ನವೆಂಬರ್ 11ರಿಂದ 13ರ ವರೆಗೆ 5ನೇ ಆವೃತ್ತಿಯ ಏರೋಫಿಲಿಯಾ-2022

ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‍ಮೆಂಟ್ ನ ಟೀಮ್ ಚ್ಯಾಲೆಂಜರ್ಸ್ ನ ಬಹು ನಿರೀಕ್ಷಿತ ಉತ್ಸವಗಳಲ್ಲಿ ಒಂದಾದ 5 ನೇ ಆವೃತ್ತಿಯ ಏರೋಫಿಲಿಯಾ 2022 ನವೆಂಬರ್ 11ರಿಂದ 13ವರಗೆ ನಡೆಯಲಿದೆ ಎಂದು ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ಮುಖ್ಯಸ್ಥರಾದ ಡಾ. ಅನುಷ್ ಬೇಕಲ್ ತಿಳಿಸಿದರು.

ಅವರು ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಏರೋಫಿಲಿಯಾ ಮೂರು ದಿನಗಳ ರಾಷ್ಟ್ರೀಯ ಮಟ್ಟದ ಉತ್ಸವ ನಡೆಯಲಿದ್ದು, ನ. 11ರಂದು ಬೆಳಗ್ಗೆ 10.30ಕ್ಕೆ ಉದ್ಘಾಟನೆ ಗೊಳ್ಳಲಿದೆ ಎಂದರು. ಇದು ಹಲವಾರು ಉದಯೋನ್ಮುಖ ಎಂಜಿನಿಯರ್‍ಗಳು ಮತ್ತು ನವೋದ್ಯಮಿಗಳಿಗೆ ಮತ್ತು ಅವರ ನವೀನ ಚಿಂತನೆಗಳಿಗೆ ರೆಕ್ಕೆಯನ್ನು ನೀಡಿದೆ. ಈ ಉತ್ಸವವು ಯುವ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಅದ್ಭುತಗಳಿಂದ ರೋಮಾಂಚಿತಗೊಳಿಸಲು ಮತ್ತು ಗಣ್ಯ ವ್ಯಕ್ತಿಗಳೊಂದಿಗೆ ಸಂವಹನ ನಡೆಸಲು ಒಂದು ಅವಕಾಶವಾಗಿದೆ. ಏರೋಫಿಲಿಯಾ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ವೇದಿಕೆಯನ್ನು ಒದಗಿಸುವುದಲ್ಲದೇ, ಸಾಮಾಜಿಕ ಮಾನ್ಯತೆಯನ್ನು ಪಡೆಯಲು ಮತ್ತು ವೃತ್ತಿಪರ ಸಂಪರ್ಕವನ್ನು ವಿಸ್ತರಿಸಲು ಉತ್ತಮ ಮಾರ್ಗವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರೊ. ಚಂದ್ರ ಸಿಂಗ್, ಪ್ರಜ್ವಲ್, ರಚನಾ, ಕಾರ್ಯಕ್ರಮದ ಸಂಯೋಜಕರಾದ ಅಭಿನವ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.