಪೊಲೀಸರು ಬಂಧಿಸಿರುವುದು ಅದಲ್ಲದೆ ಸುಮೋಟೋ ಕೇಸು ದಾಖಲಿಸಿರುವುದು ಖಂಡನೀಯ ಎಂದರು.
ಬಜರಂಗದಳ ದಕ್ಷಿಣ ಪ್ರಾಂತ ಸಹ ಸಯೋಜಕ್ ಮುರಳೀಕೃಷ್ಣ ಹಸಂತಡ್ಕ ಅವರು ಮಾತನಾಡಿ ನಮ್ಮ ಅನೇಕ ಸಂಘಟನೆಯ ಮುಖಂಡರ ಮೇಲೆ ಕೇಸು ದಾಖಲಿಸುವ ಮೂಲಕ ತೊಂದರೆ ನೀಡಿದರೆ ಹಿಂದು ಸಮಾಜ ಸಮ್ಮನಿರುವುದಿಲ್ಲ. ಶಾಸ್ತ್ರ ಮತು ಶಸ್ತ್ರದ ಆಧಾರದ ಮೇಲೆ ಬಂದ ಹಿಂದು ಸಮಾಜದ ಮೇಲೆ ದಾಳಿ, ಚೆಲ್ಲಾಟ ಮಾಡುವಾಗ ಅಗತ್ಯ ಬಿದ್ದಾಗ, ಅನಿವಾರ್ಯವಾದಲ್ಲಿ ಹಿಂದು ಸಮಾಜ ಸುಮ್ಮನೆ ಕೂತುಕೊಳ್ಳುವುದಿಲ್ಲ ಎಂದರು.
ನ್ಯಾಯವಾದಿಯಾಗಿರುವ ಹಿಂದು ಜಾಗರಣ ವೇದಿಕೆ ಮುಖಂಡ ಚಿನ್ಮಯ್ ರೈ, ಹಿಂದು ಜಾಗರಣ ವೇದಿಕೆಯ ತಾಲೂಕು ಸಂಚಾಲಕ್ ದಿನೇಶ್ ಪಂಜಿಗ, ಅಜಿತ್ ರೈ ಹೊಸಮನೆ, ಪದ್ಮಶ್ರೀ ಸೋಲಾರ್ ಸಿಸ್ಟಮ್‍ನ ಮಾಲಕ ಸೀತಾರಾಮ ರೈ ಕೆದಂಬಾಡಿಗುತ್ತು, ಯುವವಾಹಿನಿ ಪ್ರಮುಖ್ ಮನೀಶ್ ಬರ?ವ, ಅವಿನಾಶ್ ಪುರುಷರಕಟ್ಟೆ, ಭರತ್ ಈಶ್ವರಮಂಗಲ, ರಾಜೇಶ್ ಪಂಚೋಡಿ, ಪ್ರಜ್ವಲ್ ಈಶ್ವರಮಂಗಲ, ಗಿತೀಶ್ ಅಜ್ಜಿಕಲ್ಲು, ಬಜರಂಗದಳ ನಗರ ಸಂಚಾಲಕ ಜಯಂತ್, ಉಪಾದ್ಯಕ್ಷ ಜಗದೀಶ್ ನೀರ್ಪಾಜೆ ಸೇರಿದಂತೆ ಮೊದಲಾದವರು ಪ್ರತಿಭಟನೆಯನ್ನು ಪಾಲ್ಗೊಂಡಿದ್ದರು.