Home Posts tagged #dr murali mohan chunthar

ಆಸಿಡಿಟಿ (ಅತಿ ಆಮ್ಲತೆ)

ಆಸಿಡಿಟಿ ಅಥವಾ ಅತಿ ಆಮ್ಲತೆ ಎನ್ನುವುದು ಇಂದಿನ ಕಾಲದಲ್ಲಿ ಜಗತ್ತಿನಾದ್ಯಂತ ಎಲ್ಲರಲ್ಲೂ ಕಂಡು ಬರುವ ಬಹಳ ಸಾಮಾನ್ಯ ಸಮಸ್ಯೆಯಾಗಿದೆ. ಇಂದಿನ ಧಾವಂತದ, ವೇಗದ ಸ್ಪರ್ದಾತ್ಮಕ ಜಗತ್ತಿನಲ್ಲಿ ಎಲ್ಲವೂ ವೇಗವಾಗಿ ನಡೆಯುತ್ತದೆ. ಎಲ್ಲರೂ ತಮ್ಮ ಕೆಲಸದಲ್ಲಿ ಮಗ್ನರಾಗಿ ಕಾಲಕಾಲಕ್ಕೆ ಸರಿಯಾಗಿ ಆಹಾರ ಸೇವಿಸಲಾಗದ ಒತ್ತಡದ ಜೀವನ ಶೈಲಿಗೆ ಅನಿವಾರ್ಯವಾಗಿ ಒಗ್ಗಿಕೊಂಡಿದ್ದಾರೆ.

ಮುಜುಗರ ತರುವ ಬೆಡ್ ವೆಟ್ಟಿಂಗ್ ಸಮಸ್ಯೆ

ನಿದ್ರಿಸುವ ವೇಳೆ ಮಕ್ಕಳು ತಮಗರಿವಿಲ್ಲದೆ ಹಾಸಿಗೆಯಲ್ಲಿ ಮೂತ್ರ ಮಾಡುವುದನ್ನು ಬೆಡ್ ವೆಟ್ಟಿಂಗ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಸಣ್ಣ ಮಕ್ಕಳಲ್ಲಿ 5ರಿಂದ6 ವರ್ಷದವರೆಗೆ ಮೂತ್ರ ಚೀಲದ ಮೇಲಿನ ನಿಯಂತ್ರಣವಿರುವುದಿಲ್ಲ. ಈ ಕಾರಣಕ್ಕಾಗಿ ಹೆಚ್ಚಾಗಿ 5ರಿಂದ 6 ವರ್ಷದವರೆಗೆ ಡೈಪರ್ ಹಾಕಿ ಮಕ್ಕಳನ್ನು ಮಲಗಿಸುತ್ತಾರೆ. ಆ ಬಳಿಕವೂ ಈ ಸಮಸ್ಯೆ ಕಂಡು ಬಂದಲ್ಲಿ ಯಾಕಾಗಿ ಈ ನಿಯಂತ್ರಣ ಬಂದಿಲ್ಲ ಎಂಬುದನ್ನು ಹೆತ್ತವರ ಮತ್ತು ವೈದ್ಯರು ಕೂಲಂಕುಷವಾಗಿ

ಕಡಿಮೆ ರಕ್ತದ ಒತ್ತಡ ಕಾರಣಗಳೇನು ?

ಕಡಿಮೆ ರಕ್ತದ ಒತ್ತಡ ಕಾರಣಗಳೇನು ?( Low Blood Pressure… Reasons and Simple Solutions) ಹೃದಯದಿಂದ ನಿರಂತರವಾಗಿ ರಕ್ತ ದೇಹದ ಎಲ್ಲಾ ಅಂಗಗಳಿಗೆ ಸರಬರಾಜು ಆಗುತ್ತಲೇ ಇರುತ್ತದೆ. ಹೃದಯದಿಂದ ರಕ್ತ ಹೊರಹಾಕಲ್ಪಟ್ಟ ಮೇಲೆ ರಕ್ತದ ಏಕಮುಖ ಹರಿವು ರಕ್ತನಾಳಗಳ ಒಳಪದರಗಳ ಮೇಲೆ ಹೇರುವ ಒತ್ತಡವನ್ನು “ರಕ್ತದ ಒತ್ತಡ” ಎಂದು ಕರೆಯಲಾಗುತ್ತದೆ. ಆರೋಗ್ಯವಂತ ಮಧ್ಯ ವಯಸ್ಕ ಮಹಿಳೆ ಮತ್ತು ಪುರುಷರಲ್ಲಿ ರಕ್ತದ ಒತ್ತಡವು 120/80 ಮಿಲಿ ಮೀಟರ್‍ನಷ್ಟು (ಪಾದರಸ ಕಂಬದ

ಬಾಯಿ ಅರ್ಬುದ ರೋಗ

ಬಾಯಿಯ ಒಳಗಿನ ಜೀವಕೋಶಗಳು ಅನಿಯಂತ್ರಿತವಾಗಿ ಬೆಳೆದು, ಗಡ್ಡೆಗಳ ರೂಪದಲ್ಲಿ ಬೆಳೆಯುವುದಕ್ಕೆ ಬಾಯಿಯ ಅರ್ಬುದ ರೋಗ ಅಥವಾ ಬಾಯಿಯ ಕ್ಯಾನ್ಸರ್ ಎಂದು ಹೇಳುತ್ತೇವೆ. ಅರ್ಬುದ ರೋಗ ಎನ್ನುವುದು ಒಂದು ವಿಶ್ವವ್ಯಾಪ್ತಿ ಹರಡಿರುವ ಒಂದು ಭೀಕರವಾದ ರೋಗ. ಗಂಡಸರಲ್ಲಿ ಶ್ವಾಸಕೋಶ, ಕರುಳು ಮತ್ತು ಬಾಯಿಯ ಕ್ಯಾನ್ಸರ್ ಹೆಚ್ಚು ಹೆಚ್ಚು ಕಾಣ ಸಿಗುತ್ತದೆ. ಹೆಂಗಸರಲ್ಲಿ ಜನನಾಂಗ, ಎದೆ ಮತ್ತು ಗರ್ಭಕೋಶದ ಕ್ಯಾನ್ಸರ್ ಹೆಚ್ಚು ಕಾಣಬರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ತಂಬಾಕು,

ವಿಶ್ವ ಹಿಮೋಫಿಲಿಯಾ ದಿನ-ಏಪ್ರಿಲ್ 17

ವಿಶ್ವ ಹಿಮೋಫಿಲಿಯಾ ಸೊಸೈಟಿ ಹಿಮೋಫಿಲಿಯಾ ರೋಗದಿಂದ ಬಳಲುತ್ತಿರುವ ರೋಗಿಗಳ ಜೀವನ ಮಟ್ಟದ ಸುಧಾರಣೆ ಮಾಡಲು ಮತ್ತು ರೋಗದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ, 1989ರಲ್ಲಿ ಎಪ್ರಿಲ್ 17ರಂದು ‘ವಿಶ್ವ ಹಿಮೋಫಿಲಿಯಾ ದಿನ” ಆಚರಣೆಯನ್ನು ಜಾರಿಗೆ ತಂದಿತು. 1963ರಲ್ಲಿ ಪ್ರಾಂಕ್ ಶ್ಯಾನ್‍ಬೆಲ್ ಎಂಬವರಿಂದ ಆರಂಭಗೊಂಡ ಈ ವಿಶ್ವ ಹಿಮೋಫಿಲಿಯಾ ಸೊಸೈಟಿ, ವಿಶ್ವದಾದ್ಯಂತ ಹಿಮೋಫಿಲಿಯಾ ರೋಗಿಗಳ ಶುಶ್ರೂಷೆ ಮತ್ತು ಚಿಕಿತ್ಸೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು

ಕಿವಿಗುಗ್ಗೆ

ಪಂಚೇಂದ್ರಿಯಗಳಾದ ನಾಲಗೆಯಿಂದ ನಾವು ರುಚಿಯನ್ನು ಅಸ್ಪಾಧಿಸಿ, ಕಣ್ಣುಗಳಿಂದ ಬಾಹ್ಯ ಜಗತ್ತಿನ ಸೌಂದರ್ಯವನ್ನು ಸವಿಯುತ್ತಾ, ಚರ್ಮಗಳಿಂದ ಸ್ವರ್ಶ ಜ್ಞಾನವನ್ನು ಅನುಭವಿಸಿ, ಮೂಗುಗಳಿಂದ ವಾಸನೆಯನ್ನು ಗೃಹಿಸಿ, ಕಿವಿಗಳಿಂದ ಕೇಳಿ ಜೀವನದ ಪ್ರತಿ ಕ್ಷಣವನ್ನು ಅಸ್ಪಾಧಿಸುತ್ತೇವೆ ಮತ್ತು ಅನುಭವಿಸುತ್ತೇವೆ. ಈ ಎಲ್ಲಾ ಅಂಗಗಳಲ್ಲಿಯೂ ಕಿವಿ ಬಹಳ ಸಾಧುವಾದ ಅಂಗ. ಕಣ್ಣು ಮೂಗುಗಳಂತೆ ಕಿವಿಗಳಿಗೆ ರಾಜಾತಿಥ್ಯ ಬೇಡ. ಕಣ್ಣು ಬಹಳ ನಾಜೂಕಿನ ಅಂಗವಾಗಿದ್ದು ಎಷ್ಟು ಸೇವೆ ಮಾಡಿದರೂ

ಕರುಳು ಕಿರಿಕಿರಿ ಖಾಯಿಲೆ

ಕರುಳು ಕಿರಿಕಿರಿ ಖಾಯಿಲೆ ದೊಡ್ಡ ಕರುಳನ್ನು ಭಾಧಿಸುವ ಬಹಳ ಕಿರಿಕಿರಿ ಉಂಟುಮಾಡುವ ಮತ್ತು ಮಾನಸಿಕವಾಗಿ ವ್ಯಕ್ತಿಗೆ ಹೆಚ್ಚು ಕಿರುಕುಳ ನೀಡುವ ಖಾಯಿಲೆಯಾಗಿದ್ದು, ಆಂಗ್ಲಭಾಷೆಯಲ್ಲಿ ‘ಇರಿಟೇಬಲ್ ಬೋವೆಲ್ ಸಿಂಡ್ರೋಮ್’ ಎಂದು ಕರೆಯುತ್ತಾರೆ. ಕ್ರಿಯಾತ್ಮಕವಾಗಿ ಕರುಳಿನ ಒಳಭಾಗದಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲದಿದ್ದರೂ ಈ ರೋಗದಿಂದ ಬಳಲುತ್ತಿರುವವರು ಸಾಮಾನ್ಯವಾಗಿ ಮಾನಸಿಕವಾಗಿ ಕುಗ್ಗಿರುತ್ತಾರೆ. ಆತಂಕ, ಒತ್ತಡ, ಖಿನ್ನತೆ, ಮುಂತಾದ ಮಾನಸಿಕ ಲಕ್ಷಣಗಳು ಈ

ಉಬ್ಬಿದ ರಕ್ತನಾಳ (ವೇರಿಕೋಸ್ ವೇನ್ಸ್)

ಉಬ್ಬಿದ ರಕ್ತನಾಳ ಎನ್ನುವುದು ಸಾಮಾನ್ಯವಾಗಿ ವಯಸ್ಕರಲ್ಲಿ ಕಂಡು ಬರುವ ರಕ್ತನಾಳಗಳಿಗೆ ಸಂಬಂಧಿಸಿದ ಗುಣಪಡಿಸಲಾಗದ ಮತ್ತು ಮಾರಣಾಂತಿಕವಲ್ಲದ ರೋಗವಾಗಿದೆ. ಆಂಗ್ಲ ಭಾಷೆಯಲ್ಲಿ ಇದನ್ನು “ವೇರಿಕೋಸ್ ವೇನ್ಸ್” ಎಂದು ಕರೆಯುತ್ತಾರೆ. ಹೆಚ್ಚಾಗಿ ಕಾಲುಗಳಲ್ಲಿ ಕಾಣಿಸಿಕೊಳ್ಳುವ ಈ ಸಮಸ್ಯೆ ಕೆಲವೊಮ್ಮೆ ತೊಡೆಗಳಲ್ಲಿ ಮತ್ತು ಹೊಟ್ಟೆಯ ಭಾಗದಲ್ಲಿಯೂ ಕಂಡು ಬರುತ್ತದೆ. ಕಾಲುಗಳಲ್ಲಿನ ರಕ್ತನಾಳಗಳು ಉಬ್ಬಕೊಂಡು ದಪ್ಪವಾಗಿ ಹಗ್ಗದಂತೆ ಕಾಣಿಸಿಕೊಂಡು ಕಾಲುಗಳ ಚರ್ಮದಲ್ಲಿ

“ಅಜಿನೊಮೋಟೊ ಎಂಬ ಸೈಲೆಂಟ್ ಕಿಲ್ಲರ್

‘ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ’ ಎಂಬುದು ನಿಮ್ಮ ಹಿರಿಯರು ಯಾವತ್ತೂ ಹೇಳುವ ಹಿತನುಡಿ. ಆದರೆ ಇದನ್ನು ಅನುಕರಣೆ ಮಾಡುವವರ ಸಂಖ್ಯೆ ಮಾತ್ರ ಬಹಳ ಕಡಿಮೆ ಎನ್ನುವುದೇ ಈ ಶತಮಾನದ ಬಹುದೊಡ್ಡ ದುರಂತ ಎಂದರೂ ತಪ್ಪಲ್ಲ. ನಮ್ಮ ದೇಹಕ್ಕೆ ಬರುವ ಹೆಚ್ಚಿನ ರೋಗಗಳು ತಡೆಗಟ್ಟಬಹುದಾದ ರೋಗಗಳೇ. ನಾವು ಏನ್ನನ್ನು ತಿನ್ನುತ್ತೇವೆ ಎನ್ನುವ ಪರಿಜ್ಞಾನ ಇಲ್ಲದೆ, ಕೇವಲ ಬಾಯಿ ಚಪಲಕ್ಕಾಗಿ, ನಾಲಗೆಯ ದಾಸನಾಗಿ ಸಿಕ್ಕಿ ಸಿಕ್ಕಿದ್ದನ್ನೇಲ್ಲಾ ತಿನ್ನುವ

ಆಟಿಸಂ ಜಾಗೃತಿ ದಿನ- ಏಪ್ರಿಲ್ 2

ಪ್ರತಿ ವರ್ಷ ಏಪ್ರಿಲ್ ಎರಡರಂದು ವಿಶ್ವದಾದ್ಯಂತ ವಿಶ್ವ ಆಟಿಸಂ ದಿನ ಆಚರಿಸಲಾಗುತ್ತದೆ. ಆಟಿಸಂ ರೋಗದ ಬಗ್ಗೆ ಇರುವ ತಪ್ಪು ಕಲ್ಪನೆಗಳು ಮತ್ತು ಮೂಢನಂಬಿಕೆಗಳನ್ನು ತೊಡೆದು ಹಾಕಿ ಜನರಲ್ಲಿ ಈ ರೋಗದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಆಚರಣೆಯನ್ನು 2007ರಲ್ಲಿ ಯುನೈಟೆಡ್ ಜನರಲ್ ಅಸೆಂಬ್ಲಿ ಜಾರಿಗೆ ತಂದಿತು. ಕಳೆದ ೧೬ ವರ್ಷಗಳಲ್ಲಿ ಸಾವಿರಾರು ಇಂತಹ ಜಾಗೃತಿ ಕಾರ್ಯಕ್ರಮಗಳು ಜಗತ್ತಿನಾದ್ಯಂತ ನಡೆದು, ಜನರಲ್ಲಿ ಈ ರೋಗದ ಬಗ್ಗೆ ಜಾಗೃತಿ ಮೂಡಿಸುವಲ್ಲಿ