ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಪುತ್ತೂರು ಘಟಕವು ಸುಮಾರು 50 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಹೊಸ ಕಛೇರಿ ನಿರ್ಮಿಸುವ ಸಲುವಾಗಿ ಸರಕಾರದಿಂದ 10 ಸೆಂಟ್ಸ್ ಖಾಲಿ ಜಾಗ ಕೊಟೆಚಾ ಸಭಾಂಗಣದ ಸಮೀಪದ ಶಿವನಗರದಲ್ಲಿ ಮಂಜೂರಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ಪುತ್ತೂರು ಘಟಕಕ್ಕೆ ಭೇಟಿ ನೀಡಿ ಹೊಸತಾಗಿ
ಪುತ್ತೂರು: ಪುತ್ತೂರಿನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಮೊದಲು ಕನಸು ಕಂಡವರೇ ನಾವು ಎಂದು ಬಿಜೆಪಿ ಜಿಲ್ಲಾ ಓಬಿಸಿ ಮೋರ್ಚಾ ಅಧ್ಯಕ್ಷ ಆರ್.ಸಿ. ನಾರಾಯಣ್ ಅವರು ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡಿದ್ದು, ಕಾಲೇಜು ಹೋರಾಟ ಅಭಿಯಾನ ಕಾಂಗ್ರೆಸ್ನ ಟೂಲ್ ಕಿಟ್ ಎಂದು ಆಪಾದಿಸಿದ್ದಾರೆ. ಒಂದು ವೇಳೆ ಬಿಜೆಪಿ ಮೆಡಿಕಲ್ ಕಾಲೇಜಿಗೆ ಮೊದಲು ಕನಸು ಕಂಡಿದ್ದು ನಿಜವೇ ಆಗಿದ್ದರೆ ಪುತ್ತೂರು ಶಾಸಕರು ಮೆಡಿಕಲ್ ಕಾಲೇಜಿಗೆ ಮೀಸಲಿಟ್ಟ ಜಾಗದಲ್ಲಿ `ಸೀಫುಡ್
ಪುತ್ತೂರು: ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ರೈತರ ಮತ್ತು ರಾಷ್ಟ್ರದ ಸಮಗ್ರ ಅಭಿವೃದ್ಧಿಯ ಧ್ಯೇಯೋದ್ದೇಶವನ್ನು ಒಳಗೊಂಡಿರುವ ವಿವಿಧ ಆಯಾಮಗಳನ್ನು ಹೊಂದಿರುವ ಏಕರೂಪಿ ನಿಯಮಾಧಾರಿತ ಕೃಷಿ ಪತ್ತಿನ ಸಹಕಾರಿ ಸಂಘ(ಪಿಎಸಿಎಸ್)ಗಳನ್ನು ದೇಶದ ಪ್ರತೀ ಗ್ರಾಮ ಪಂಚಾಯತ್‌ಗಳಲ್ಲಿ ಮುಂದಿನ ಮೂರು ವರ್ಷಗಳೊಳಗೆ ಸ್ಥಾಪಿಸಲಾಗುವುದು ಎಂದು ಕೇಂದ್ರದ ಪ್ರಥಮ ಸಹಕಾರಿ ಮತ್ತು ಗೃಹ ಸಚಿವ ಅಮಿತ್ ಶಾ ಪ್ರಕಟಿಸಿದರು. ಅವರು ಪುತ್ತೂರು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರಮಂಗಲದ ಹನುಮಗಿರಿಯ ಅಮರಗಿರಿಯಲ್ಲಿ ಧರ್ಮಶ್ರೀ ಪ್ರತಿಷ್ಠಾನ ವತಿಯಿಂದ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಭಾರತೀ ಅಮರಜ್ಯೋತಿ ಮಂದಿರ ಥೀಮ್ ಪಾರ್ಕ್ ಅನ್ನು ಕೇಂದ್ರದ ಗೃಹ ಹಾಗೂ ಸಹಕಾರ ಸಚಿವರಾದ ಅಮಿತ್ ಶಾ ಅವರು ಲೋಕಾರ್ಪಣೆ ಮಾಡಿದರು. ಭಾರತಮಾತೆಗೆ ಪುಷ್ಪಾರ್ಚನೆ ಮಾಡಿದ ಅಮಿತ್ ಶಾ ಅವರು ನಂತರ ಸಂದರ್ಶಕರ ಪುಸ್ತಕದಲ್ಲಿ ಅಮರಗಿರಿಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಬರೆದು ಹಸ್ತಾಕ್ಷರ
ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನ.20 ರಂದು ದೇವಳದ ತಂತ್ರಿ ಬ್ರಹ್ಮಶ್ರೀ ವೇ ಮೂ ಕುಂಟಾರು ರವೀಶ್ ತಂತ್ರಿಯವರ ಮಾರ್ಗದರ್ಶನದಲ್ಲಿ ವೇ ಮೂ ಶ್ರೀಧರ್ ತಂತ್ರಿಯವರ ನೇತೃತ್ವದಲ್ಲಿ ಪೂಕರೆ ಉತ್ಸವ ವಿಜೃಂಭಣೆಯಿಂದ ನಡೆದಿದೆ. ನಂದಿ ಮುಖವಾಡ ಧರಿಸಿದ `ಎರುಕೊಳ’ ದೈವದೊಂದಿಗೆ ದೇವರ ಉತ್ಸವ ಬರುವುದೇ ವಿಶೇಷ. ಸಂಜೆ ದೇವರು ಉತ್ಸವ ಸವಾರಿಗೆ ದೇವಳದ ಪಶ್ಚಿಮ ದ್ವಾರದಿಂದ ಹೊರಟು ಪೇಟೆ ಸವಾರಿಯಲ್ಲಿ ನಂದಿಯ ಮುಖವಾಡ