Home Posts tagged #moodbidri

ಮೂಡುಬಿದಿರೆ: ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟ್ ಲಿ. ವತಿಯಿಂದ ಬೆಡ್‌ಶೀಟ್, ಟವಲ್, ಸಿಹಿತಿಂಡಿ ವಿತರಣೆ

ಮೂಡುಬಿದಿರೆ: 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟ್ ಲಿ. ಇದರ ವತಿಯಿಂದ ಪ್ರಜ್ಞಾ ಆಶ್ರಯ ಕೇಂದ್ರದ ವಿದ್ಯಾರ್ಥಿಗಳಿಗೆ ಬೆಡ್‌ಶೀಟ್, ಟವಲ್, ಸಿಹಿತಿಂಡಿ ವಿತರಣಾ ಕಾರ್ಯಕ್ರಮವು ನಡೆಯಿತು. ಮೂಡುಬಿದಿರೆ-ಮುಲ್ಕಿ ಕ್ಷೇತ್ರದ ಬಿಜೆಪಿ ಮಂಡಲ ಕಾರ್ಯದರ್ಶಿ ಹಾಗೂ ಪಂಚಶಕ್ತಿ ವಿವಿದೋದ್ದೇಶ ಸೇವಾ ಸಹಕಾರಿ

ಮೂಡುಬಿದಿರೆ : ವೃದ್ಧೆಯ ಕತ್ತಿನಿಂದ ಕರಿಮಣಿ ಸರ ಎಗರಿಸಿ ಪರಾರಿ

ದಾರಿ ಕೇಳುವ ನೆಪದಲ್ಲಿ ವೃದ್ಧೆಯೋವ೯ರ ಕುತ್ತಿಗೆಯಿಂದ 3-4 ಪವನಿನ ಕರಿಮಣಿ ಸರವನ್ನು ಎಗರಿಸಿದ ಘಟನೆ ಬೆಳುವಾಯಿ ಸಮೀಪ ಸೋಮವಾರ ನಡೆದಿದೆ.ಬೆಳುವಾಯಿ ಗ್ರಾಮದ ಕಾಯಿದೆ ಮನೆಯ ನಿವಾಸಿ ಎಪ್ಪತ್ತರ ಹರೆಯದ ಇಂದಿರಾ ಅವರು ಸೋಮವಾರದಂದು ತನ್ನ ಅಳಿಯ ಭಾಸ್ಕರ ಅವರ ಗೃಹಪ್ರವೇಶ ಮುಗಿಸಿಕೊಂಡು ಬೆಳುವಾಯಿ- ಕರಿಯಣಂಗಡಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದರು.ಈ ಸಂದರ್ಭದಲ್ಲಿ ಬೈಕ್ ನಲ್ಲಿ ಬಂದ ಅಪರಿಚಿತ ಯುವಕನೊಬ್ಬ ಬೆಳುವಾಯಿಗೆ ಹೋಗುವ ದಾರಿ ಯಾವುದು ‘ ಎಂದು

ಮೂಡುಬಿದಿರೆ: ಸಮಾಜ ಸೇವಕ, ಹೊಸಂಗಡಿ ಗ್ರಾಂ.ಪಂ.ಮಾಜಿ ಅಧ್ಯಕ್ಷ ಹರಿಪ್ರಸಾದ್ ನಿಧನ

ಮೂಡುಬಿದಿರೆ: ಸಮಾಜ ಸೇವಕ, ಹೊಸಂಗಡಿ ಗ್ರಾ.ಪಂ.ನ ಮಾಜಿ ಅಧ್ಯಕ್ಷ, ಪ್ರಸ್ತುತ ಸದಸ್ಯರಾಗಿರುವ ಹರಿಪ್ರಸಾದ್ ಅವರು ಹೃದಯಾಘಾತದಿಂದ ಭಾನುವಾರ ನಿಧನ ಹೊಂದಿದರು. ಹೊಸಂಗಡಿ ನಿವಾಸಿಯಾಗಿರುವ ಅವರು ಹರಿಯಣ್ಣ ಎಂದೇ ಚಿರಪರಿಚಿತರಾಗಿದ್ದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಧರಣೇಂದ್ರ ಕುಮಾರ್ ಅವರ ಸಹೋದರ. ಪೆರಾಡಿ ಸೊಸೈಟಿ ಬ್ಯಾಂಕ್ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವುದು ಮಾತ್ರವಲ್ಲದೆ ಹಲವಾರು ಸಮಾಜಮುಖಿ ಸಂಘ ಸಂಸ್ಥೆಗಳಲ್ಲಿ ತನ್ನನ್ನು ಸಕ್ರಿಯವಾಗಿ

ಪುತ್ತೂರು : ಫಿಲೋಮಿನಾ ಪ.ಪೂ. ಕಾಲೇಜಿನ ವಿದ್ಯಾರ್ಥಿ ನಿಖಿಲ್ ಬಿ. ಕೆ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಪುತ್ತೂರು : ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತಿ ಇದರ ಆಶ್ರಯದಲ್ಲಿ ಅ17 ಮತ್ತು 18ರಂದು ಬೆಂಗಳೂರಿನ ದೊಡ್ಡಬಳ್ಳಾಪುರದ ಶ್ರೀ ದೇವರಾಜ ಅರಸು ಪ ಪೂ ಕಾಲೇಜಿನಲ್ಲಿ ನಡೆದ ‘ವಿದ್ಯಾರ್ಥಿಗಳ ರಾಜ್ಯ ಮಟ್ಟದ ಕ್ರೀಡಾ ಕೂಟ 2024-25’ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ನಿಖಿಲ್ ಬಿ. ಕೆ ಇವರು ಪ್ರಥಮ

ಮೂಲ್ಕಿ : ಕ್ಯಾನ್‌ಕೋಸ್ ಡ್ರೈಫ್ರೂಟ್ಸ್ ಸ್ಟೋರ್‌ನಲ್ಲಿ ಗ್ರಾಹಕರಿಗೆ ವಿಶೇಷ ಆಫರ್

ಮೂಲ್ಕಿಯ ಲಯನ್ಸ್ ಸೌಧದಲ್ಲಿ ಕಾರ್ಯಾಚರಿಸುತ್ತಿರುವ ಕ್ಯಾನ್‌ಕೋಸ್ ಡ್ರೈಫ್ರೂಟ್ಸ್ ಸ್ಟೋರ್‌ನಲ್ಲಿ ದೀಪಾವಳಿ ಮತ್ತು ಹೊಸ ವರ್ಷದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರ್ ನೀಡುತ್ತಿದ್ದಾರೆ. ಕ್ಯಾನ್‌ಕೋಸ್ ಡ್ರೈಫ್ರೂಟ್ಸ್ ಸ್ಟೋರ್‌ನಲ್ಲಿ 2000 ರೂಗಳ ಖರೀದಿಗೆ ಗ್ರಾಹಕರಿಗೆ 100ಗ್ರಾಂ ಬಾದಾಮಿ ಉಚಿತ, ಹಾಗೂ ಮೊದಲ 100 ಗ್ರಾಹಕರಿಗೆ 50ಗ್ರಾಂನ ಡ್ರೈಫ್ರೂಟ್ಸ್ ಮಿಕ್ಸ್ ಹಾಗೂ 100 ಗ್ರಾಂನ ಖರ್ಜೂರ ಉಚಿತವಾಗಿ ಪಡೆಯುವ ಅವಕಾಶ ನೀಡಿದ್ದಾರೆ.ಇದು ಸೀಮಿತ ಅವಧಿಗೆ

ಮಂಗಳೂರು ವಿ.ವಿ. ಬ್ಯಾಡ್ಮಿಂಟನ್: 16ನೇ ಬಾರಿ ಆಳ್ವಾಸ್ ಚಾಂಪಿಯನ್

ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರಕಾಲೇಜು ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ವಿಭಾಗದಲ್ಲಿ ಸತತ 16ನೇ ಬಾರಿ ಚಾಂಪಿಯನ್ ಆಗಿರುವ ಆಳ್ವಾಸ್ ಕಾಲೇಜು ತಂಡವು ‘ಶ್ರೀ ಕೆಮ್ಮಾರು ಬಾಲಕೃಷ್ಣ ಗೌಡ ಸ್ಮರಣಾರ್ಥ ಟ್ರೋಫಿ’ಯನ್ನು ಎತ್ತಿ ಹಿಡಿದಿದೆ. ಮಹಿಳಾ ವಿಭಾಗದಲ್ಲಿ ಆಳ್ವಾಸ್ ಕಾಲೇಜು ತೃತೀಯ ಸ್ಥಾನ ಪಡೆದಿದೆ.ಮಂಗಳೂರಿನ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಶ್ರಯದಲ್ಲಿ ನಡೆದ ಟೂರ್ನಿಯ ಪುರುಷರ ವಿಭಾಗದ ಫೈನಲ್‌ನಲ್ಲಿ ಆಳ್ವಾಸ್ ಕಾಲೇಜು ತಂಡವು ೩-೦

ಮೂಡುಬಿದಿರೆ: ಈಕೋ- ಮ್ಯಾಸ್ಟ್ರೋ ಢಿಕ್ಕಿ: ಮರಿಯಾಡಿ ನಿವಾಸಿ ಮೃತ್ಯು

ಮೂಡುಬಿದಿರೆ: ತಾಲೂಕಿನ ಕೋಟೆಬಾಗಿಲು ಬಳಿ ಸೋಮವಾರ ಮಧ್ಯಾಹ್ನ ಈಕೋ-ಮ್ಯಾಸ್ಟ್ರೋ ಢಿಕ್ಕಿಯಾಗಿ ಮರಿಯಾಡಿಯ ನಿವಾಸಿ ಅಹಮದ್ ಬಾವ (50) ಅವರು ಮೃತಪಟ್ಟಿದ್ದಾರೆ.ಮೂಡುಬಿದಿರೆ ಕಡೆಗೆ ಬರುತ್ತಿದ್ದ ಈಕೋ ಕಾರು ಮೂಡುಬಿದಿರೆಯಿಂದ ಮರಿಯಾಡಿ ಕಡೆಗೆ ಹೋಗುತ್ತಿದ್ದ ಮ್ಯಾಸ್ಟ್ರೊ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡಿದ್ದ ಮ್ಯಾಸ್ಟ್ರೋ ಸವಾರ ಅಹಮದ್ ಬಾವ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ

ಮೂಡುಬಿದಿರೆಯ ಕನ್ನಡ ಭವನದಲ್ಲಿ ಶಿವರಾಮ ಕಾರಂತ ಪ್ರಶಸ್ತಿ ಮತ್ತು ಪುರಸ್ಕಾರ ಪ್ರದಾನ

ಮೂಡುಬಿದಿರೆ: ಬಹು ವಿರಳವಾದ ವ್ಯಕ್ತಿತ್ವವನ್ನು ಹೊಂದಿದ್ದ ಶಿವರಾಮ ಕಾರಂತರು ತಮಗೆ ಅನಿಸಿದ್ದನ್ನು, ಮನಸ್ಸಿಗೆ ಬಂದದನ್ನು ನೇರವಾಗಿ ಹೇಳುತ್ತಿದ್ದರಲ್ಲದೆ ವಿಮರ್ಶೆ ಮಾಡಿ ಜೀವನ ಮಾಡು ಎಂಬ ವಿಚಾರವನ್ನು ಬಿಟ್ಟು ಹೋದವರು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕ್ರತ ಲಕ್ಷ್ಮೀಶ ತೋಳ್ಪಾಡಿ ಹೇಳಿದರು. ಅವರು ಶಿವರಾಮ ಕಾರಂತ ಪ್ರತಿಷ್ಠಾನ ಮೂಡುಬಿದಿರೆ ಇದರ ವತಿಯಿಂದ ಮೂಡುಬಿದಿರೆ ಕನ್ನಡ ಭವನದ ಮಹಾಕವಿ ರತ್ನಾಕರ ವರ್ಣಿ ವೇದಿಕೆಯಲ್ಲಿ ನಡೆದ 2023ನೇ

ಮೂಡುಬಿದಿರೆ : ವಿಸ್ಡಮ್ ಇನ್ಸ್ಟಿಟ್ಯೂಶನ್ಸ್ ನೆಟ್ ವರ್ಕ್ ನ ಮೂರನೇ ಶಾಖೆ ಆರಂಭ

ಮೂಡುಬಿದಿರೆ: ವಿಶ್ ಡಮ್ ಇನ್ಸ್ಟಿಟ್ಯೂಶನ್ಸ್ ನೆಟ್ ವಕ್ ೯ನ ಮೂರನೇ ಶಾಖೆಯು ಮೂಡುಬಿದಿರೆಯ ಪ್ರಭು ಕಾಂಪ್ಲೆಕ್ಸ್ ನಲ್ಲಿ ಸೋಮವಾರ ಉದ್ಘಾಟನೆಗೊಂಡಿತು. ಭಾರತದ ಒಳಗಡೆ ಮತ್ತು ಹೊರ ದೇಶಗಳಲ್ಲಿ ಉದ್ಯೋಗಾವಕಾಶ ಲಭಿಸಲು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ, ಕೌಶಲಾ ಆಧಾರಿತ ತರಬೇತಿ, ಶುಲ್ಕ ಸಹಿತ ಇಂಟನ್ ಶಿಫ್ ಸೌಲಭ್ಯ, ಕಾಲೇಜುಗಳಲ್ಲಿ ಪಾಲನಾ ಕೇಂದ್ರಗಳು ಮೊದಲಾದ ಉದ್ದೇಶಗಳನ್ನಿಟ್ಟುಕೊಂಡು ಆರಂಭಗೊಂಡಿರುವ ಈ ಕೇಂದ್ರವನ್ನು ಉದ್ಯಮಿ ಕೆ.ಶ್ರೀಪತಿ ಭಟ್ ಉದ್ಘಾಟಿಸಿದರು.

ಮೂಡುಬಿದ್ರಿ : ಬಂಟರ ಸಂಘ ಮಹಿಳಾ ಘಟಕದ ಪ್ರಥಮ ವಾರ್ಷಿಕೋತ್ಸವ

ಬಂಟರ ಸಂಘ ಮಹಿಳಾ ಘಟಕ ಮೂಡುಬಿದ್ರಿ ಇದರ ಪ್ರಥಮ ವಾರ್ಷಿಕೋತ್ಸವ ಸಮಾರಂಭವು ಮೋಹಿನಿ ಅಪ್ಪಾಜಿ ನಾಯಕ್ ಸಭಾಂಗಣ ವಿದ್ಯಾಗಿರಿ ಮೂಡುಬಿದ್ರಿ ಇಲ್ಲಿ ನೆರವೇರಿತು. ಸಮಾರಂಭದ ಅಧ್ಯಕ್ಷತೆಯನ್ನ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಶೋಭಾ ಎಸ್ ಹೆಗ್ಡೆ ಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಂಟರ ಸಂಘ ಮೂಡುಬಿದರೆ (ರಿ) ಇದರ ಅಧ್ಯಕ್ಷರಾದ ಶ್ರೀ ತಿಮ್ಮಯ್ಯ ಶೆಟ್ಟಿ ಅವರು ವಹಿಸಿದ್ದರು. ಸಮಾರಂಭದ ಉದ್ಘಾಟನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ) ಇದರ ಅಧ್ಯಕ್ಷರಾದ