Home Posts tagged #udupi (Page 19)

ಖಾಲಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಕ್ರಮ : ಸಿಎಂ

ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿ ಸುಮಾರು 2.5 ಲಕ್ಷ ಹುದ್ದೆಗಳು ಭರ್ತಿಯಾಗಬೇಕಾಗಿದೆ. ಅವುಗಳಲ್ಲಿ ಮುಖ್ಯವಾಗಿ ಶಿಕ್ಷಕರ ಹುದ್ದೆ ಗಳು ಖಾಲಿ ಇವೆ. ಬಹುತೇಕವಾಗಿ ಹೊರಗುತ್ತಿಗೆ, ಗುತ್ತಿಗೆ ಆಧಾರದಲ್ಲಿ ಇಲಾಖೆಗಳಲ್ಲಿ ನೇಮಕಾತಿ ನಡೆಯುವುದರಿಂದ ಮೀಸಲಾತಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಹಂತ ಹಂತವಾಗಿ ಖಾಲಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು

ಉಡುಪಿ ಸೀರೆ ಪುನರುಜ್ಜೀವನಕ್ಕೆ ಅಡಿಕೆಯ ಸ್ಪರ್ಶ

ಕದಿಕೆ ಟ್ರಸ್ಟ್‌ನ ಮಾರ್ಗದರ್ಶನದಲ್ಲಿ ತಯಾರಾದ ಅಡಿಕೆ ಮತ್ತು ಇತರ ನೈರ್ಸಗಿಕ ಬಣ್ಣದ ಉಡುಪಿ ಸೀರೆಗಳನ್ನು ತಾಳಿಪಾಡಿ ನೇಕಾರರ ಸೊಸೈಟಿ ಕಿನ್ನಿಗೋಳಿಯಲ್ಲಿ ಬಿಡುಗಡೆ ಮಾಡಲಾಯಿತು. ೨೦೧೮ರಲ್ಲಿ ಉಡುಪಿ ಸೀರೆ ಪುನರುಜ್ಜೀವನವನ್ನು ಪ್ರಾರಂಭಿಸಿದ ಕದಿಕೆ ಟ್ರಸ್ಟ್, ಎನ್‌ಜಿಒ ಸಾಮಾಜಿಕ ಮಾಧ್ಯಮ ಪ್ರಚಾರ, ನಬಾರ್ಡ್ ಬೆಂಬಲದೊಂದಿಗೆ ತರಬೇತಿ ಮತ್ತು ಇತರ ಕ್ರಮಗಳಂತಹ ಬಹುಮುಖಿ ವಿಧಾನಗಳೊಂದಿಗೆ ಎರಡು ಜಿಲ್ಲೆಗಳಲ್ಲಿ ನೇಯ್ಗೆಯನ್ನು ಅಳಿವಿನಿಂದ ಮರಳಿ ತಂದಿದೆ. ಉಡುಪಿ

ಉಡುಪಿ ಹಾಸ್ಟೆಲ್‍ಗೆ ಸಿಎಂ ದಿಢೀರ್ ಭೇಟಿ

ಉಡುಪಿ ಜಿಲ್ಲೆಯ ಬನ್ನಂಜೆಯಲ್ಲಿರುವ ಸರ್ಕಾರಿ ಹಾಸ್ಟೆಲ್‍ಗೆ ಸಿಎಂ ದಿಢೀರ್ ಭೇಟಿ ನೀಡಿದ್ದು, ವಿದ್ಯಾರ್ಥಿನಿಯರ ಜೊತೆ ಸಿಎಂ ಮಾತುಕತೆ ನಡೆಸಿದ್ದಾರೆ. ಗೃಹಲಕ್ಷ್ಮೀ ಯೋಜನೆ ಬಗ್ಗೆ ವಿದ್ಯಾರ್ಥಿನಿಯರ ಜೊತೆ ಮಾತುಕತೆ ನಡೆಸಿದ ಸಿಎಂ, ‘ಈ ಯೋಜನೆಯಿಂದ ನಿಮಗೆ ಹಣ ಸಿಗುವುದಿಲ್ಲ, ಬದಲಾಗಿ ನಿಮ್ಮ ಅಮ್ಮನಿಗೆ ಹಣ ಸಿಗುತ್ತದೆ ಎಂದಿದ್ದಾರೆ. ಇದೇ ವೇಳೆ ‘ಡಿಗ್ರಿ ಪಾಸಾದ ಮೇಲೆ ನಿಮಗೆ ಕೆಲಸ ಸಿಗುವ ತನಕ ಯುವನಿಧಿ ನೀಡುತ್ತೇವೆ. ನಿಮ್ಮ ಭವಿಷ್ಯಕ್ಕೆ

ಪಡುಬಿದ್ರಿ – ಕಡಲು ಕೊರೆತ ಶಾಶ್ವತ ಪರಿಹಾರಕ್ಕೆ ಚಿಂತನೆ : ಸಿಎಂ ಭರವಸೆ

ಕರಾವಳಿ ಭಾಗದಲ್ಲಿ ಸುಮಾರು 98 ಕೀ.ಮೀ. ಕಡಲು ಇದ್ದು, ಮಳೆಗಾಲದಲ್ಲಿ ತೆರೆಗಳ ಅಬ್ಬರಕ್ಕೆ ಕೊರೆತ ಆಗುವುದು ಸರ್ವೇ ಸಾಮಾನ್ಯ, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಡಿ ಇಡುವುದಾಗಿ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ಪಡುಬಿದ್ರಿ ಮುಖ್ಯ ಬೀಚ್ ನಲ್ಲಿ ಕಡಲು ಕೊರೆತ ವೀಕ್ಷಿಸಿ ಮಾದ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮುಖ್ಯ ಮಂತ್ರಿಗಳ

ಗದ್ದೆಗಿಳಿದು ನಾಟಿ ಮಾಡಿದ ಮಾಜಿ ಶಾಸಕ ರಘುಪತಿ ಭಟ್

ಉಡುಪಿ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಕೆ .ರಘುಪತಿ ಭಟ್ ರವರ ಪರಿಕಲ್ಪನೆಯ ಹಡಿಲು ಭೂಮಿಯ ಕೃಷಿಯ ಯೋಜನೆಗೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಕೈಜೋಡಿಸಿದೆ. ಆರೂರು ರಂಜೆಬೈಲ್‍ನ ಕುಮಾರ ಶೆಟ್ಟಿಯವರ ಗದ್ದೆಯಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣರು ನಾಟಿಗೆ ಅಗೆಯನ್ನು ನೀಡುವ ಮೂಲಕ ಚಾಲನೆ ನೀಡಿದರು. ಹಡಿಲು ಭೂಮಿಯ ಕೃಷಿಯ ಕನಸುಗಾರ ಉಡುಪಿ ಮಾಜಿ ಶಾಸಕ ಕೆ ರಘುಪತಿ ಭಟ್ ಸ್ವತಹ: ಗದ್ದೆಗಿಳಿದು ನಾಟಿ ಮಾಡುವುದನ್ನು ಕಂಡ ಬ್ರಹ್ಮಾವರ ತಾಲೂಕಿನ

ಕಾರ್ಕಳ: ಬಸ್ ತಂಗುದಾಣದಲ್ಲಿ ಸತ್ತ ನಾಯಿಯ ದಫನ: ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ

ಕಾರ್ಕಳ : ಸಾರ್ವಜನಿಕ ಸ್ಥಳದಲ್ಲಿ ಇರುವ ಬಸ್ ತಂಗುದಾಣದಲ್ಲಿ ಬೀದಿನಾಯೊಂದು ಸತ್ತು ಬಿದ್ದಿದ್ದು ಅದನ್ನು ತೆರವುಗೊಳಿಸಲು ಮುಂದಾಗದ ನಂದಳಿಕೆ ಗ್ರಾಮ ಪಂಚಾಯತ್ ಒಂದು ಲೋಡ್ ಮಣ್ಣು ತಂದು ಅದರ ಮೇಲೆ‌ ಸುರಿದು ಘನಕಾರ್ಯ ನಡೆಸಿರುವ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗಿದೆ. ಸತ್ತ ನಾಯಿಯ ದಫನ ಕ್ರಿಯೆ‌ಮಾಡುವ ಮೂಲಕ ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಿಕೊಳ್ಳಲು ಸ್ಥಳೀಯಾಡಳಿ ಮುಂದಾಗಬೇಕಿತ್ತು. ಆದರೆ ನಂದಳಿಕೆ ಗ್ರಾಮ ಪಂಚಾಯತ್ ಆಡಳಿತ ವರ್ಗವು

ಜಲಪಾತದಲ್ಲಿ ಕೊಚ್ಚಿಹೋಗಿದ್ದ ಶರತ್ ಮೃತದೇಹ ಪತ್ತೆ

ಕೊಲ್ಲೂರಿನ ಅರಶಿನ ಗುಂಡಿ ಜಲಪಾತ ವೀಕ್ಷಣೆ ಮಾಡಲು ಹೋಗಿ ಜಾರಿ ಬಿದ್ದು ನೀರುಪಾಲಾಗಿದ್ದ ಭದ್ರಾವತಿ ಮೂಲದ ಯುವಕ ಶರತ್ ಮೃತದೇಹ ವಾರದ ಬಳಿಕ ಪತ್ತೆಯಾಗಿದೆ.   ಜುಲೈ 23ರಂದು ಕೊಲ್ಲೂರು ಸಮೀಪದ ಅರಣ್ಯ ಪ್ರದೇಶದಲ್ಲಿರುವ ಅರಶಿನ ಗುಂಡಿ ಜಲಪಾತ ವೀಕ್ಷಿಸಲು ೨೩ ವರ್ಷದ ಶರತ್ ಕುಮಾರ್ ಸ್ನೇಹಿತನೊಂದಿಗೆ ಹೋಗಿದ್ದರು. ಜಲಪಾತದ ಪಕ್ಕದ ಬಂಡೆ ಕಲ್ಲಿನ ಮೇಲೆ ನಿಂತಿದ್ದು ಅವರು ಜಾರಿ ನೀರಿಗೆ ಬಿದ್ದಿದ್ದರು.   ಶರತ್ ಹುಡುಕಾಟಕ್ಕೆ ಹಲವು ತಂಡಗಳು ವಾರಗಳ ಕಾಲ ಶ್ರಮ

ಶಾಸಕ ಯಶ್‍ಪಾಲ್ ಸುವರ್ಣ ಹೇಳಿಕೆಗೆ ಕಾಂಗ್ರೆಸ್‍ನಿಂದ ಖಂಡನೆ

ಬಿಜೆಪಿ ಪ್ರತಿಭಟನೆ ಸಂದರ್ಭದಲ್ಲಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಗೃಹ ಸಚಿವರ ಕೌಟುಂಬಿಕ ವಿಚಾರಗಳ ಬಗ್ಗೆ ನೀಡಿರುವ ಹೇಳಿಕೆ ವಿಚಾರವಾಗಿ ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಪ್ರಸಾದ ರಾಜ್ ಕಾಂಚನ್ ಅವರು, ಕಾಲೇಜಿನಲ್ಲಿ ನಡೆದಿರುವ ವಿಡಿಯೊ ಪ್ರಕರಣದಲ್ಲಿ ಪೆÇಲೀಸರು ನಿಷ್ಪಕ್ಷಪಾತ ತನಿಖೆಯನ್ನ ನಡೆಸಿದ್ದಾರೆ. ಕಾಲೇಜಿನ ಅಡಳಿತ ಮಂಡಳಿ ಕೂಡ ಪೊಲೀಸ್ರ ತನಿಖೆಗಳಿಗೆ ಸಹಕರಿಸಿದ್ದಾರೆ. ಅದರೂ ಕೂಡ

ಮಣಿಪುರದಲ್ಲಿ ಹಿಂಸಾಚಾರ ಖಂಡಿಸಿ ಉಡುಪಿಯ ಸಮಾನ ಮನಸ್ಕರ ವೇದಿಕೆ ವತಿಯಿಂದ ಕಾಲ್ನಡಿಗೆ ಜಾಥ

ಮಣಿಪುರದಲ್ಲಿ ನಡೆಯುತ್ತಿರುವ ದೌರ್ಜನ್ಯ ಹಾಗೂ ಹಿಂಸಾಚಾರ ಖಂಡಿಸಿ ಆಗಸ್ಟ್ 2ರಂದು ಉಡುಪಿಯ ಸಮಾನ ಮನಸ್ಕರ ವೇದಿಕೆ ವತಿಯಿಂದ ಕಾಲ್ನಡಿಗೆ ಜಾಥ ನಡೆಯಲಿದೆ. ಈ ಬಗ್ಗೆ ಮಾಹಿತಿನೀಡಿದ ಪ್ರಶಾಂತ್ ಜತ್ತನ್ ಮಣಿಪುರದಲ್ಲಿ ಹಿಂಸಚಾರ ಶುರುವಾಗಿ ಸುಮಾರು ಮೂರು ತಿಂಗಳಾಗಿದೆ ,ಸುಮಾರು 114 ಮಂದಿ ಹತ್ಯೆಯಾಗಿದ್ದಾರೆ.ಅರವತ್ತು ಸಾವಿರಕ್ಕೂ ಹೆಚ್ಚು ಜನ ನಿರ್ವಸಿತರಾಗಿದ್ದಾರೆ ,ಮಹಿಳೆಯರ ಮೇಲೆ ಮಕ್ಕಳ ಮೇಲೆ ದೌರ್ಜನ್ಯಗಳು ಹೆಚ್ಚಾಗಿವೆ, ಚರ್ಚುಗಳು ಮಸೀದಿಗಳು ಧ್ವಸಂವಾಗಿದೆ.

ಜಿಲ್ಲಾ ಎಸ್ಪಿಯವರ ತನಿಖೆಯಲ್ಲೂ ಬಿಜೆಪಿಗರಿಗೆ ವಿಶ್ವಾಸವಿಲ್ಲ : ಮಾಜಿ ಸಚಿವ ವಿನಯಕುಮಾರ್ ಸೊರಕೆ

ಉಡುಪಿಯಲ್ಲಿ ಶೌಚಾಲಯ ವಿಡಿಯೋ ನಡೆದಿದೆ ಎಂಬ ಪ್ರಕರಣಕ್ಕೆ ಉತ್ತರ ನೀಡ ಬೇಕಾದವರು ಕಾಲೇಜು ಆಡಳಿತ. ಆದರೆ ಆ ಘಟನೆಯನ್ನು ಹಿಜಾಬಿಗೆ ಹೋಲಿಕೆ ಮಾಡಿಕೊಂಡು ಉಡುಪಿ ಶಾಸಕರೇ ಸೇರಿ ಡೊಂಬರಾಟ ನಡೆಸುತ್ತಿದ್ದಾರೆ ಎಂಬುದಾಗಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ವ್ಯಂಗವಾಡಿದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ಬಿಜೆಪಿ ಆಡಳಿತದಲ್ಲಿರುವ ಸಂದರ್ಭದಲ್ಲೇ ಅವರೇ ಕರೆತಂದ ಜಿಲ್ಲಾ ಎಸ್ಪಿಯವರ ತನಿಖೆಯಲ್ಲೂ ಬಿಜೆಪಿಗರಿಗೆ ವಿಶ್ವಾಸವಿಲ್ಲದಂತಾಗಿದೆ. ಮಹಿಳಾ