ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ನೂತನ ಠಾಣಾ ಕಟ್ಟಡ ನಿರ್ಮಾಣಕ್ಕೆ ಸಚಿವ ಎಸ್. ಅಂಗಾರರಿಂದ ಶಂಕುಸ್ಥಾಪನೆ

ಕಡಬ : ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ನೂತನ ಠಾಣಾ ಕಟ್ಟಡ ನಿರ್ಮಾಣಕ್ಕೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಶಂಕುಸ್ಥಾಪನೆ ನೆರವೇರಿಸಿದರು. ಕರ್ನಾಟಕ ರಾಜ್ಯ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ವತಿಯ 1.20 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಲಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶಿ ಭಗವಾನ್ ಸೋಣವಾಣೆ, ಡಿವೈಎಸ್ಪಿ ಡಾ.ವೀರಯ್ಯ ಹಿರೇಮಠ್, ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ, ಎಸೈ ಮಂಜುನಾಥ್, ಎಎಸೈ ಕರುಣಾಕರ್, ಪ್ರಮುಖರಾದ ಎ.ವಿ.ತೀರ್ಥರಾಮ, ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದ ಎಕ್ಸಿಕ್ಯೂಟಿವ್ ಇಂಜಿನಿಯರ್ ಸಣ್ಣೇಗೌಡ, ಯೋಜನಾ ಸಹಾಯಕ ಕಾಳಿದಾಸ್, ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತಾ ಗುಂಡಡ್ಕ, ಉಪಾಧ್ಯಕ್ಷೆ ಸವಿತಾ ಭಟ್, ಸದಸ್ಯರಾದ ಭಾರತಿ ದಿನೇಶ್, ರಾಜೇಶ್ ಎನ್.ಎಸ್., ಶಿವರಾಮ ನೆಕ್ರಾಜೆ, ಪಿಡಿಒ ಮೋನಪ್ಪ, ಸುಬ್ರಹ್ಮಣ್ಯ ದೇವಸ್ಥಾನದ ಇಒ ಡಾ.ನಿಂಗಯ್ಯ, ಸದಸ್ಯರಾದ ಶ್ರೀವತ್ಸ, ಶೋಭಾ ಗಿರಿಧರ್,ವನಜಾ ಭಟ್, ವೆಂಕಟ್ ವಳಲಂಬೆ, ವೆಂಕಟ್ ದಂಬೆಕೋಡಿ, ಅಶೋಕ್ ನೆಕ್ರಾಜೆ, ಮುಳಿಯ ಕೇಶವ, ಅಚ್ಚುತಾ ಗೌಡ, ಸೋಮಶೇಖರ್ ನಾಯಕ್, ಡಾ.ತ್ರಿಮೂರ್ತಿ, ರವಿ ಕಕ್ಕೆಪದವು, ಗುತ್ತಿಗೆದಾರರ ಸನತ್ ಕುಮಾರ್ ರೈ ಕೆ. ಉಡುಪಿ ಸೇರಿದಂತೆ ಪೆÇಲೀಸ್ ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವಜನಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.