ಸುಳ್ಯ: ನಗರ ಮಹಿಳಾ ಗೌಡ ಘಟಕದ ವತಿಯಿಂದ ನಿವೃತ್ತ ಶಿಕ್ಷಕಿ ಶ್ರೀಮತಿ ಪ್ರೇಮಾವತಿ ಸಿ.ಯವರಿಗೆ ಗೌರವ

ಸುಳ್ಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಶ್ರೀಮತಿ ಪ್ರೇಮಾವತಿ ಸಿ. ಯವರು ಜು.31ರಂದು ತಮ್ಮ 28 ವರ್ಷಗಳ ಶಿಕ್ಷಕ ಸೇವೆಯಿಂದ ನಿವೃತ್ತಿ ಹೊಂದಿದ ಹಿನ್ನಲೆಯಲ್ಲಿ ಸುಳ್ಯ ನಗರ ಮಹಿಳಾ ಗೌಡ ಘಟಕದ ಸದಸ್ಯರು ಆ.13 ರಂದು ಅವರ ಮನೆಗೆ ತೆರಳಿ ಶಾಲು, ಪೇಟ, ಫಲ ಪುಷ್ಪ ನೀಡಿ ಗೌರವ ಸಲ್ಲಿಸಿದರು.
ಶಿಕ್ಷಕಿ ಪ್ರೇಮಾವತಿ ಟೀಚರ್‌ರವರ ಕುರಿತು ತಾ.ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿಎಸ್ ಗಂಗಾಧರ್, ನಿವೃತ್ತ ವಿಜಯಬ್ಯಾಂಕ್ ಉದ್ಯೋಗಿ ಜನಾರ್ಧನ ಕೊಳಂಜಿರೋಡಿ ಮಾತನಾಡಿದರು.
ಬಳಿಕ ಪ್ರೇಮಾವತಿ ಟೀಚರ್‌ರವರ ಪತಿ ದೈಹಿಕ ಶಿಕ್ಷಣ ಶಿಕ್ಷಕ ದೊಡ್ಡಣ್ಣ ಮಾಸ್ತರ್ ಮಾತನಾಡಿ ಹಳೆ ದಿನಗಳ ಕುರಿತು ಮೆಲುಕು ಹಾಕಿದರು. ಗೌರವ ಸ್ವೀಕರಿಸಿ ಪ್ರೇಮಾವತಿ ಟೀಚರ್‌ರವರು ಮಾತನಾಡಿ ಆಗಮಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.
ನಗರ ಮಹಿಳಾ ಘಟಕದ ಅಧ್ಯಕ್ಷೆ ಹರ್ಷಾ ಕರುಣಾಕರ ಕಾರ್ಯಕ್ರಮ ನಿರೂಪಿಸಿ, ಸುಳ್ಯ ನಗರ ಗೌಡ ಸಂಘದ ಅಧ್ಯಕ್ಷ ರಾಕೇಶ್ ಕುಂಟಿಕಾನ ಧನ್ಯವಾದ ಗೈದರು.
ತರುಣ ಘಟಕ ಅಧ್ಯಕ್ಷ ಪ್ರೀತಮ್ ಡಿ.ಕೆ., ನಗರ ಮಹಿಳಾ ಘಟಕದ ಕಾರ್ಯದರ್ಶಿ ಸುಜಾತ ಕುರುಂಜಿ, ವಿವಿಧ ಗೌಡ ಸಂಘದ ಸದಸ್ಯರು ಹಾಜರಿದ್ದರು.