ಸುಳ್ಯ : ಗ್ರಾ.ಪಂ.ಅಧ್ಯಕ್ಷರ ಅಧಿಕಾರ ಮೊಟಕುಗೊಳಿಸುವ ವಿರುದ್ದ ಆಕ್ರೋಶ

ರಾಜ್ಯ ಬಿಜೆಪಿ ಸರಕಾರವು ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಸ್ಥಳೀಯ ಆಡಳಿತಕ್ಕೆ ಒತ್ತು ನೀಡಿ ಪಂಚಾಯತ್ ರಾಜ್ ವ್ಯವಸ್ಥೆಗೆ ನೀಡಲಾಗಿದ್ದ ಅಧಿಕಾರವನ್ನು ಮೊಟಕುಗೊಳಿಸಲು ಮುಂದಾಗಿದೆ. ಈ ತಿದ್ದುಪಡಿಯನ್ನು ರಾಜ್ಯ ಸರಕಾರ ಗ್ರಾ.ಪಂ.ಅಧ್ಯಕ್ಷರ ಅಧಿಕಾರ ಮೊಟಕು ಗೊಳಿಸುವ ವಿರುದ್ದ ಸುಳ್ಯ ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸುಳ್ಯದ ಪ್ರಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಎಂ.ವೆಂಕಪ್ಪ ಗೌಡ ಅವರು, ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಹಾಗೂ ರಾಜ್ಯ ಸರಕಾರ ಭ್ರಷ್ಟಚಾರಕ್ಕೆ ಕುಮ್ಮಕು ನೀಡುತಿದೆ ಎಂದು ಆರೋಪ ಮಾಡಿದಾರೆ ಹಾಗೂ 40%ಸರಕಾರಕ್ಕೆ ಕುಮ್ಮಕು ನೀಡಲು ಈ ರೀತಿ ಗ್ರಾಮಪಂಚಾಯಿತ್ ಅಧ್ಯಕ್ಷರ ಅಧಿಕಾರ ಮೋಟಾಕುಗೊಳಿಸಲು ಪ್ರಯತ್ನಸುತ್ತಿದೆ ಎಂದು ಆರೋಪಿಸಿದರು.

ಈ ಸಂರ್ಭದಲ್ಲಿ ನಗರ ಪಂಚಾಯತ್ ಸದಸ್ಯರು ಸುಳ್ಯ ಹಾಗೂ ಸಚಿನ್ ರಾಜ್ ಶೆಟ್ಟಿ ಪೆರುವಾಜೆ ಗುತ್ತು, ಸದಸ್ಯರು ಪೆರುವಾಜೆ ಗ್ರಾಮ ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಗನಾಥ ಪೂಜಾರಿ, ಹಾಜಿರಾ ಗಾಫುರ್, ಗ್ರಾಮ ಪಂಚಾಯತ್ ಕಲ್ಮಡ್ಕ ಚಿತ್ರಕುಮಾರಿ ಗ್ರಾಮ ಪಂಚಾಯತ್ ಉಬರಡ್ಕ ಮಿತ್ತುರ್ ಶ್ರೀಮತಿ ಲೀಲಾ ಮೋಹನ್ ಗ್ರಾಮ ಉಪಾಧ್ಯಕ್ಷರು ಪಂಚಾಯತ್ ಅಜ್ಜಾವರ ಹಾಗೂ ಜಯಪ್ರಕಾಶ್ ನೆಕ್ರಪಾಡಿ ಪಂಚಾಯತ್ ರಾಜ್ ಒಕ್ಕೂಟ ಅನಿಲ್ ಬಳ್ಳುಡ್ಕ, ಸತ್ಯ ಕುಮಾರ್ ಅಡಿಂಜಾ ಹಾಗೂ ಮಣಿಕಂಠ ಉಪಸ್ಥಿತರಿದ್ದರು.

Related Posts

Leave a Reply

Your email address will not be published.