Home Posts tagged #mangalore (Page 247)

ಬೀದಿಬದಿ ವ್ಯಾಪಾರಿಗಳ ಮೇಲೆ ದೌರ್ಜನ್ಯ ಪಟ್ಟು ಬಿಡದೆ ಮುಖ್ಯ ಮಂತ್ರಿ ಭೇಟಿ ಮಾಡಿದ ಬೀದಿಬದಿ ವ್ಯಾಪಾರಿಗಳು.

ಮಂಗಳೂರು : ಮಹಾನಗರ ಪಾಲಿಕೆ ಬೀದಿಬದಿ ವ್ಯಾಪಾರಿಗಳಿಗೆ 2014ರ ಬೀದಿ ಬದಿ ವ್ಯಾಪಾರಸ್ಥರ ಜೀವನೋಪಾಯ ಸಂರಕ್ಷಣೆ ಮತ್ತು ನಿಯಂತ್ರಣ ಕಾಯಿದೆ 2014 ಮತ್ತು ಕರ್ನಾಟಕ ಬೀದಿಬದಿ ವ್ಯಾಪಾರ ನಿಯಮ 2019 ರಂತೆ ಮಂಗಳೂರಿನಲ್ಲಿ ಅವಕಾಶ ನೀಡದೆ ದಾಳಿಗಳನ್ನು ನಡೆಸಿ,ಗುರುತಿನ ಚೀಟಿ ಮತ್ತು ಪ್ರಮಾಣ ಪತ್ರಗಳನ್ನು ನೀಡದೆ ಸತಾಯಿಸುತ್ತಿರುವ ವಿಚಾರವಾಗಿ ಬೀದಿಬದಿ ವ್ಯಾಪಾರಿಗಳು

ಗ್ಯಾರಂಟಿ ಕಾರ್ಡ್ ಅದು ಜಸ್ಟ್ ವಿಸಿಟಿಂಗ್ ಕಾರ್ಡ್ : ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಬಗ್ಗೆ ಸಿಎಂ ಬೊಮ್ಮಾಯಿ ಲೇವಡಿ

ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದ್ದಾರೆ. ನಾವು ಅವರ ಯೋಜನೆ ಬಗ್ಗೆ ಯಾಕೆ ಹತಾಶೆ ಆಗಬೇಕು. ಕಾಂಗ್ರೆಸ್ ಏನು ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ಜನರೇ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಇವರ ಮಾತಿಗೆ ಗ್ಯಾರಂಟಿ ಇಲ್ವಾ? ಗ್ಯಾರಂಟಿ ಕಾರ್ಡ್ ಯಾಕೆ ಕೊಡಬೇಕು. ಗ್ಯಾರಂಟಿ ಕಾರ್ಡ್ ಅಲ್ಲ ಅದು ಜಸ್ಟ್ ವಿಸಿಟಿಂಗ್ ಕಾರ್ಡ್ ಎಂದು ಹೇಳಿದ್ದಾರೆ. ಮಂಗಳೂರಿನ ಹೆಲಿ ಪ್ಯಾಡ್ ನಲ್ಲಿ ಈ ಕುರಿತ ಪ್ರಶ್ನೆಗೆ ಸಿಎಂ ಬೊಮ್ಮಾಯಿ

ಮಂಗಳೂರು -ಕುಡಿಯುವ ಬಾವಿ ನೀರಿಗೆ ಸೇರಿದ ಡ್ರೈನೇಜ್ ನೀರು : ದೂರು ನೀಡಿದ್ರೂ ಸ್ಪಂದಿಸದ ಅಧಿಕಾರಿಗಳು

ಕುಡಿಯುವ ಬಾವಿಗೆ ಸೇರಿದೆ ಡ್ರೈನೇಜ್ ನೀರು, ಕಲುಷಿತ ನೀರು ಕುಡಿದು ಆರೋಗ್ಯ ಸಮಸ್ಯೆ, ದೂರು ನೀಡಿದ್ರೂ ನಮ್ಮ ಸಮಸ್ಯೆಯನ್ನು ಯಾರು ಸ್ಪಂದಿಸುತ್ತಿಲ್ಲ ಎಂದು ರೋಹಿತ್ ನಗರದ ನಿವಾಸಿಗಳು ಅಳಲನ್ನು ತೋಡಿಕೊಂಡಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ರೋಹಿತ್ ನಗರದ ಸೆಕೆಂಡ್ ಮೈನ್ ಕ್ರಾಸ್‍ನಲ್ಲಿ ವಾಸವಿರುವ ನಿವಾಸಿಗಳಿಗೆ ಬಾವಿ ನೀರಿನಲ್ಲಿ ಡ್ರೈನೇಜ್ ನೀರು ಶೇಖರಣೆಗೊಂಡು ಕುಡಿಯಲು ಯೋಗ್ಯವಿಲ್ಲದಂತಾಗಿದೆ. ಕಲುಷಿತ ನೀರು ಕುಡಿದು ಅಲ್ಲಿನ

19.20.21 ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಮಂಗಳೂರು ಬಿಷಪ್

ನೈಜ ಘಟನೆ ಆಧಾರಿತ ‘19.20.21’ ಕನ್ನಡ ಸಿನಿಮಾವನ್ನು ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ಅ.ವಂ.ಡಾ. ಪೀಟರ್ ಪೌಲ್ ಸಲ್ಡಾನಾ ಅವರು ಬುಧವಾರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಬೆಳ್ತಂಗಡಿಯ ಕುತ್ಲೂರಿನ ಮಲೆಕುಡಿಯರು ತಮ್ಮ ಹಕ್ಕುಗಳಿಗಾಗಿ ನಡೆಸಿದ ಹೋರಾಟ ಮತ್ತು ಈ ಸಂದರ್ಭದಲ್ಲಿ ವಿದ್ಯಾರ್ಥಿ ವಿಠಲ ಮಲೆಕುಡಿಯ ಹಾಗೂ ಅವರ ತಂದೆಯನ್ನು ನಕ್ಸಲ್ ಎಂಬ ಸುಳ್ಳು ಕೇಸು ದಾಖಲಿಸಿ ಬಂಧಿಸಿದ ಘಟನೆ , ಆ‌ ಬಳಿಕ ವಿಠಲ ಮಲೆಕುಡಿಯನ ಪರವಾಗಿ ನಡೆದ ಜನ

ಫಲಾನುಭವಿಗಳ ಸಮ್ಮೇಳನಕ್ಕೆ ಮುಖ್ಯಮಂತ್ರಿಗಳಿಂದ ಚಾಲನೆ

ಮಂಗಳೂರು, :- ಇಲ್ಲಿನ ಕರಾವಳಿ ಉತ್ಸವ ಮೈದಾನದಲ್ಲಿ ಮಾ‌16ರ ಗುರುವಾರ ಹಮ್ಮಿಕೊಳ್ಳಲಾಗಿದ್ದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನವನ್ನು ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಇಂಧನ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸುನಿಲ್ ಕುಮಾರ್, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲ ಸಾರಿಗೆ ಸಚಿವರಾದ ಎಸ್. ಅಂಗಾರ, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಸಚಿವರದ

ಪುಟ್ಟ ಕಂದಮ್ಮನ ಚಿಕಿತ್ಸೆಗೆ ಬೇಕಾಗಿದೆ ಸಹಾಯಹಸ್ತ

4 ವರ್ಷ ವಯಸ್ಸಿನ ಕಿರಿಯ ಮಗು ವಿಶ್ವ ಬಿಸಿನೀರಿನ ತೊಟ್ಟಿಗೆ ಬಿದ್ದು ತೀವ್ರ ಸುಟ್ಟ ಗಾಯಗಳಾಗಿವೆ. ಮಗುವಿನ ಹೊಟ್ಟೆಯಿಂದ ತೊಡೆಯವರೆಗೂ ಚರ್ಮವು ಕಾಣೆಯಾಗಿದೆ; ಮಗುವಿನ ಖಾಸಗಿ ಅಂಗದಲ್ಲಿ ಸೋಂಕನ್ನು ಹೊಂದಿದ್ದು ದೇಹದಾದ್ಯಂತ 50% ಸುಟ್ಟಗಾಯಗಳಿವೆ. ಮಗುವು ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು .ಎರಡು ವಾರಗಳು ಕಳೆದಿವೆ ಮತ್ತು ಇದುವರೆಗಿನ ಚಿಕಿತ್ಸೆಯು 1000 ರೂಪಾಯಿಗಳ ಎರಡು ಚುಚ್ಚುಮದ್ದು ಮತ್ತು ತೀವ್ರ ನಿಗಾ

ಬೈಂದೂರು ತಾಲೂಕು ಆಡಳಿತ ಸೌಧದ ನೂತನ ಕಟ್ಟಡ ಉದ್ಘಾಟನೆ

ಬೈಂದೂರು: ಬೈಂದೂರು ತಾಲೂಕು ಆಡಳಿತ ಸೌಧದ ನೂತನ ಕಟ್ಟಡ ಉದ್ಘಾಟನೆ ಸಮಾರಂಭ ಬೈಂದೂರಿನಲ್ಲಿ ನಡೆಯಿತು. ಸಂಸದ ಬಿ. ವೈ ರಾಘವೇಂದ್ರ ಅವರು ನೂತನ ಆಡಳಿತ ಸೌಧದ ನೂತನ ಕಟ್ಟಡ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ತಾಲೂಕು ಘೋಷಷಣೆಯಾದ ಬಳಿಕ ಬೈಂದೂರು ತಾಲೂಕು ಕೇಂದ್ರಕ್ಕೆ ಅವಶ್ಯಕತೆಯಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಪ್ರಮುಖ ಜವಬ್ದಾರಿಯಾಗಿರುತ್ತದೆ.ಹೀಗಾಗಿ ಬೈಂದೂರು ಅಭಿವೃದ್ದಿ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಹತ್ತು ಕೋಟಿ ಅನುದಾನದ

ಬೆಸೆಂಟ್ ಮಹಿಳಾ ಕಾಲೇಜಿನ ಗ್ರಂಥಪಾಲಕ ಲೋಕರಾಜ್ ವಿಟ್ಲ ಅವರಿಗೆ ಡಾಕ್ಟರೇಟ್ ಪದವಿ

ಮಂಗಳೂರಿನ ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಗ್ರಂಥಪಾಲಕರಾಗಿ ಕಾರ್ಯನಿರ್ವಹಿಸುತ್ತಿರುವ ಲೋಕರಾಜ್ ವಿಟ್ಲ ಅವರು ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಿಭಾಗದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿಯನ್ನು ನೀಡಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಗ್ರಂಥಪಾಲಕ ಡಾ. ಪುರುಷೋತ್ತಮ ಗೌಡ ಅವರ ಮಾರ್ಗದರ್ಶನದಲ್ಲಿ ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಿಭಾಗದಲ್ಲಿ ಮಂಡಿಸಿದ ಕಮ್ಯೂನಿಟಿ ಇನ್ಪಾರ್ಮೇಶನ್ ಸರ್ವೀಸಸ್ ಟು ದ ರೂರಲ್

ಬಹರೈನ್ : ಅಗಲಿದ ವಿದುಷಿ ಅಸ್ತಿಕಾ ಸುನಿಲ್ ಶೆಟ್ಟಿ ಯವರಿಗೆ ನುಡಿ ನಮನ

ಬಹರೈನ್; ಕಳೆದ ಸುಮಾರು ಎರಡೂವರೆ ದಶಕಗಳಿಂದ ಬಹರೈನ್ ನ ಸಾಂಸ್ಕ್ರತಿಕ ರಂಗಕ್ಕೆ ಅಪಾರ ಕೊಡುಗೆ ನೀಡುತ್ತಾ ಬಂದು ಇತ್ತೀಚಿಗೆ ಅಲ್ಪ ಕಾಲದ ಅನಾರೋಗ್ಯದಿಂದ ತಾಯ್ನಾಡಿನಲ್ಲಿ ಮರಣ ಹೊಂದಿದ ಶ್ರೀಮತಿ ಅಸ್ತಿಕಾ ಸುನಿಲ್ ಶೆಟ್ಟಿ ಯವರಿಗೆ ಇಲ್ಲಿನ “ಕನ್ನಡ ಭವನ”ದ ಸಭಾಂಗಣದಲ್ಲಿ ನುಡಿ ನಮನ ಕಾರ್ಯಕ್ರಮವನ್ನು ಕನ್ನಡ ಸಂಘ ಹಾಗು ಬಂಟ್ಸ್ ಬಹರೈನ್ ಸಂಘಟನೆಯು ಜಂಟಿಯಾಗಿ ಆಯೋಜಿಸಿತ್ತು. ಮೃತರ ಬಂಧು ಮಿತ್ರರು, ಶಿಷ್ಯರ ಬಳಗ, ವಿವಿಧ ಸಂಘಟನೆಗಳ ಪಧಾದಿಕಾರಿಗಳು

ಹೊಸಬೆಟ್ಟು ಜಟ್ಟಿ ನಿರ್ಮಾಣಕ್ಕೆ ವಿರೋಧವಿಲ್ಲ,ನಿರ್ವಸಿತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು : ಗ್ರಾಮಸ್ಥರಿಂದ ಆಗ್ರಹ

ಸಾಗರಮಾಲಾ ಯೋಜನೆಯಡಿ ಹೊಸಬೆಟ್ಟುವಿನಲ್ಲಿ ಜಟ್ಟಿ ನಿರ್ಮಾಣಕ್ಕೆ ನಮ್ಮದು ಯಾವುದೇ ವಿರೋಧವಿಲ್ಲ. ಆದರೆ ನಮ್ಮ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲಿನ ನಿರ್ವಸಿತರಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಎಂದು ಗ್ರಾಮಸ್ಥರು ಆಗ್ರಹಿಸಿದ್ದರು. ಅಧಿಕಾರಿಗಳು ಗ್ರಾಮಸ್ಥರ ಅಭಿಪ್ರಾಯವನ್ನು ಕೇಳದೆ, ನಮ್ಮ ನಿರ್ಧಾರಕ್ಕೆ ವಿರುದ್ಧವಾಗಿ ಕಾಮಗಾರಿ ಸಂಬಂಧ ಸರ್ವೆಗೆ ಮುಂದಾಗಿರುವುದು ಖಂಡನೀಯ. ನಮ್ಮ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು ಮತ್ತು ಜಟ್ಟಿ