ಸುರತ್ಕಲ್ :- ದೇಶವಿರೋಧಿ ದುಷ್ಟ ಶಕ್ತಿಗಳು ಬಿಲದಿಂದ ಹೊರಗೆ ಬರುತ್ತಿವೆ ಡಾ. ಭರತ್ ಶೆಟ್ಟಿ ವೈ

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಬಿಲದಲ್ಲಿ ಅಡಗಿ ಕುಳಿತಿದ್ದ ದುಷ್ಟ ಶಕ್ತಿಗಳು ಒಂದೊಂದಾಗಿ ಹೊರಗೆ ಬರುತ್ತಿವೆ . ಇದಕ್ಕೆ ಕಾಂಗ್ರೆಸ್ ಪಕ್ಷದ ಮೇಲೆ, ಹಾಗೂ ಅದರ ಆಡಳಿತದ ಮೇಲೆ ಯಾವುದೇ ಹೆದರಿಕೆ ಇಲ್ಲದಿರುವುದೇ ಕಾರಣ ಎಂದು ಡಾ. ಭರತ್ ಶೆಟ್ಟಿ ಹೇಳಿದ್ದಾರ
ಬಿಜೆಪಿ ಅಧಿಕಾರದಲ್ಲಿದ್ದಾಗ ಉಗ್ರರ ಚಟುವಟಿಕೆಗಳನ್ನ ಸಂಪೂರ್ಣ ಮಟ್ಟ ಹಾಕಲಾಗಿತ್ತು. ಇದೀಗ ರಾಜಾರೋಷವಾಗಿ ಬಾಂಬುಗಳ ತಯಾರಿಕೆಗೆ ಬೇಕಾದ ವಸ್ತುಗಳನ್ನು ಖರೀದಿಸಲು ಬೆಂಗಳೂರಿನಲ್ಲಿ ಓಡಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಉಗ್ರ ವಿದ್ವಾಂಸಕ ಕೃತ್ಯ ನಡೆಸಲು ಮುಂದಾಗಿರುವುದು ಆತಂಕಕಾರಿ ಬೆಳವಣಿಗೆ. ಇವರ ಗುರಿ ಹಿಂದೂ ಸಮುದಾಯವೇ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಕಾಂಗ್ರೆಸ್ ಸರ್ಕಾರವು ತಕ್ಷಣ ರಾಜ್ಯದ ಜನರ ಸುರಕ್ಷತೆಯ ಬಗ್ಗೆ ಮೊದಲ ಆದ್ಯತೆಯನ್ನು ನೀಡಬೇಕು.
ಸಿಂಧನೂರು ಬಂಗಾಳಿ ಕ್ಯಾಂಪ್ ಗೆ ನುಗ್ಗಿ ದಾಂಧಲೆಗೈದವರ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳ ಬೇಕು. ಅಲ್ಪಸಂಖ್ಯಾತ ಸಮುದಾಯಕ್ಕೆ ನೋವಾಗುತ್ತದೆ ಎಂದು ಮೀನಾ ಮೇಷ ಎಣಿಸದೆ ಇಂತಹ ಉಗ್ರ ಕೃತ್ಯಗಖನ್ನು ಕೃತ್ಯಗಳನ್ನು ಬೇರು ಸಹಿತ ಕಿತ್ತು ಹಾಕಲು ಯಾವುದೇ ತಪಾಸಣೆ,ವಿಚಾರಣೆಗಾಗಿ ಪೊಲೀಸ್ ಇಲಾಖೆ ಸೂಕ್ತ ಕ್ರಮವನ್ನು ಕೈಗೊಳ್ಳಲು ಮುಕ್ತ ಅವಕಾಶ ನೀಡಬೇಕು ಎಂದು ಡಾ.ಭರತ್ ಶೆಟ್ಟಿ ವೈ ಒತ್ತಾಯಿಸಿದ್ದಾರೆ.
