ದಕ್ಷಿಣ ಕನ್ನಡ ಜಿಲ್ಲೆ ಹಿಂದುತ್ವದ ಫ್ಯಾಕ್ಟರಿ : ಸಿದ್ದರಾಮಯ್ಯ ಹೇಳಿಕೆ

ಉಳ್ಳಾಲ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಹಿಂದುತ್ವದ ಫ್ಯಾಕ್ಟರಿ ಆಗಿದ್ದು, ಕೋಮುವಾದ ಹುಟ್ಟೋದು ಇಲ್ಲಿಂದ, ಇದು ಕೊಮುವಾದದ ಲ್ಯಾಬೋರೇಟರಿ, ಬಿಜೆಪಿ ಬಂಡವಾಡಳವೇ ಇದು ಎಂದು ರಾಜ್ಯ ವಿಧಾನಸಭೆ ಪ್ರತಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು. ಅವರು ಹರೇಕಳ ಕಡವಿನಬಳಿಯ ಯು.ಟಿ ಫರೀದ್ ವೇದಿಕೆಯಲ್ಲಿ ಜರಗಿದ ಉಳ್ಳಾಲ ಮತ್ತು ಮುಡಿಪು ಬ್ಲಾಕ್ ಕಾಂಗ್ರೆಸ್ ಬೃಹತ್ ಸಾರ್ವಜನಿಕ ಜನಜಾಗೃತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಅಧಿಕಾರಕ್ಕೆ ಬಂದ ನಂತರ ಭರವಸೆಗಳನ್ನು ಮರೆತು ಸಮಾಜ ಒಡೆಯುವ ಕೆಲಸಕ್ಕೆ ಬಿಜೆಪಿಯವರು ಮುಂದಾಗುತ್ತಾರೆ. ಬಹುತ್ಬದ ದೇಶ ಎಲ್ಲರೂ ಒಗ್ಗಟ್ಟಿನಲ್ಲಿರುವ ದೇಶ. ಈಗಿನ ಡಬಲ್ ಇಂಜಿನ್ ಸರಕಾರ ಎಲ್ಲವನ್ನೂ ಮುರಿದುಹಾಕಿದೆ. ಜನಸಂಖ್ಯೆಯಲ್ಲಿ ಭಾರತ ವಿಶ್ವದಲ್ಲಿ ನಂ. 1 ಆಗಲಿದೆ. ಎಲ್ಲರಿಗೂ ರಕ್ಷಣೆ ಸಿಗಬೇಕು, ಸಂವಿಧಾನ ದಲ್ಲಿ ಎಲ್ಲರೂ ಸಮಾನ ಎಂದು ಅಂಬೇಡ್ಕರ್ ಬರೆದುಕೊಟ್ಟಿದ್ದಾರೆ. ಯಾರು ಯಾವ ಧರ್ಮವನ್ನೂ ಅನುಸರಿಸಬಹುದು ಎಂದು ಹೇಳಲಾಗಿದೆ. ಆದರೆ ಸಮಾನ ಅವಕಾಶ, ಸಮಾನ ಹಕ್ಕು ಎಲ್ಲವನ್ನೂ ನಶಿಸಿಹಾಕಲಾಗುತ್ತಿದೆ ಎಂದರು.

ಶಾಸಕ ಯು.ಟಿ ಖಾದರ್ ಮಾತನಾಡಿ, ಐತಿಹಾಸಿಕ ಯೋಜನೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಸಿದ್ದರಾಮಯ್ಯೆ ಒದಗಿಸಿಕೊಟ್ಟರು. ಜಿಲ್ಲೆಗೆ ನೀರಿನ ಕೊರತೆಯಾಗದಂತೆ, ಬೋಟಿಂಗ್, ಪಾರ್ಕ್ ವ್ಯವಸ್ಥೆ, ಮುಂದಿನ ಬಹುದೊಡ್ಡ ಯೋಜನೆ ತುಂಬೆಯಿಂದ ಸೇತಯವೆ ನಿರ್ಮಾಣ. ಕ್ಷೇತ್ರದಲ್ಲಿ ಮೌಲಾನಾ ಆಝಾದ್ ಶಾಲೆ ಉಳ್ಳಾಲದಲ್ಲಿ ಮಾತ್ರವಿದೆ. ಸೌಹಾರ್ದತೆ, ಪ್ರೀತಿ, ವಿಶ್ವಾಸವನ್ನು ಕಾಪಾಡಿರುವುದರಿಂದ ಅಭಿವೃದ್ಧಿ ಯ ಉಳ್ಳಾಲ ನಿರ್ಮಾಣವಾಗಲು ಸಾಧ್ಯವಾಗಿದೆ. ಬಿಜೆಪಿಯ ಸಂವಿಧಾನದ ವಿರುದ್ಧ ಆಡಳಿತದಿಂದ ನೆಮ್ಮದಿಯಿಲ್ಲ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಲ್ಲಿ ಅದು ಪ್ರಸ್ತುತ ಇಂದಿರಾ ಗಾಂಧಿ ಆಡಳಿತದ ವೈಭವವನ್ನು ಮತ್ತೆ ಎತ್ತಿ ತೋರಿಸಲು ಕಾಂಗ್ರೆಸ್ ಅನ್ನು ಗೆಲ್ಲಿಸಿರಿ ಎಂದರು.

ವಿಧಾನಪರಿಷತ್ ಸದಸ್ಯರುಗಳಾದ ಬಿ.ಕೆ ಹರಿಪ್ರಸಾದ್ ಮಾತನಾಡಿ , ರಾಷ್ಟ್ರಕ್ಕೆ ಪ್ರಾಣ ಕೊಟ್ಟಂತಹ ಸಿದ್ದಾಂತ, ಗಾಂಧಿ ಕೊಂದಂತಹ ಗೋಡ್ಸೆ ಸಂತಾನದ ಸುಳ್ಳು ಹೇಳುವ ಸಿದ್ದಾಂತ. ರಾಜೀವ್ ಗಾಂಧಿ ತಂದಂತಹ ಟೆಲಿಕಮ್ಯುನಿಕೇಷನ್ ಕಾಯಿದೆಯಿಂದ ಮೊಬೈಲ್ ಕೈಯಲ್ಲಿದೆ. 27 ಸಾರ್ವಜನಿಕ ಸೊತ್ತುಗಳನ್ನು ಖಾಸಗಿಯವರಿಗೆ ನಿಡಲಾಯಿತು. ಲವ್ ಜಿಹಾದ್, ಹಿಜಾಬ್, ಹಲಾಲ್ ಮಾಡಿ ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಮಾಡಿದ್ದಂತಹ ಉಡುಪಿ ಜಿಲ್ಲೆ, ಮಂಗಳೂರು ಜಿಲ್ಲೆ 18 ನೇ ಸ್ಥಾನಕ್ಕೆ ದೂಡಿದರು. ಪೆನ್ ಬದಲು ತಲವಾರು, ತ್ರಿಶೂಲ, ಚಾಕು, ಚೂರಿ ಕೊಡುತ್ತಾರೆ. ಮಕ್ಕಳ ಭವಿಷ್ಯ ಯೋಚನೆ ಮಾಡಿ. ಅಬ್ಬಕ್ಕನ ನೆಲ ರಣಹೇಡಿಗಳ ನೆಲವಲ್ಲ. ಅನ್ಯೋನ್ಯವಾಗಿ ಕ್ರಿಶ್ಚಿಯನ್, ಹಿಂದೂ, ಮುಸ್ಲಿಮ್ , ಜೈನರು ಬಾಳಿದ ಜಿಲ್ಲೆಯನ್ನು ಹಿಂದೆ ಬೀಳಲು ಬಿಡಬೇಡಿ ಎಂದರು.

ಹರೀಶ್ ಕುಮಾರ್ ವಿಧಾನಸಭೆ ಪ್ರತಿಪಕ್ಷ ಉಪನಾಯಕ ಯು.ಟಿ ಖಾದರ್, ಮಾಜಿ ಸಚಿವರುಗಳಾದ ಬಿ.ರಮಾನಾಥ ರೈ, ಅಭಯಚಂದ್ರ ಜೈನ್, ಶಕುಂತಳಾ ಶೆಟ್ಟಿ, ಮಾಜಿ ಶಾಸಕರುಗಳಾದ ಜೆ.ಆರ್ ಲೋಬೊ, ಮೊಯ್ದೀನ್ ಬಾವಾ, ಕೋಡಿಜಾಲ್ ಇಬ್ರಾಹಿಂ, ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜ, ಕಣಚೂರು ಮೋನು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಪ್ರಶಾಂತ್ ಕಾಜವ, ಹಾಗೂ ಸದಾಶಿವ ಉಳ್ಳಾಲ್ , ಮೌರ್ಯ, ಯುವಕಾಂಗ್ರೆಸ್ ಮುಖಂಡ ಮಿಥುನ್ ರೈ, ಹರ್ಷರಾಜ್ ಮುದ್ಯ, ಇನಾಯತ್ ಆಲಿ, ಕೆಪಿಸಿಸಿ ಪ್ರ.ಕಾ ರಕ್ಷಿತ್ ಶಿವರಾಂ, ಶಶಿಧರ್ ಹೆಗ್ಡೆ, ಶಾಹುಲ್ ಹಮೀದ್, ಹರೇಕಳ ಗ್ರಾ.ಪಂ ಅಧ್ಯಕ್ಷ ಬದ್ರುದ್ದೀನ್, ಮಹಿಳಾ ಕಾಂಗ್ರೆಸ್ ನ ಶಾಲೆಟ್ ಪಿಂಟೋ, ರಾಕೇಶ್ ಮಲ್ಲಿ, ಅಶ್ವಿನ್ ಕುಮಾರ್ ರೈ ಉಪಸ್ಥಿತರಿದ್ದರು.
