ಎಸೆಸೆಲ್ಸಿ ಮಕ್ಕಳಿಗಾಗಿ ವಿದ್ಯಾರ್ಥಿ ಸ್ನೇಹಿ ಎಸೆಸೆಲ್ಸಿ ಉತ್ತೀರ್ಣ ಪ್ಯಾಕೇಜ್

ದಕ್ಷಿಣ ಕನ್ನಡ ಜಿಲ್ಲೆಯ 4 ಶಾಲೆಗಳ 30 ಪರಿಣಿತ ವಿಷಯ ಶಿಕ್ಷಕರಿಂದ ಸಿದ್ಧಪಡಿಸಲಾದ ವಿದ್ಯಾರ್ಥಿ ಸ್ನೇಹಿ ಎಸ್‍ಎಸ್‍ಎಸ್‍ಎಲ್ ಉತ್ತೀರ್ಣ ಪ್ಯಾಕೇಜ್‍ನ ಬಿಡುಗಡೆ ಕಾರ್ಯಕ್ರಮ ನಡೆಯಿತು. ನಗರದ ಪ್ರೆಸ್‍ಕ್ಲಬ್‍ನಲ್ಲಿ ಡಿಡಿಪಿಐ ಸುಧಾಕರ್ ಅವರು ಎಸ್‍ಎಸ್‍ಎಸ್‍ಎಲ್ ಉತ್ತೀರ್ಣ ಪ್ಯಾಕೇಜ್‍ನ್ನು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಎಸ್‍ಎಸ್‍ಎಲ್‍ಸಿ ಪ್ರತಿ ವಿದ್ಯಾರ್ಥಿಗಳಿಗೆ ಪ್ರಮುಖ ತರಗತಿಯಾಗಿದೆ. ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆಯಬೇಕೆಂಬ ಉದ್ದೇಶದಿಂದ ಪ್ಯಾಕೇಜ್‍ನ್ನು ಬಿಡುಗಡೆ ಮಾಡಿದ್ದೇವೆ ಎಂದು ಹೇಳಿದರು. ಆನಂತರ ನಿಶಾ ಲಕ್ಷ್ಮಣ್ ಅವರು ಮಾತನಾಡಿ, ಈ ಪ್ಯಾಕೇಜ್‍ಗಳು ಎಸೆಸೆಲ್ಸಿ ಮಾದರಿ ಮತ್ತು ನೀಲನಕ್ಷೆಯ ಪ್ರಕಾರ ಇವೆ. ನಿಧಾನಗತಿಯ ಕಲಿಯುವವರು ಸುಲಭವಾಗಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಸ್ಕೋರ್ ಮಾಡಬಹುದು ಎಂದು ಹೇಳಿದರು. ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಅಬೂಬಕ್ಕರ್, ನಝೀರ್ ಉಪಸ್ಥಿತರಿದ್ದರು.
