ಇತಿಹಾಸ ಪ್ರಸಿದ್ಧ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಮುಂದಿನ ಅವಧಿಗೆ ದೇವಳದ ಮಾತೃ ಮಂಡಳಿಯ ನೂತನ ಅಧ್ಯಕ್ಷೆಯಾಗಿ ಪಾರ್ವತಿ ಶೇಖರ್.ಬಿ.ಕೆ ಶಕ್ತಿನಗರ ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷೆಯಾಗಿ ನಾಗವೇಣಿ ಮಾಧವ, ಪ್ರಧಾನ ಕಾರ್ಯದರ್ಶಿಯಾಗಿ ಅಶ್ವಿನಿ ಕಿಶೋರ್, ಜತೆ ಕಾರ್ಯದರ್ಶಿಯಾಗಿ ಮಮತಾ ದೇವದಾಸ್, ಕೋಶಾಧಿಕಾರಿಗಳಾಗಿ ಪುಷ್ಪ ಸುಂದರ್ ಹಾಗೂ ಭಾರತಿ.ವಿ, ಜತೆ
ದಕ್ಷಿಣಕನ್ನಡ ಜಿಲ್ಲಾದ್ಯಂತ ಮಳೆಯ ಆರ್ಭಟ ಮುಂದುವರಿದಿದ್ದು ನಗರದ ಕುಲಶೇಖರ ಕೋಟಿಮುರ ಸಿಲ್ವರ್ ಗೇಟ್‌ನ ಗ್ರಂಥಾಲಯದ ಬಳಿ ಇರುವ ನಾಗೇಶ್ ಎಂಬುವವರ ಮನೆ ಕುಸಿದು ಬಿದ್ದಿದ್ದು ಅಪಾರ ಪ್ರಮಾಣದ ಹಾನಿಯಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಶಾಸಕ ವೇದವ್ಯಾಸ ಕಾಮತ್ ರವರು ಕುಟುಂಬಸ್ಥರಿಗೆ ಧೈರ್ಯ ತುಂಬಿ ಪರಿಹಾರ ಕಾರ್ಯದ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕರೆ ಮಾಡಿ ಸೂಚಿಸಿದರು. ಸ್ಥಳದಲ್ಲಿ ಅಜಯ್ ಕುಲಶೇಖರ, ನಿತಿನ್ ಕುಮಾರ್, ಅನಿಲ್, ಹರಿಣಿ ಪ್ರೇಮ್,
ಮಂಗಳೂರು: ಕಳೆದ ವರ್ಷ ಸಂಪೂರ್ಣವಾಗಿ ನವೀಕರಣಗೊಂಡು ಸಂಭ್ರಮದಿಂದ ಬ್ರಹ್ಮಕಲಶೋತ್ಸವವನ್ನು ಆಚರಿಸಿರುವ ಕುಲಶೇಖರದ ಶ್ರೀ ವೀರನಾರಾಯಣ ದೇವರ ವರ್ಷಾವಧಿ ಜಾತ್ರೋತ್ಸವ “ಕುಂಭ ಮಹೋತ್ಸವ” ಎಂಬ ಪದನಾಮದಲ್ಲಿ ಆಚರಿಸಲ್ಪಡುತ್ತಿದ್ದು, ಈ ಬಾರಿಯ ಮಹೋತ್ಸವ ಫೆ. 12 ರಿಂದ 16ರ ತನಕ ಸಂಭ್ರಮದಿಂದ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಶ್ರೀ ಅನಂತ ಉಪಾದ್ಯಾಯ ಮತ್ತು ಶ್ರೀ ಹರಿ ಉಪಾದ್ಯಾಯರು ತಂತ್ರಿ ಸ್ಥಾನದಲ್ಲಿದ್ದು, ಪರಮಪೂಜ್ಯರಾದ ಮಾಣಿಲ
ಕುಲಶೇಖರದ ಕಟ್ಟೆ ಫ್ರೆಂಡ್ಸ್ ವತಿಯಿಂದ 26ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆಯು ಊರ ಹತ್ತು ಸಮಸ್ತರು ಹಾಗೂ ಭಕ್ತಾದಿಗಳ ಸಮ್ಮುಖದಲ್ಲಿ ಶ್ರೀ ವೀರನಾರಾಯಣ ಅಶ್ವಥ ಕಟ್ಟೆಯಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು. ಈ ಸಂದರ್ಭದಲ್ಲಿ ಮಧ್ಯಪ್ರದೇಶದ ದೇವಾಸ್ ನಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಕುಮಾರಿ ವೈಷ್ಣವಿ ಯವರಿಗೆ ಶಾಲು ಹೊದಿಸಿ ಫಲ ಪುಷ್ಪ ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ
ಬಡತನ ಹಾಗೂ ಕಷ್ಟದಲ್ಲಿರುವವರಿಗೆ ನಮ್ಮಿಂದಾಗುವ ಸಹಾಯ ಮಾಡುವ ಮೂಲಕ ಮಾನವ ತತ್ವವನ್ನು ಸಹಕಾರ ಗೊಳಿಸಬೇಕು, ನೊಂದಿರುವ ವ್ಯಕ್ತಿಗೆ ಮಾಡುವ ಸೇವೆಯೇ ದೇವರಿಗೆ ನಿಜವಾಗಿ ಮಾಡುವ ಸೇವೆ, ಕುಲಾಲ ಸಮಾಜದ ಒಗ್ಗಟ್ಟಿನ ಶಕ್ತಿ ಕೇಂದ್ರವಾಗಿ ಶ್ರೀ ವೀರನಾರಾಯಣ ಕ್ಷೇತ್ರ ಭವ್ಯವಾಗಿ ನಿರ್ಮಾಣಗೊಂಡಿದೆ. ದೇವಸ್ಥಾನಗಳು ಅಂತರಂಗವನ್ನು ಗಟ್ಟಿಗೊಳಿಸುವ ಆಧ್ಯಾತ್ಮಿಕದ ಜಿಮ್ಮಾ ಸೆಂಟರ್ ಆಗಬೇಕು ಎಂದು ಕೇಮಾರು ಶ್ರೀ ಸಂದೀಪನಿ ಸಾಧನ ಆಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿ ಹೇಳಿದರು.
ಕುಲಶೇಖರ, : ಮಂಗಳೂರು ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಆಡಳಿತದಲ್ಲಿರುವ ಇತಿಹಾಸ ಪ್ರಸಿದ್ಧ ಕುಲಾಲ ಸಮುದಾಯದ ಕುಲದೇವರಾದ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನವು ಶಿಲಾಮಯವಾಗಿ ರೂ. ಹತ್ತು ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶದ ಸಂಭ್ರಮದಲ್ಲಿದ್ದು, ಇದಕ್ಕೆ ಮಹಾದಾನಿಗಳ ಕೊಡುಗೆ ಅವಿಸ್ಮರಣೀಯವಾಗಿದೆ. ಸಾಕಷ್ಟು ದಾನಿಗಳು ದೇಗುಲದ ಪುನರ್ ನಿರ್ಮಾಣದಲ್ಲಿ ಕೈಜೋಡಿಸಿದ್ದು, ಅವರೆಲ್ಲರಿಗೂ ನಮ್ಮ ಆರಾಧ್ಯ ಕುಲದೇವರು ಆಶೀರ್ವದಿಸಲಿ
ಕುಲಶೇಖರ, ಮೇ 11: ಮಂಗಳೂರು ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಆಡಳಿತದಲ್ಲಿರುವ ಇತಿಹಾಸ ಪ್ರಸಿದ್ಧ ಕುಲಾಲ ಸಮುದಾಯದ ಕುಲದೇವರಾದ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನವು ಶಿಲಾಮಯವಾಗಿ ರೂ. ಹತ್ತು ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿದ್ದು, ಮೇ 14ರಿಂದ 25ವರೆಗೆ ಪುನರ್ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವವು ಬಹಳ ವಿಜೃಂಭನೆಯಿಂದ ಜರಗಲಿದೆ ಎಂದು ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ, ಬ್ರಹ್ಮಕಲಶೋತ್ಸವ