ಸಂಪಾಜೆ: ಆಟಿ ಕೂಟ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಸಂಪಾಜೆ ಗ್ರಾಮ ಪಂಚಾಯತ್ ಶ್ರೀ ವಿಷ್ಣು ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಸ್ತ್ರೀ ಶಕ್ತಿ ಸಂಘಗಳು ಹಾಗೂ ಆದರ್ಶ ಮಹಿಳಾ ಸಮಾಜ ಇದರ ಜಂಟಿ ಆಶ್ರಯದಲ್ಲಿ ಆಟಿ ಕೂಟ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ನಡೆಯಿತು ಕಾರ್ಯಕ್ರಮವನ್ನು ನಿವೃತ್ತ ಉಪನ್ಯಾಸಕರು ಚಿಂತಕರಾದ ಚಿದಾನಂದ ಮಾಸ್ಟರ್ ಚೆನ್ನೆಮಣೆ ಆಟ ಆಡುವ ಮೂಲಕ ಉದ್ಘಾಟಿಸಿ, ಆಟಿ ಕೂಟ ಕಾರ್ಯಕ್ರಮ ಉತ್ತಮವಾಗಿ ಸಂಘಟಿಸಿದ್ದೀರಿ ಎಲ್ಲಾ ಸಮಯದಲ್ಲೂ ಒಳ್ಳೆಯ ಪದಾರ್ಥ ಸೇವನೆ ಮಾಡಿ ಒಳ್ಳೆಯ ಕೆಲಸ ಮಾಡಿ ಸಮಾಜ ಕಟ್ಟುವ ಕೆಲಸ ಮಾಡೋಣ ಪರಸ್ಪರ ಪ್ರೀತಿ ವಿಶ್ವಾಸ ಬೆಳೆಸುವ ಒಳ್ಳೆಯ ಪ್ರಜೆಗಳಾಗಿ ಬಾಳೋಣ ಎಂದರು. ಅರೋಗ್ಯ ಶಿಕ್ಷಣ ಅಧಿಕಾರಿ ಪ್ರಮೀಳಾ ಸ್ವಚ್ಛತೆ ಅರೋಗ್ಯ ಮಹಿಳೆಯರ ಅರೋಗ್ಯ ಮಾಹಿತಿ ನೀಡಿದರು.

ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಸೊಸೈಟಿ ಉಪಾಧ್ಯಕ್ಷರಾದ ಯಮುನಾ ಬಿ. ಎಸ್, ಮಾಜಿ ಅಧ್ಯಕ್ಷರು ಹಾಲಿ ಸದಸ್ಯರು ಸೊಸೈಟಿ ನಿರ್ದೇಶಕರಾದ ಜಿ. ಕೆ. ಹಮೀದ್ ಗೂನಡ್ಕ, ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಸುಂದರಿ ಮುಂಡಡ್ಕ, ನಿವೃತ ಅಂಗನವಾಡಿ ಕಾರ್ಯಕರ್ತೆ ಜಯಂತಿ, ಸಂಜೀವಿನಿ ಒಕ್ಕೂಟದ ಕೃಷಿ ಸಖಿ ಮೋಹಿನಿ ವಿಶ್ವನಾಥ್(ನಿಶಾ), ನಿಕಟ ಪೂರ್ವ ಎಲ್. ಸಿ. ಆರ್. ಪಿ. ಯಶೋಧರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಅಂಗನವಾಡಿ ಮೇಲ್ವಿಚಾರಕಿ ದೀಪಿಕಾ ಪೋಕ್ಸೋ ಲಿಂಗತ್ವ ಆಧಾರಿತ ಸಮಸ್ಯೆ ಬಗ್ಗೆ ಮಾಹಿತಿ ನೀಡಿದರು.
ಎನ್ ಆರ್ ಎಲ್ ಎಂ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ವೇತಾ ರವರು ಸಂಜೀವಿನಿ ಯೋಜನೆ ಬಗ್ಗೆ ಮಾಹಿತಿ ನೀಡಿದರು .
ವಲಯ ಮೇಲ್ವಿಚಾರಕರಾದ ಮಹೇಶ್ ರವರು ಅಕ್ಕ ಕೆಫೆ ಬಗ್ಗೆ ಮಾಹಿತಿ ನೀಡಿದರು.
ಪಂಚಾಯತ್ ರಾಜ್ ಸಂಸ್ಥೆ ಬಗ್ಗೆ ಜಯಲಕ್ಷ್ಮಿ ಮಾಹಿತಿ ನೀಡಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜ ಮಾತನಾಡಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಮುಂದೆ ಬಂದು ಕೆಲಸ ಮಾಡಿದಾಗ ಮಹಿಳೆಯರು ಸಂಘಟಿತರಾದಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು. ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಶಕ್ತಿವೇಲು, ಉಪಾಧ್ಯಕ್ಷರಾದ ಎಸ್. ಕೆ. ಹನೀಫ್, ವಲಯ ಮೇಲ್ವಿಚಾರಕರಾದ ಕೌಶಲ್ಯ ರೂಪ, ಸಭಾ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ದೇವಕಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ವಿಮಲಾ ಪ್ರಸಾದ್, ರಜನಿ ಶರತ್, ಅನುಪಮ, ಲಿಸ್ಸಿ ಮೊನಾಲಿಸಾ, ನಿಕಟ ಪೂರ್ವ ಒಕ್ಕೂಟದ ಅಧ್ಯಕ್ಷರಾದ ಶಿಲ್ಪಾ ಸನತ್, ಕಾರ್ಯದರ್ಶಿ ಕವಿತಾ ಪೆರಂಗೋಡಿ ಒಕ್ಕೂಟದ ಕಾರ್ಯದರ್ಶಿ ಲಲನ ಉಪಸ್ಥಿತರಿದ್ದರು. ಮೋಹಿನಿ ವಿಶ್ವನಾಥ್ ಸ್ವಾಗತಿಸಿ ಕಾಂತಿ ಬಿ. ಎಸ್ ಕಾರ್ಯಕ್ರಮ ನಿರೂಪಿಸಿದರು. ಎಲ್ ಸಿ ಆರ್ ಪಿ ಸೌಮ್ಯ ಸನ್ಮಾನ ಪತ್ರ ವಾಚಿಸಿದರು. ಕಾರ್ಯಕ್ರಮದಲ್ಲಿ ಆಯುಷ್ಮಾನ್ ಅರೋಗ್ಯ ಕೇಂದ್ರದ ಚೈತ್ರಾ, ಹರ್ಷಿತಾ, ಆಶಾ ಕಾರ್ಯಕರ್ತೆಯಾರಾದ ಸವಿತಾ ರೈ, ಸೌಮ್ಯ, ಮೋಹನಾಂಗಿ, ಆಶಾ ವಿನಯ ಕುಮಾರ್ ರವರು ಅರೋಗ್ಯ ತಪಾಸಣಾ ಕಾರ್ಯಕ್ರಮ ನಡಿಸಿಕೊಟ್ಟರು. ವಿವಿಧ ಸಂಘಗಳಿಂದ ವಿವಿಧ ಖಾದ್ಯ ತಯಾರಿ ಮಾಡಿ ತಂದಿದ್ದರು. ರುಚಿ ರುಚಿ ಯಾದ ಖಾದ್ಯ ಊಟದ ವ್ಯವಸ್ಥೆ ಎಲ್ಲರೂ ಸವಿದರು.
