ಬೈಂದೂರಿನ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಜೂನಿಯರ್ ಎನ್‌ಟಿಆರ್ ಕುಟುಂಬ ಸಮೇತರಾಗಿ ಭೇಟಿ ನೀಡಿದರು. ಅವರಿಗೆ ನಟ ರಿಷಬ್ ಶೆಟ್ಟಿ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಅವರು ಸಾಥ್ ನೀಡಿದರು. ನಟ ತಾರಕ್ ರಾಮ್, ರಿಷಬ್, ನೀಲ್ ಕುಟುಂಬದಿಂದ ತಾಯಿ ಮೂಕಾಂಬಿಕೆಯ ದರ್ಶನ ಪಡೆದರು. ತಾಯಿ ಶಾಲಿನಿ ನಂದಮೂರಿ, ಪತ್ನಿ ಲಕ್ಷ್ಮೀ ಪ್ರಣತಿ, ಪ್ರಗತಿ ರಿಷಬ್
ಕುಂದಾಪುರ:ಕಾಂತಾರ ಸಿನೆಮಾದ ಮೂಲಕ ಮನೆ ಮಾತಾಗಿರುವ ಜನಪ್ರಿಯ ನಟ ರಿಷಬ್ ಶೆಟ್ಟಿ ಅವರು ಕುಂದಾಪುರ ಹೊಳೆಯಲ್ಲಿ ಗಾಳ ಹಾಕಿ ಮೀನು ಹಿಡಿಯುವುದರ ಮುಖೇನ ಗಮನ ಸೆಳೆದಿದ್ದಾರೆ.ಕುರುಡಿ,ಕೆಂಬೇರಿ,ಕಲ್ಲ್ ಪೊಟರಿ,ಹೊಳೆ ಬೈಗಿ ಸೇರಿದಂತೆ ಇನ್ನಿತರ ಜಾತಿಯ ಮೀನುಗಳು ಅವರ ಗಾಳಕ್ಕೆ ಬಿದ್ದಿದ್ದು. ಗಾಳ ಹಾಕಿ ಮೀನು ಹಿಡಿಯುವುದರಲ್ಲಿಯೂ ಪಂಟರ್ ಎನಿಸಿಕೊಂಡಿದ್ದಾರೆ.ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವುದರ ಮುಖೇನ ಗ್ರಾಮೀಣ ಬದುಕನ್ನು ಆಸ್ವಾಧಿಸುವುದರ ಮೂಲಕ ತಾನೊಬ್ಬ
ರಾಹುಲ್ ರಾವೆಲ್ ಅಧ್ಯಕ್ಷತೆಯ ತೀರ್ಪುಗಾರರ ಸಮಿತಿಯು 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟಿಸಿದ್ದು ರಿಷಬ್ ಶೆಟ್ಟಿ ಶ್ರೇಷ್ಠ ನಟ ಮತ್ತು ನಿತ್ಯಾ ಮೆನನ್, ಮಾನಸಿ ಪಾರೇಕ್ ಜಂಟಿಯಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಮಲಯಾಳಿ ಚಿತ್ರ ಆಟ್ಟಂ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಪಡೆಯಿತು. ಕಾಂತಾರ ಚಿತ್ರವು ಉತ್ತಮ ಮನೋರಂಜನಾ ಚಿತ್ರ ಎನಿಸಿತು. ಬ್ರಹ್ಮಾಸ್ತ್ರವು ಉತ್ತಮ ವಿಎಫ್‌ಎಕ್ಸ್ ಚಲನಚಿತ್ರ ಪ್ರಶಸ್ತಿಗೆ ಬಾಜನವಾಯಿತು.ಪ್ರಶಸ್ತಿ
ಗೋವಾದ ಪಣಜಿಯ ಐನಾಕ್ಸ್‌ನಲ್ಲಿ ನಡೆದ ಎಂಟು ದಿನದ 54ನೇ ಚಲನಚಿತ್ರೋತ್ಸವ ಮುಗಿದಿದ್ದು, ಪರ್ಶಿಯಾದ ಅಬ್ಬಾಸ್ ಅಮಿನಿ ಅವರ ಎಂಡ್‌ಲೆಸ್ ಬಾರ್ಡರ್ಸ್ ಚಿತ್ರವು ಬಂಗಾರದ ನವಿಲು ಶ್ರೇಷ್ಠ ಚಿತ್ರ ಪ್ರಶಸ್ತಿಯನ್ನು ಗಳಿಸಿತು. ಆಂಟನಿ ಚೆನ್ ಅವರ ಡ್ರಿಫ್ಟ್ ಚಲನಚಿತ್ರವು ಯುನೆಸ್ಕೋ ಗಾಂಧಿ ಪ್ರಶಸ್ತಿಯನ್ನು ಪಡೆಯಿತು. ಕಾಂತಾರಕ್ಕಾಗಿ ರಿಷಬ್ ಶೆಟ್ಟಿ ತೀರ್ಪುಗಾರರ ವಿಶೇಷ ಪ್ರಶಸ್ತಿ ಪಡೆದರು
ಕುಕ್ಕೆ ಸುಬ್ರಹ್ಮಣ್ಯ: ಕಾಂತಾರ ಸಿನಿಮಾ ಖ್ಯಾತಿಯ ರಿಷಭ್ ಶೆಟ್ಟಿ ಇಂದು ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ದೇಶದಾಧ್ಯಂತ ಗಮನ ಸೆಳೆದ ಕಾಂತರ ಸಿನಿಮಾದ ನಟ, ನಿರ್ದೇಶಕ ರಿಷಭ್ ಶೆಟ್ಟಿ ಕುಟುಂಬ ಸಮೇತರಾಗಿ ಇಂದು ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿದರು. ಬಳಿಕ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ ಅಭಿಮಾನಿಗಳು ಸೆಲ್ಪಿಗಾಗಿ ಮುಗಿಬಿದ್ದರು.
ಬೈಂದೂರು ವಿಧಾನಸಭಾ ಕ್ಷೇತ್ರದ ಕೆರಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೂತ್ನಲ್ಲಿ ಮತ ಚಲಾಯಿಸಿದ ಅವರು, ಮತದಾನ ನಮ್ಮೆಲ್ಲರ ಹಕ್ಕು, ಪ್ರಜಾಪ್ರಭುತ್ವ ರಾಷ್ಟ್ರದ ಪ್ರಜೆಯಾಗಿರುವುದು ನಮಗೆ ಹೆಮ್ಮೆ. ಹಾಗೆಯೇ, ಮತ ಹಾಕುವುದು ನಮ್ಮ ಹಕ್ಕು ಮಾತ್ರವಲ್ಲ, ಜವಾಬ್ದಾರಿ ಕೂಡ.. ಉತ್ತಮ ಸಮಾಜದ ನಿರ್ಮಾಣಕ್ಕಾಗಿ, ಸಮರ್ಥ ಜನಪ್ರತಿನಿಧಿಯ ಆಯ್ಕೆಗಾಗಿ ತಪ್ಪದೇ ಮತ ಚಲಾಯಿಸಿ ಎಂದು ಕರೆ ನೀಡಿದರು.
ಫೆ.20ರಂದು ಮುಂಬೈನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ನಟ ರಿಷಬ್ ಶೆಟ್ಟಿ ‘ದಾದಾ ಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಸಿನಿಮೋತ್ಸವ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ರಿಷಬ್ ಶೆಟ್ಟಿ ಅವರು ಕಪ್ಪು ಬಣ್ಣದ ಶರ್ಟ್ ಹಾಗೂ ಬಿಳಿ ಬಣ್ಣದ ಪಂಚೆ ಧರಿಸಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ತೆರಳಿದ್ದು ವಿಶೇಷವಾಗಿತ್ತು. ನಮ್ಮ ಸಂಸ್ಕೃತಿಯನ್ನು ಎಲ್ಲ ಕಡೆಗಳಲ್ಲಿ ಪಸರಿಸುವ ಕೆಲಸ ಮಾಡುತ್ತಿರುವ ರಿಷಬ್ಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ