Home Posts tagged #udupi (Page 20)

ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಣಿಪುರ ಹಿಂಸಾಚಾರ ಖಂಡಿಸಿ ಪ್ರತಿಭಟನೆ

ಮಣಿಪುರದಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸುಧೀರ್ ಕುಮಾರ್ ಅವರು, ಮೈಥೇಯಿ-ಕುಕಿ-ನಾಗಾ ಸಮುದಾಯದಲ್ಲಿ ಎಷ್ಟು ಸಂಖ್ಯೆ ಇದೆ ಗೊತ್ತಿಲ್ಲ. ಚುನಾವಣೆ ಉದ್ದೇಶದಿಂದ ಬಿಜೆಪಿ ಸರ್ಕಾರ ಮೈಥೇಯಿ ಪರವಾಗಿ ನಿಂತಿದೆ. ಬಿಜೆಪಿ ಮನುಷ್ಯ ವಿರೋಧಿ ನೀತಿ

ಉಡುಪಿಯಲ್ಲಿ ಬಿಜೆಪಿಯಿಂದ ಪ್ರತಿಭಟನೆ

ಉಡುಪಿಯ ಕಾಲೇಜಿನ ಶೌಚಾಲಯದಲ್ಲಿ ವೀಡಿಯೋ ಚಿತ್ರೀಕರಣ ಪ್ರಕರಣದ ವಿರುದ್ಧ ಇಂದು ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ “ಬೃಹತ್ ಪ್ರತಿಭಟನೆ ಮತ್ತು ಸಮಗ್ರ ತನಿಖೆಗೆ ಹಕ್ಕೊತ್ತಾಯ” ಸಭೆ ನಡೆಸಿದರು.   ಬಿಜೆಪಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ರವರ ನೇತೃತ್ವದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಕಛೇರಿಯ ಬಳಿಯಿಂದ ಹೊರಟ ಉಡುಪಿ ಸಿಟಿ ಬಸ್ ನಿಲ್ದಾಣದ ಮೂಲಕ ಬನ್ನಂಜೆ ಎಸ್.ಪಿ. ಕಛೇರಿಯ ಬಳಿ ಸಮಾಗಮಗೊಂಡಿತು. ನಂತರ ಪ್ರತಿಭಟನಾ ಸಭೆ

ಭದ್ರಾವತಿಯ ಯುವಕನ ಪತ್ತೆಗಾಗಿ ತೀವ್ರ ಹುಡುಕಾಟ: ಡ್ರೋನ್ ಕ್ಯಾಮರಾದಿಂದ ಶೋಧ ಕಾರ್ಯ

ಬೈಂದೂರು ಸಮೀಪದ ಕೊಲ್ಲೂರಿನ ಅರಶಿನಗುಂಡಿ ಎಂಬಲ್ಲಿ ಜಲಪಾತದ ಹರಿಯುವ ನೀರಿನಲ್ಲಿ ನಾಪತ್ತೆಯಾದ ಭದ್ರಾವತಿಯ ಯುವಕನ ಪತ್ತೆಗಾಗಿ ಡ್ರೋನ್ ಕ್ಯಾಮೆರಾ ಮೂಲಕ ಶೋಧ ಕಾರ್ಯ ನಡೆಯುತ್ತಿದೆ.   ಭಾನುವಾರ ಮಧ್ಯಾಹ್ನ ಕೊಲ್ಲೂರು ಸಮೀಪದ ಅರಸಿನಗುಂಡಿ ಜಲಪಾತದಲ್ಲಿ ಕಾಲುಜಾರಿ ಬಿದ್ದು ನಾಪತ್ತೆಯಾಗಿರುವ ಭದ್ರಾವತಿ ತಾಲ್ಲೂಕಿನ ಸುಣ್ಣದ ಹಳ್ಳಿಯ ಕೆ.ಎಚ್.ನಗರದ ಯುವ ಉದ್ಯಮಿ ಶರತ್ ಕುಮಾರ್ ಅವರ ಪತ್ತೆ ಕಾರ್ಯ ನಿನ್ನ ಮತ್ತು ಇವತ್ತು ಡ್ರೋನ್ ಕ್ಯಾಮೆರಾದ ಮೂಲಕ ಹುಡುಕಾಟ ಬರದಿಂದ

ಪಡುಬಿದ್ರಿ: ಶಾಲಾ ಸೆಕ್ಯೂರಿಟಿ ಗಾರ್ಡ್ ಬಾವಿಗೆ ಹಾರಿ ಆತ್ಮಹತ್ಯೆ

ಎರ್ಮಾಳು ಬಡಾ ದೇವಸ್ಥಾನ ಬಳಿಯ ನಿವಾಸಿ ಅದಮಾರು ವಿದ್ಯಾಸಂಸ್ಥೆಯ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯನಿರ್ವಾಹಿಸುತ್ತಿದ್ದ ವ್ಯಕ್ತಿ ಇಂದು ಮುಂಜಾನೆ ಕುಂಜೂರಿನ ಮನೆಯೊಂದರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.   ಆತ್ಮಹತ್ಯೆ ಮಾಡಿಕೊಂಡವರು ನವೀನ್ ಬಂಗೇರ (53), ಅವಿವಾಹಿತರಾಗಿದ್ದ ಇವರು ಮನೆಯಲ್ಲಿ ಏಕಾಂಗಿಯಾಗಿ ವಾಸವಾಗಿದ್ದು ಕಳೆದ ಸುಮಾರು ಮೂರು ವರ್ಷಗಳಿಂದ ಅದಮಾರು ವಿದ್ಯಾಸಂಸ್ಥೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕರ್ತವ್ಯ ನಿರ್ವಾಹಿಸುತ್ತಿದ್ದು,

ಪಡುಬಿದ್ರಿ: ಐದರ ಹರೆಯದ ಹಸುಳೆಗೆ ಲೈಂಗಿಕ ದೌರ್ಜನ್ಯ: ಆರೋಪಿ ಅರೆಸ್ಟ್

ಐದರ ಹರೆಯದ ಬಾಲೆಯನ್ನು ಬಿಸ್ಕೆಟ್ ಆಸೆ ತೋರಿಸಿ ತನ್ನ ಕೋಣೆಗೆ ಕರೆದು ಲೈಂಗಿಕ ದೌರ್ಜನ್ಯ ನಡೆಸಿದ ಕೃತ್ಯ ಪಡುಬಿದ್ರಿ ಕಾಮಗಾರಿ ಹಂತದಲ್ಲಿರುವ ಮಾತಾ ರೆಸಿಡೆನ್ಸಿಯಲ್ ಕಟ್ಟದಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ವಿಕೃತ ಮನಸ್ಸಿನ ಕಾಮುಖ ಆರೋಪಿ ಕಲ್ಕತ್ತ ವೆಸ್ಟ್ ಬೆಂಗಾಲ್ ಮುರ್ಶಿದಾಬಾದ್ ನಿವಾಸಿ ಮಾಫಿಜುಲ್ ಶೇಖ್ಈತ ಪಡುಬಿದ್ರಿ ಅಂಚೆ ಕಛೇರಿ ಪಕ್ಕದ ನಿರ್ಮಾಣ ಹಂತದಲ್ಲಿರುವ ಮಾತಾ ರೆಸಿಡೆನ್ಸಿಯಲ್ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಕಾರ್ಮಿಕನಾಗಿ

ರಾಜಕೀಯ ಒತ್ತಡವಿಲ್ಲದೆ ಕೋಮು ಪ್ರಭಾವವಿಲ್ಲದೆ ತನಿಖೆ : ಖುಷ್ಬೂ

ಉಡುಪಿಯ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣವನ್ನು ಯಾವುದೇ ರಾಜಕೀಯ ಒತ್ತಡವಿಲ್ಲದೆ ಕೋಮು ಪ್ರಭಾವವಿಲ್ಲದೆ ತನಿಖೆ ನಡೆಸಲಾಗುವುದು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಒಂದುವರೆ ಗಂಟೆಗಳ ಕಾಲ ಎಸ್ ಪಿ ಹಾಗೂ ಡಿಸಿ ಜೊತೆ ಮಾತುಕತೆ ನಡೆಸಿದ ಬಳಿಕ ಅವರು ಇಂದು ರಾತ್ರಿ ವೇಳೆ ಮಾಧ್ಯಮದವರಿಗೆ ಈ ರೀತಿ ಪ್ರತಿಕ್ರಿಯೆ ನೀಡಿದರು. ಮಹಿಳಾ ಆಯೋಗ ಪ್ರತಿಭಟನೆ ಮಾಡಲು ಇರುವ ಸಂಸ್ಥೆ ಅಲ್ಲ.

ಬೆಂಗಳೂರಿನಲ್ಲಿ ಶಂಕಿತ ಭಯೋತ್ಪಾದಕರ ಬಂಧನ ವಿಚಾರ : ಕರಾವಳಿ ಭಾಗದಲ್ಲಿ ಕಟ್ಟೆಚ್ಚರ

ಬೆಂಗಳೂರಲ್ಲಿ ಶಂಕಿತ ಭಯೋತ್ಪಾದಕರನ್ನು ಬಂಧಿಸಿದ ಬಳಿಕ ಕರಾವಳಿಯಲ್ಲಿ ವಿದ್ವಂಸಕ ಚಟುವಟಿಕೆ ಮೇಲೆ ಹದ್ದಿನ ಕಣ್ಣಿರಿಸಿರುವ ಪೊಲೀಸರು ಜನ ನಿಬಿಡ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ. ದೇವಸ್ಥಾನ, ಪ್ರವಾಸಿ ಕೇಂದ್ರ ಸೇರಿದಂತೆ ಆಯಾಕಟ್ಟಿನ ಸ್ಥಳಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಶ್ವಾನ ದಳ, ಮಸೂರ ದರ್ಶಕದಿಂದ ತಪಾಸಣೆ ನಡೆಸಲರಾಂಭಿಸಿದ್ದಾರೆ. ಈಗಾಗಲೇ ಉಡುಪಿ ಕೃಷ್ಣ ಮಠ, ಉಚ್ಚಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರ, ಆಟಿ ಮಾರಿಪೂಜೆ ಸಂಭ್ರಮದಲ್ಲಿರುವ ಕಾಪುವಿನ

ಹೆಜಮಾಡಿಯಲ್ಲಿ ವನಮಹೋತ್ಸವ ಕಾರ್ಯಕ್ರಮ

ಪರಿಸರವನ್ನು ಸಂರಕ್ಷಿಸುವ ಗುರುತರವಾದ ಜವಾಬ್ದಾರಿ ನಮ್ಮ ಮೇಲಿದ್ದು, ಗಿಡಗಳನ್ನು ನೆಟ್ಟು ಅದನ್ನು ಪೋಷಿಸುವ ಮೂಲಕ ಪರಿಸವನ್ನು ಉಳಿಸಬೇಕಾಗಿದೆ ಎಂಬುದಾಗ ಪಡುಬಿದ್ರಿ ಎಸ್ಸೈ ಪ್ರಸನ್ನ ಎಂ.ಎಸ್. ಹೇಳಿದ್ದಾರೆ. ಅವರು ಪಡುಬಿದ್ರಿ ಪೊಲೀಸ್ ಠಾಣೆ ಹಾಗೂ ಪಡುಬಿದ್ರಿ ರೋಟರಿ ಕ್ಲಬ್ ಜಂಟಿಯಾಗಿ ಹೆಜಮಾಡಿ ಟೋಲ್ ಗೇಟ್ ಬಳಿ ಆಯೋಜಿಸಿದ ವನಮಹೋತ್ಸವ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಮಾತನಾಡಿ, ಮರಗಿಡಗಳ ಮಹತ್ವ ಮಹಾಮಾರಿ ಕೋವಿಡ್ ಸಂದರ್ಭ ನಾವೆಲ್ಲಾ ಅರಿತುಕೊಂಡಿದ್ದೇವೆ.

ಕುಂದಾಪುರ : ನಮ್ಮ ಭೂಮಿ ನಮ್ಮ ಹಕ್ಕು, ಕೃಷಿ ಭೂಮಿಗಾಗಿ ಹಕ್ಕೊತ್ತಾಯ

ಕುಂದಾಪುರ: ಕೊರಗರಿಗೆ ಕೃಷಿ ಭೂಮಿ ಇಲ್ಲದಿರುವುದರಿಂದ ಅವರು ಕೃಷಿಕರಾಗದೇ ಇಂದಿಗೂ ದಯನೀಯ ಸ್ಥಿತಿಯಲ್ಲಿ ಇದ್ದಾರೆ. ಹಲವು ಸರ್ಕಾರಗಳು ನಾನಾ ಯೋಜನೆಗಳನ್ನು ತಂದರೂ ಕೊರಗರಿಗೆ ಕೃಷಿ ಮಾಡಿಕೊಳ್ಳಲು ತುಂಡು ಭೂಮಿಯನ್ನೂ ಕೊಟ್ಟಿಲ್ಲ. ಕೊರಗ ಸಮುದಾಯದ ಮನವಿಗಳು ಕೇವಲ ಕುಂದು ಕೊರತೆ ಸಭೆಗೆ ಮಾತ್ರವೇ ಸೀಮಿತವಾಗಬಾರದು. ಅದು ಕಾರ್ಯರೂಪಕ್ಕೂ ಬರಬೇಕು ಎಂದು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ ಹೇಳಿದರು. ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ

ಕೊಲ್ಲೂರು : ನೀರುಪಾಲಾದ ಯುವಕನಿಗಾಗಿ ಮುಂದುವರೆದ ಶೋಧ

ಬೈಂದೂರು ತಾಲ್ಲೂಕಿನ ಕೊಲ್ಲೂರು ಬಳಿಯ ಅರಶಿನಗುಂಡಿ ಜಲಪಾತ ವೀಕ್ಷಣೆಗೆ ಬಂದಿದ್ದ ಯುವಕ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಯುವಕನಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಭದ್ರಾವತಿ ಮೂಲದ ಶರತ್ ಕುಮಾರ್ (23) ಜಲಪಾತದಲ್ಲಿ ಕೊಚ್ಚಿಹೋದ ಯುವಕ. ಬಂಡೆಯ ತುದಿಯಲ್ಲಿ ನಿಂತು ಹತ್ತಿರದಿಂದ ಜಲಪಾತ ವೀಕ್ಷಣೆ ಮಾಡುವಾಗ ಈ ದುರ್ಘಟನೆ ಸಂಭವಿಸಿದೆ. ಯುವಕನ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ