ಮೇ.24ರಂದು ರೋಹನ್ ಕಾರ್ಪೊರೇಷನ್ ಅರ್ಪಿಸುವ ರೆಡ್ ಎಫ್‌ಎಂ ತುಳು ಫಿಲ್ಮ್ ಅವಾರ್ಡ್ಸ್ ಕಾರ್ಯಕ್ರಮ

ಮಂಗಳೂರು: ರೋಹನ್ ಕಾರ್ಪೊರೇಷನ್ ಪ್ರಸ್ತುತಪಡಿಸುವ ರೆಡ್ ಎಫ್‌ಎಂ ತುಳು ಫಿಲ್ಮ್ ಅವಾರ್ಡ್ಸ್ ಕಾರ್ಯಕ್ರಮವು ಮೇ.24ರಂದು ಸಂಜೆ 5.30ಕ್ಕೆ ನಗರದ ಫಿಝಾ ಬೈ ನೆಕ್ಸಸ್ ಮಾಲ್‌ನಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಮಂಜುನಾಥ ಭಂಡಾರಿ, ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್, ರೋಹನ್ ಕಾರ್ಪೊರೇಷನ್ ಆಡಳಿತ ನಿರ್ದೇಶಕ ರೋಹನ್ ಮೊಂತೇರೋ, ಪಾಲೇಮಾರ್ ಗಾರ್ಡನ್ಸ್ ಆಡಳಿತ ನಿರ್ದೇಶಕ ಕೃಷ್ಣ ಜೆ. ಪಾಲೇಮಾರ್ ಮುಖ್ಯ ಅತಿಥಿಗಳಾಗಿ ಐಡಿಯಲ್ ಐಸ್ ಕ್ರೀಮ್ ಆಡಳಿತ ನಿರ್ದೇಶಕ ಮುಕುಂದ್ ಕಾಮತ್, ಎ.ಜೆ. ಹಾಸ್ಪಿಟಲ್ ಆಡಳಿತ ನಿರ್ದೇಶಕ ಡಾ.ಪ್ರಶಾಂತ್ ಮಾರ್ಲ, ಅಸ್ತ್ರಗ್ರೂಪ್ ಸಿಇಒ ಲಂಚುಲಾಲ್ ಕೆ.ಎಸ್., ವಿ೪ನ್ಯೂಸ್ ಆಡಳಿತ ನಿರ್ದೇಶಕ ಲಕ್ಷ್ಮಣ್ ಕುಂದರ್, ಜಯಲಕ್ಷ್ಮೀ ಬಿಜೈ ಬ್ರಾಂಚ್ ಮುಖ್ಯಸ್ಥ ಯಶ್ವಾಲ್ ಬಿ., ನಿಪ್ಪೋನ್ ಪೈಂಟ್ ಟ್ರೇಡ್ ಮಾರ್ಕೆಟಿಂಗ್ ಮ್ಯಾನೇಜರ್ ನೀರಜ್ ಕುಮಾರ್ ಜಿ.ಎಸ್., ವಿಜಯ ಕರ್ನಾಟಕ ಸ್ಥಾನೀಯ ಸಂಪಾದಕ ಬಿ. ರವೀಂದ್ರ ಶೆಟ್ಟಿ, ಫಿಝಾ ನೆಕ್ಸಸ್ ಮಾಲ್ ಘಟಕ ನಿರ್ದೇಶಕ ಅರವಿಂದ್ ಶ್ರೀವಾಸ್ತವ್, ಉಪಸ್ಥಿತರಿರುವರು.