ವಿದ್ಯಾರ್ಥಿ ಚಳುವಳಿಗಳು ನೈಜ್ಯ ನಾಯಕತ್ವವನ್ನು ಬೆಳೆಸಬೇಕಿದೆ” ಪ್ರೊಫೆಸರ್ ಚಂದ್ರ ಪೂಜಾರಿ

ಸಮಾನ ಗುಣಮಟ್ಟದ ಶಿಕ್ಷಣಕ್ಕಾಗಿ ಮತ್ತು ವಿದ್ಯಾರ್ಥಿಗಳ ಐಕ್ಯತೆಗಾಗಿ” ಭಾರತ ವಿದ್ಯಾರ್ಥಿ ಫೆಡರೇಶನ್ SFI ಇಂದು 16-07-2022 ಬೋಳಾರದ ಎಕೆಜಿ ಭವನದಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ಅಧ್ಯಯನ ಶಿಬಿರವನ್ನು ಉದ್ಘಾಟಿಸಿ ಹಂಪಿ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಚಂದ್ರ ಪೂಜಾರಿಯವರು ಮಾತನಾಡುತ್ತಾ ಭಾರತಕ್ಕೆ ನೈಜ ನಾಯಕತ್ವದ ಕೊರತೆ ಇದೆ. ವಿದ್ಯಾರ್ಥಿ ಚಳುವಳಿಗಳು ನೈಜ್ಯ ನಾಯಕರನ್ನು ಬೆಳೆಸಬೇಕಾಗಿದೆ. ನಾಯಕತ್ವ ಗುಣಗಳನ್ನು ಯುವ ಸಮುದಾಯದ ನಡುವೆ ಬಿತ್ತರಿಸಬೇಕಾಗಿದೆ.

“ಸಿಂಪತಿ” ನಾಯಕತ್ವದ ನಿಜವಾದ ಗುಣವಲ್ಲ ಮತ್ತೊಬ್ಬರ ಜಾಗದಲ್ಲಿ ನಿಂತು ಯೋಚಿಸುವುದೇ ನಾಯಕತ್ವದ ಬಹು ದೊಡ್ಡ ಗುಣ. ಸತ್ಯ ಯಾವುದು?, ಬಹುತೇಕರ ಆಸಕ್ತಿಗೆ ಪೂರಕವಾದದ್ದು ಯಾವುದು? ಯಾರ ಮೇಲೆ ದಬ್ಬಾಳಿಕೆಗಳು ಆಗುತ್ತಿವೆ. ಯಾರ ಮೇಲೆ ಯಜಮಾನಿಕೆ ಆಗುತ್ತಿದೆ?,ಏನು ಅನ್ಯಾಯಗಳು ಆಗುತ್ತಿದೆ?, ಎನ್ನುವ ಅರಿವು ಮತ್ತು ಅನ್ಯಾಯವನ್ನು ಪ್ರಶ್ನಿಸುವ ಧೈರ್ಯ ಮತ್ತು ಪ್ರಾಮಾಣಿಕತೆ ನಾಯಕನಿರಬೇಕು. ನಾಯಕನಿಗೆ ಮತ್ತೊಬ್ಬರನ್ನು ಅರ್ಥ ಮಾಡಿಕೊಳ್ಳುವ ಮನಸ್ಸು ಇರಬೇಕು. ಆದರೆ ಇಂದಿನ ನಾಯಕರೆನ್ನುವ ರಾಜಕಾರಣಿಗಳಲ್ಲಿ ಈ ಯಾವ ಗುಣಗಳು ಇಲ್ಲ ನಮ್ಮ ಪ್ರಧಾನ ಮಂತ್ರಿಗಳು ಬೆಳಗಾಂನಲ್ಲಿ ನೆರೆಯಿಂದ ಜನ ಕಷ್ಟಪಡುತ್ತಿರುವಾಗ ಬೆಂಗಳೂರಿಗೆ ಬಂದು ಉದ್ಘಾಟನೆ ಮೊದಲಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ದೆಹಲಿಗೆ ಮರಳುತ್ತಾರೆ ಆದರೆ ಬೆಳಗಾಂನ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಬೇಕೆಂದು ಅಲ್ಲಿನ ಜನರ ನೋವುಗಳಿಗೆ ಸ್ಪಂದಿಸಬೇಕೆಂದು ಅವರಿಗೆ ಅನಿಸಲೇ ಇಲ್ಲ. ಭಾರತದ ಶಿಕ್ಷಣದಲ್ಲಿಯೂ ಸಮಾನತೆ ಇಲ್ಲ. ಕೇಂದ್ರೀಯ ವಿದ್ಯಾಲಯಗಳಲ್ಲಿ ಇರುವ ಗುಣಮಟ್ಟದ ಶಿಕ್ಷಣವು ಸರಕಾರಿ ಶಾಲೆಗಳಲ್ಲಿ ಸಿಗುತ್ತಿಲ್ಲ ಇನ್ನುಳಿದಂತೆ ಖಾಸಗಿ ಕಾಲೇಜುಗಳ ಸ್ಥಿತಿ ಬೇರೆಯೇ ಇದೆ. ಹಾಗಾಗಿ ಇಲ್ಲಿನ ಬಹುತೇಕರು ಪಡೆಯುತ್ತಿರುವ ಶಿಕ್ಷಣವು ಕೆಲವೇ ಕೆಲವು ನಾಯಕರುಗಳಿಗೆ ದುಡಿಮೆಗಾರರನ್ನು ಸೃಷ್ಟಿ ಮಾಡುವ ಶಿಕ್ಷಣವಾಗಿದೆ ಹೊರತು ನಾಯಕರನ್ನು ಸೃಷ್ಟಿ ಮಾಡುವ ಶಿಕ್ಷಣಗಳಲ್ಲ ಎಂದರು.

ಈ ವೇಳೆ ಎಸ್ಎಫ್ಐ ನ ರಾಜ್ಯ ಮುಖಂಡರಾದ ಭೀಮನಗೌಡ, ಜಿಲ್ಲಾ ಮುಖಂಡರಾದ ಮಾಧುರಿ ಬೋಳಾರ, ವಿನುಷ ರಮಣ, ವಿನೀತ್ ದೇವಾಡಿಗ ಮತ್ತು ಎಸ್ಎಫ್ಐ ನ ಮಾಜಿ ಜಿಲ್ಲಾ ಕಾರ್ಯದರ್ಶಿ ಮನೋಜ್ ವಾಮಂಜೂರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.