ತುಳುನಾಡ ರಾಜಧಾನಿ ಆಗಿದ್ದ ದೇವಾಲಯಗಳ, ರಾಜ ಮಹಾರಾಜರುಗಳ ಖ್ಯಾತಿಯ ಬಾರಕೂರು ಕೋಟೆಯಲ್ಲಿ 5 ವರ್ಷಗಳ ಹಿಂದೆ ನಡೆದ ಅಳುಪೋತ್ಸವ ನಡೆದಿತ್ತು. ಅಲ್ಲಿ ಈಗ ಮುಳ್ಳು ಪೊದೆಗಳು ರಾಜ್ಯಭಾರ ನಡೆಸಿವೆ. 2019 ಜನವರಿ 25ರಿಂದ 27ರತನಕ ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ಜಿಲ್ಲಾಡಳಿತ ಮತ್ತು ಸ್ಥಳಿಯ ಸಂಘ ಸಂಸ್ಥೆಗಳ
ಉಡುಪಿ: ಕರವೇ ವತಿಯಿಂದ ಕನ್ನಡ ನಾಮಫಲಕ ಜನ ಜಾಗೃತಿ ಆಂದೋಲನ ಉಡುಪಿಯಲ್ಲಿ ನಡೆಯಿತು. ಕರವೇ ಕಾರ್ಯಕರ್ತರು ಕರಪತ್ರ ಹಂಚುತ್ತಾ ಕರಾವಳಿ ಬೈಪಾಸ್ ಬನ್ನಂಜೆ ಮಾರ್ಗವಾಗಿ ಸಿಟಿ ಬಸ್ ಸ್ಟಾಂಡ್, ಸರ್ವಿಸ್ ಬಸ್ ಸ್ಟ್ಯಾಂಡ್ ಮೂಲಕ ಜೋಡುಕಟ್ಟೆ ಮಾರ್ಗವಾಗಿ ನಗರಸಭೆಗೆ ತೆರಳಿದರು. ನಗರಸಭೆಗೆ ಮುತ್ತಿಗೆ ಹಾಕಿದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕರವೇ ರಾಜ್ಯಸಂಘಟನಾ ಕಾರ್ಯದರ್ಶಿ ವೆಂಕಟೇಶ್ ಹೆಗಡೆ, ಕರ್ನಾಟಕ ರಕ್ಷಣಾ
ಬ್ರಹ್ಮಾವರದ ನದಿ ತೀರದ ಸರಕಾರಿ ಜಾಗದಲ್ಲಿ ನಡೆಯುತ್ತಿರುವ ಮರಳುಗಾರಿಕೆ ವಿರುದ್ಧ ಮೂಡುಹೋಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಬ್ರಹ್ಮಾವರ ತಾಲೂಕು ಸೌಧದ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಅದೇ ಜಾಗದ ಬಳಿ ನೂರಾರು ಎಕ್ರೆ ಕೃಷಿ ಭೂಮಿ ಜಲಾವೃತವಾಗುವ ಭೀತಿ ಎದುರಾಗಿದ್ದು, ಮತ್ತು ಅಲ್ಲಿನ ಪರಿಸರದ ಜನರು ಗೋಮಾಳದಲ್ಲಿ ಹಸುಗಳನ್ನು ಮೇಯಲು ಬಿಟ್ಟಾಗ ಮರಳುಗಾರಿಕೆ ಮಾಡುವವರು ಮಹಿಳೆಯರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಪ್ರತಿಭಟನೆಗೆ ಬಂದ
ಉಡುಪಿ: ಜಿಲ್ಲಾ ಪರಿಯಾಳ ಸಮಾಜ ಸುಧಾರಕ ಸಂಘದ ವತಿಯಿಂದ ಅಂದಾಜು 75 ಲಕ್ಷ ರೂ. ವೆಚ್ಚದಲ್ಲಿ ಉಚ್ಚಿಲದಲ್ಲಿ ನಿರ್ಮಿಸಲಾದ ಪರಿಯಾಳ ಸಮಾಜ ಸಮುದಾಯ ಭವನದ ಉದ್ಘಾಟನೆಯು ಮಾ.5ರಂದು ಉಚ್ಚಿಲದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಯು.ಶಂಕರ ಸಾಲ್ಯಾನ್ ತಿಳಿಸಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 15 ಲಕ್ಷರೂ. ನೆರವು ದೊರಕಿದ್ದು, ಉಳಿದಂತೆ ದಾನಿಗಳಿಂದ ಸಂಗ್ರಹಿಸಿ ಕಟ್ಟಡ ನಿರ್ಮಿಸಲಾಗಿದೆ. ಕಟ್ಟಡವನ್ನು
ರಾಜ್ಯದ ಅಗ್ರಗಣ್ಯ ಸಹಕಾರಿ ಬ್ಯಾಂಕುಗಳಲ್ಲಿ ಒಂದಾಗಿರುವ ಎಂ.ಸಿ.ಸಿ ಬ್ಯಾಂಕಿನ 17ನೇ ಶಾಖೆಯು ಬ್ರಹ್ಮಾವರದ ವಾರಂಬಳ್ಳಿಯ ಶೇಷಗೋಪಿ ಪ್ಯಾರಡೈಸ್‌ನ ನೆಲಮಹಡಿ, ಆಕಾಶವಾಣಿ ವೃತ್ತದ ಬಳಿ, ಉದ್ಘಾಟನೆಗೊಂಡಿತು. ಹೊಸ ಶಾಖೆಯ ಉದ್ಘಾಟನೆಯನ್ನು ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣರವರು ನೆರವೇರಿಸಿದರು. ಹೋಲಿ ಫ್ಯಾಮಲಿ ಚರ್ಚ್, ಬ್ರಹ್ಮಾವರ ಇದರ ಧರ್ಮಗುರುಗಳಾದ ವಂದನೀಯ ಜಾನ್ ಫೆರ್ನಾಂಡಿಸ್‌ರವರು ಆಶೀರ್ವಚನವನ್ನು ನೆರವೇರಿಸಿದರು. ಹೊಸ ಶಾಖೆಯ ಭದ್ರತಾ ಕೊಠಡಿಯನ್ನು
ಅಸ್ಸಾಮಿನ ಗುವಾಹಟಿಯಲ್ಲಿ ನಡೆದ ಖೇಲೋ ಇಂಡಿಯಾ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಉಡುಪಿಯ ಅಭಿನ್ ಬಿ. ದೇವಾಡಿಗ ಚಿನ್ನ ಗೆದ್ದಿದ್ದಾರೆ. 200 ಮೀಟರ್ ಓಟದ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಅಭಿನ್, 21 ಸೆಕೆಂಡ್ ನಲ್ಲಿ ಗುರಿ ಮುಟ್ಟಿದ್ದಾರೆ. ಜೈನ್ ಯುನಿವರ್ಸಿಟಿ ಬೆಂಗಳೂರಿನಲ್ಲಿ ಓದುತ್ತಿರುವ ಅವರು, ಉಡುಪಿ ಅಜ್ಜರಕಾರು ಕ್ರೀಡಾಂಗಣದ ಟ್ರ್ಯಾಕ್ ಆಂಡ್ ಫೀಲ್ಡ್ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಉಡುಪಿಯ ಜಹೀರ್ ಅಬ್ಬಾಸ್ ಗರಡಿಯಲ್ಲಿ 2017
ಉಡುಪಿ: ವಾಹನ ಚಾಲಕರು ಸಕಾಲಕ್ಕೆ ಕಣ್ಣಿನ ತಪಾಸಣೆ ಮಾಡಿಸಿ ಕೊಂಡು ರಸ್ತೆ ಅಪಘಾತವನ್ನು ತಡೆಗಟ್ಟುವಲ್ಲಿ ಸಹ ಕರಿಸಬೇಕು ಎಂದು ನಗರದ ಪ್ರಸಾದ್ ನೇತ್ರಾಲಯದ ಡಾ.ಕೃಷ್ಣಪ್ರಸಾದ್ ಹೇಳಿದ್ದಾರೆ. ಮಣಿಪಾಲದ ಪ್ರಾದೇಶಿಕ ಸಾರಿಗೆ ಕಛೇaರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಪ್ರಾದೇಶಿಕ ಸಾರಿಗೆ ಇಲಾಖೆ ಉಡುಪಿ ವತಿ ಯಿಂದ ಸೋಮವಾರ ಆಯೋಜಿಸಿದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ರಸ್ತೆ
ಪಡುಬಿದ್ರಿ: ನಂದಿಕೂರಿನ ಮನೆಯೊಂದರಲ್ಲಿ ಏಕಾಂಗಿಯಾಗಿ ಜೀವಿಸುತ್ತಿದ್ದ ವ್ಯಕ್ತಿಯೋರ್ವರು ತಮ್ಮದೇ ಮನೆ ಜಗಲಿಯ ಮೇಲಿನ ಪಕ್ಕಾಸಿಗೆ ನೇಣು ಹಾಕಿಕೊಂಡು ಜೀವಾಂತ್ಯಗೊಳಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ನಂದಿಕೂರು ಶೆಟ್ಟಿ ಬೆಟ್ಟು ಸಾಲ್ಯಾನ್ ನಿವಾಸದ ವಾಸಿ ಶೇಖರ್ ಪೂಜಾರಿ(67), ಹೆಂಡತಿ ಅನಾರೋಗ್ಯದ ಸಮಸ್ಯೆಯಿಂದ ತನ್ನ ತಾಯಿ ಮನೆ ಕಾರ್ಕಳದ ಕಲ್ಯಾ ನೆಲ್ಲಿಗುಡ್ಡೆಯಲ್ಲಿ ವಾಸವಾಗಿದ್ದು, ಮಕ್ಕಳು ಕೂಡಾ ತಾಯಿಯೊಂದಿಗಿದ್ದರು, ನಂದಿಕೂರಿನ ಮನೆಯಲ್ಲಿ
* ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ರಜತ ಮಹೋತ್ಸವದ ಪೂರ್ವಭಾವಿ ಸಭೆಯು ಕಾಟಿಪಳ್ಳ ನಾರಾಯಣಗುರು ಸಮಾಜ ಸೇವಾ ಸಂಘದಲ್ಲಿ ಅಧ್ಯಕ್ಷರಾದ ಆನಂದ ಅಮೀನ್ ರವರ ನೇತೃತ್ವದಲ್ಲಿ ಫೆಬ್ರವರಿ 11ರಂದು ನಡೆಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷರಾದ ಡಾ। ರಾಜಶೇಖರ್ ಕೋಟ್ಯಾನ್,ಪ್ರಧಾನ ಕಾರ್ಯದರ್ಶಿ ಬಾಳ ಗಂಗಾಧರ ಪೂಜಾರಿ,ಸಕಲೇಶಪುರದ ಸಂಚಾಲಕರಾದ ಕೃಷ್ಣಪ್ಪ ಪೂಜಾರಿ,ಸಂಘದ ಕಾರ್ಯದರ್ಶಿ ರಾಜೇಶ್ ಸಾಲ್ಯಾನ್, ಕೋಶಾಧಿಕಾರಿ ಶೈಲೇಶ್ ಕೋಟ್ಯಾನ್, ಭಜನಾ
ಮೂಲ್ಕಿ ನಾರಾಯಣಗುರು ಸಮಾಜ ಸೇವಾ ಸಂಘದ ಮಹಿಳಾ ಘಟಕದ ಅಧ್ಯಕ್ಷರಾದ ಶಶಿಕಲಾ ಯಾದೀಶ್ ಅಮೀನ್ ರವರ ನೇತೃತ್ವದಲ್ಲಿ ಮಾರ್ಚ್ 10ರಂದು ನಡೆಯುವ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ರಜತ ಮಹೋತ್ಸವದ ಪೂರ್ವಭಾವಿ ಸಭೆಯು ಮೂಲ್ಕಿ ನಾರಾಣಗುರು ಸೇವಾ ಸಂಘದಲ್ಲಿ ಫೆಬ್ರವರಿ 10ರಂದು ನಡೆಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷರಾದ ಡಾ। ರಾಜಶೇಖರ್ ಕೋಟ್ಯಾನ್,ಪ್ರಧಾನ ಕಾರ್ಯದರ್ಶಿ ಬಾಳ ಗಂಗಾಧರ ಪೂಜಾರಿ,ಸಂಘದ ಅಧ್ಯಕ್ಷರಾದ ಪ್ರಕಾಶ್ ಪೂಜಾರಿ,ಮೂಲ್ಕಿ




























