Home Posts tagged pressmeet

2023-24ನೇ ಸಾಲಿನ SSLC ಪರೀಕ್ಷಾ ಫಲಿತಾಂಶ ಪ್ರಕಟ – ಉಡುಪಿ ಪ್ರಥಮ, ದ.ಕ. ದ್ವಿತೀಯ

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಇದೀಗ ಪ್ರಕಟವಾಗಿದ್ದು, ಶೇ. 73.4 ಮಂದಿ ತೇರ್ಗಡೆಯಾಗಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಬೆಂಗಳೂರಿನ ಮಲ್ಲೇಶ್ವರಂನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿತು. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಮಂಜುಶ್ರೀ ಹಾಗೂ

ನರೇಂದ್ರ ಮೋದಿ ಒಬ್ಬ ಹಿಟ್ಲರ್: ವೀರಪ್ಪ ಮೊಯ್ಲಿ

ಕೇಂದ್ರದಲ್ಲಿ ಹಿಟ್ಲರ್ ಸರ್ಕಾರವಿದೆ. ನರೇಂದ್ರ ಮೋದಿ ಒಬ್ಬ ಹಿಟ್ಲರ್, ಅವರ ಸರ್ಕಾರವನ್ನು ಕಿತ್ತೊಗೆಯುವುದೇ ನಮ್ಮ ಉದ್ದೇಶವಾಗಿದೆ ಎಂದು ಮಾಜಿ ಸಿಎಂ,ಹಿರಿಯ ಕಾಂಗ್ರೆಸ್ ಮುಖಂಡ ವೀರಪ್ಪ ಮೊಯ್ಲಿ ಹೇಳಿದ್ದಾರೆ. ಅವರು ಕಾರ್ಕಳ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಮೀನುಗಾರರಿಗೆ ಯಾವ ಸೌಕರ್ಯಗಳನ್ನು ಕೂಡ ಬಿಜೆಪಿ ಸರ್ಕಾರ ಕಲ್ಪಿಸಿಲ್ಲ. ಮಂಗಳೂರಿನ ಅಳಿವೆ ಬಂದರಿನಲ್ಲಿ ಹೂಳೆತ್ತುವ ಕಾರ್ಯವನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ. ಉಡುಪಿ,

ಪುತ್ತೂರು:ಪದ್ಮರಾಜ್ ಪರಿವಾರ ವಾಟ್ಸ್‌ಆಪ್ ಗ್ರೂಪ್ ವಿವಾದ: ನಾರಾಯಣ್ ಪ್ರಲಾಪಕ್ಕೆ ಅಮಳ ರಾಮಚಂದ್ರ ಕಿಡಿ

ಪುತ್ತೂರು: ಕೋತಿ ಬೆಣ್ಣೆ ತಿಂದು ಬೆಕ್ಕಿನ ಮುಖಕ್ಕೆ ಒರೆಸಿದ ಹಾಗೆ ತಮ್ಮ ಮುಖ ಉಳಿಸಿಕೊಳ್ಳಲು ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿರುವ ಬಿಜೆಪಿ ಹಿಂದುಳಿದ ವರ್ಗದ ರಾಜ್ಯ ಕಾರ್ಯದರ್ಶಿ ಆರ್.ಸಿ ನಾರಾಯಣ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಹೇಳಿದ್ದಾರೆ. “ಪದ್ಮರಾಜ್ ಪರಿವಾರ” ವಾಟ್ಸ್‌ಆಪ್ ಗ್ರೂಪ್ ವಿವಾದಕ್ಕೆ ಸಂಬಂಧಪಟ್ಟಂತೆ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಮಲ ರಾಮಚಂದ್ರ ಮಾತನಾಡಿ ನಾನು

ಎ.12ರಂದು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಾಪನಾ ದಿನಾಚರಣೆ

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಉಡುಪಿ ಗಿರಿಜಾ ಗ್ರೂಪ್ ಆಫ್ ಕನ್ಸರ್ನ್ ಹಾಗೂ ಉಡುಪಿ ಪತ್ರಿಕಾ ಭವನ ಸಮಿತಿಯ ಸಹಯೋಗದೊಂದಿಗೆ ಸಂಘದ ಸ್ಥಾಪನಾ ದಿನಾಚರಣೆಯನ್ನು ಎ.12ರಂದು ಬೆಳಗ್ಗೆ 10.30ಕ್ಕೆ ಉಡುಪಿ ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ತಿಳಿಸಿದ್ದಾರೆ. ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು

ಎಸ್‌ಸಿಡಿಸಿಸಿ ಬ್ಯಾಂಕ್ 79.09 ಕೋಟಿ ರೂ. ಸಾರ್ವಕಾಲಿಕ ದಾಖಲೆ ಲಾಭ

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಗರ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ 113 ಶಾಖೆಗಳ ಮೂಲಕ ಉತ್ಕೃಷ್ಟ ಬ್ಯಾಂಕಿಂಗ್ ಸೇವೆಯನ್ನು ನೀಡುತ್ತಿದ್ದು, ವರದಿ ವರ್ಷದಲ್ಲಿ ಅಮೋಘ ಸಾಧನೆಯನ್ನು ಮಾಡಿದೆ. ಆರ್ಥಿಕ ವರ್ಷದಲ್ಲಿ ಬ್ಯಾಂಕ್ 79.09 ಕೋಟಿ ರೂಪಾಯಿ ಲಾಭವನ್ನು ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷರಾದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು. ಅವರು ನಗರದ ಎಸ್‌ಸಿಡಿಸಿಸಿ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಬ್ಯಾಂಕ್‌ನ

ಉಳ್ಳಾಲದ ಮೊಗವೀರ ಬಾಲಕಿಯ ಮಹತ್ತರ ಸಾಧನೆ

ಉಳ್ಳಾಲ: 2024ರ ಮೇ, ತಿಂಗಳಲ್ಲಿ ಅಮರಿಕಾದ ನ್ಯೂಯಾರ್ಕ್‌ನಲ್ಲಿ ಜರಗುವ ವರ್ಲ್ಡ್ ಸೈನ್ಸ್ ಸ್ಕಾಲರ್ ಕಾರ್ಯಕ್ರಮಕ್ಕೆ ಉಳ್ಳಾಲದ ಮೊಗವೀರ ಸಮಾಜದ ಬಾಲಕಿ ಸಿಂಧೂರಳಿಗೆ ಆಹ್ವಾನ ಬಂದಿದ್ದು, ಮುಂದಿನ ತಿಂಗಳು ತಾಯಿ ಮಗಳು ಇಬ್ಬರು ಭಾಗಿಯಾಗಲಿದ್ದಾರೆ ಎಂದು ಬಾಲಕಿಯ ತಾಯಿ ಶಿಬಾನಿ ರಾಜಾ ಹೇಳಿದರು. ತೊಕ್ಕೊಟ್ಟು ಸೇವಾಸೌಧದಲ್ಲಿನ ಉಳ್ಳಾಲ ಪ್ರೆಸ್‌ಕ್ಲಬ್ ನಲ್ಲಿ ಹಮ್ಮಿಕೊಂಡಿದ್ದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ನ್ಯೂಯಾರ್ಕ್‌ನಲ್ಲಿ ನಡೆಯುವ ವರ್ಲ್ಡ್ ಸೈನ್ಸ್ ಸ್ಕಾಲರ್

ಮೂಡುಬಿದಿರೆ: ಎ.2ರಿಂದ 5ರವರೆ ಬ್ರಹ್ಮಕಲಶೋತ್ಸವ ಮತ್ತು ವರ್ಷಾವಧಿ ಜಾತ್ರಾ ಮಹೋತ್ಸವದ ಸಂಭ್ರಮದಲ್ಲಿ ಶ್ರೀ ಕ್ಷೇತ್ರ ಬನ್ನಡ್ಕ

ಮೂಡುಬಿದಿರೆ: ಸುಮಾರು 800 ವರ್ಷಗಳ ಇತಿಹಾಸವನ್ನು ಹೊಂದಿರುವ ತಾಲೂಕಿನ ವಿಶೇಷವಾದ ಕ್ಷೇತ್ರ ಶ್ರೀ ಕ್ಷೇತ್ರ ಬನ್ನಡ್ಕದಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಕಲಶೋತ್ಸವ ಮತ್ತು ವರ್ಷಾವಧಿ ನೇಮೋತ್ಸವವು ಸಂಭ್ರಮದಿಂದ ನಡೆಯಲಿದೆ.ವೇದಮೂರ್ತಿ ಅನಂತ ಪದ್ಮನಾಭ ಅಸ್ರಣ್ಣರ ನೇತ್ರತ್ವದಲ್ಲಿ ಏ.2 ರಂದು ಬೆಳಿಗ್ಗೆ ನೂತನ ಧ್ವಜಸ್ತಂಭ ಪ್ರತಿಷ್ಠೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಪುಣ್ಯಯ ಗಣಹೋಮ ನಡೆಯಲಿದೆ ಎಂದು ಸಮಿತಿಯ

ಪುತ್ತೂರು: ಅಂದ್ರಟ್ಟ ಸೇತುವೆ ಕಾಮಗಾರಿಗೆ ಎರೆಡೆರಡು ಬಾರಿ ಶಿಲಾನ್ಯಾಸ

ಪುತ್ತೂರು: ಶಾಂತಿಗೋಡು ಮತ್ತು ನರಿಮೊಗರು ಗ್ರಾಮದ ಅಂದ್ರಟ್ಟದ ಸಂಪರ್ಕ ಸೇತುವೆಗೆ 2023 ರ ಮಾರ್ಚ್ 19ರಂದು ಆಗಿನ ಶಾಸಕ ಸಂಜೀವ ಮಠಂದೂರು ಅವರು ಶಿಲಾನ್ಯಾಸ ನೆರವೇರಿಸಿದ್ದರು. ಇದೀಗ ಅದೇ ಕಾಮಗಾರಿಗೆ ಈಗಿನ ಶಾಸಕ ಅಶೋಕ್ ಕುಮಾರ್ ರೈ ಅವರು ಶಿಲಾನ್ಯಾಸ ನೆರವೇರಿಸಿದ್ದಾರೆ ಎಂದು ಶಾಂತಿಗೋಡು ಶಕ್ತಿ ಕೇಂದ್ರದ ಅಧ್ಯಕ್ಷ ಶ್ಯಾಂ ಭಟ್ ಮತ್ತು ಚಿಕ್ಕಮುಡ್ನೂರು ಶಕ್ತಿ ಕೇಂದ್ರದ ಅಧ್ಯಕ್ಷ ನಾಗೇಶ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದ್ರಟ್ಟದಲ್ಲಿ 2ನೇ

ವಿಟ್ಲ: ಜ.13ರಂದು ಕನ್ಯಾನ ದೇಲಂತಬೆಟ್ಟು ಶಾಲೆಯ ಅಮೃತ ಮಹೋತ್ಸವ

ಕನ್ಯಾನ ಗ್ರಾಮದ ದೇಲಂತಬೆಟ್ಟು ದ.ಕ.ಜಿ.ಪಂ.ಉನ್ನತ ಹಿ.ಪ್ರಾ.ಶಾಲೆಯ ಅಮೃತ ಮಹೋತ್ಸವ ಸಮಾರಂಭ ಅಮೃತ ಸಿಂಚನ ಕಾರ್ಯಕ್ರಮ ಜ.13ರಂದು ನಡೆಯಲಿದೆ. 1948 ಜೂ.1ರಂದು ಆರಂಭವಾದ ಈ ಶಾಲೆಗೆ 75 ವರ್ಷ ತುಂಬಿದ್ದು, ಹಳೆ ವಿದ್ಯಾರ್ಥಿಗಳು, ಅಮೃತ ಮಹೋತ್ಸವ ಸಮಿತಿ ಮತ್ತು ಶಾಲಾಭಿವೃದ್ಧಿ ಸಮಿತಿ ಜತೆಗೂಡಿ ಅಮೃತ ಮಹೋತ್ಸವವವನ್ನು ಆಚರಿಸಲಿದೆ ಎಂದು ಅಧ್ಯಕ್ಷ ಡಿ.ಶ್ರೀನಿವಾಸ್ ಹೇಳಿದರು.ಅವರು ವಿಟ್ಲದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜ.13ರಂದು ಬೆಳಗ್ಗೆ 9 ಗಂಟೆಗೆ