Home Posts tagged #udupi (Page 25)

ಕಾರ್ಕಳದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಗರ ಸಮ್ಮೇಳನ

ಕಾರ್ಕಳ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಕಳ ವತಿಯಿಂದ ನಗರ ಸಮ್ಮೇಳನ ಜುಲೈ 2 ರಂದು ಕಾರ್ಕಳದ ವೇಣುಗೋಪಾಲ ಕೃಷ್ಣ ದೇವಸ್ಥಾನ ಕಾಬೆಟ್ಟುನಲ್ಲಿ ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಮಾತನಾಡಿದ ಎಬಿವಿಪಿಯ ಹಿರಿಯ ಕಾರ್ಯಕರ್ತ ರಾಜೇಂದ್ರ ಅಮಿನ್ ಅವರು, ದೇಶ ಸೇವೆಗೆ ತಮ್ಮ ಸಮಯವನ್ನು ಮೀಸಲಿಡುವ ಮೂಲಕ ತಮ್ಮ ವಿದ್ಯಾರ್ಥಿ ಜೀವನವನ್ನು

ಉಡುಪಿ : ಗೋಕಳ್ಳರಿಂದ ರಕ್ಷಿಸಲ್ಪಟ್ಟ ಗೋವುಗಳು ಗೋಶಾಲೆಗೆ

ಆದಿ ಉಡುಪಿ ಸಂತೆ ಮಾರ್ಕೆಟಿನ ಬಳಿ ಗೋವುಗಳ್ಳರಿಂದ ರಕ್ಷಿಸಲ್ಪಟ್ಟ ಮೂರು ಕರುಗಳನ್ನು ಕೊಡವೂರಿನ ನಂದಗೋಕುಲ ಗೋಶಾಲೆಗೆ ಸೇರಿಸಿದ್ದಾರೆ. ಗುರುರಾಜ್ ಅಮಿನ್ ಅವರು ಗೋವುಗಳ್ಳರಿಂದ ಮತ್ತು ಬೀದಿ ನಾಯಿಗಳಿಂದ ಕರುಗಳನ್ನು ರಕ್ಷಿಸಿ, ಮೇವು ನೀಡಿ ಸುರಕ್ಷಿತವಾಗಿಟ್ಟಿದ್ದರು. ಬಳಿಕ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ಗಮನಕ್ಕೆ ತಂದರು. ತಕ್ಷಣ ಒಳಕಾಡು ಅವರು ಅಲ್ಲಿಯ ತಂಡದವರಿಂದ ಕರುಗಳನ್ನು ಗೋಶಾಲೆಗೆ ದಾಖಲುಪಡಿಸಿದರು. ಗೋಶಾಲೆಯ ಮೇಲ್ವಿಚಾರಕ ಇಂದು ಶೇಖರ್

ಮಣಿಪುರ ವಿಚಾರ : ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಬೇಕು : ಉಡುಪಿ ಧರ್ಮಪ್ರಾಂತ್ಯ ಹಾಗೂ ಕ್ರೈಸ್ತ ಸಮುದಾಯದಿಂದ ಮನವಿ

ಮಣಿಪುರ ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರ ವಿಚಾರದಲ್ಲಿ ಕೇಂದ್ರ ಸರಕಾರ ಕೂಡಲೇ ಮಧ್ಯಪ್ರವೇಶ ಮಾಡಿ ಶಾಂತಿ ಸ್ಥಾಪನೆ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಉಡುಪಿ ಧರ್ಮಪ್ರಾಂತ್ಯ ಹಾಗೂ ಕ್ರೈಸ್ತ ಸಮುದಾಯ ಪರವಾಗಿ ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ದೇಶದ ಪ್ರಧಾನಿ ಹಾಗೂ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಉಡುಪಿ ಕಥೊಲಿಕ್ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡೆನಿಸ್ ಡೆಸಾ ಮಾತನಾಡಿ, ಈಶಾನ್ಯ ಭಾರತದ

ಉಡುಪಿ : ಕಾಲುಸಂಕದಿಂದ ಬಿದ್ದು ವ್ಯಕ್ತಿ ಮೃತ್ಯು

ವ್ಯಕ್ತಿಯೋರ್ವರು ಕಾಲುಸಂಕದಿಂದ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ಉಡುಪಿಯ ಮಠದಬೆಟ್ಟು ಎಂಬಲ್ಲಿ ನಡೆದಿದೆ. ಮೃತರನ್ನು ಬಿಜೂರು ನಿವಾಸಿ ಸತೀಶ್ ಎಂದು ಗುರುತಿಸಲಾಗಿದೆ. ಇವರು ಉಡುಪಿಯ ಹೋಟೆಲ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ನಿನ್ನೆ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದು, ಇಂದು ಮಧ್ಯಾಹ್ನದ ವೇಳೆಗೆ ಮಠದಬೆಟ್ಟು ತೋಡಿನಲ್ಲಿ ಸತೀಶ್ ಮೃತದೇಹ ಪತ್ತೆಯಾಗಿದೆ. ಮುಳುಗು ತಜ್ಞ ಈಶ್ವರ್ ಮಲ್ಪೆ ಅವರು ಮೃತದೇಹವನ್ನು ಮೇಲೆಕ್ಕೆತ್ತಿದ್ದಾರೆ. ಸಮಾಜ ಸೇವಕ

ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ತಪ್ತ ಮುದ್ರಾಧಾರಣೆ

ಉಡುಪಿ: ಪ್ರಥಮ ಏಕಾದಶಿ ಪ್ರಯುಕ್ತ ಪೆರ್ಡೂರು ಬ್ರಾಹ್ಮಣ ಸೇವಾ ಸಮಿತಿಯ ವತಿಯಿಂದ ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ತಪ್ತ ಮುದ್ರಾಧಾರಣೆ ಕಾರ್ಯಕ್ರಮವನ್ನು ಇಂದು ನಡೆಸಲಾಯಿತು. ಶ್ರೀ ರಾಘವೇಂದ್ರ ಆಚಾರ್ಯರ ನೇತೃತ್ವದಲ್ಲಿ ಬೆಳಿಗ್ಗೆ ಶ್ರೀ ಸುದರ್ಶನ ಹೋಮ ನಡೆಸಿ, ಪೂರ್ಣಾಹುತಿಯ ನಂತರ ಶೀರೂರು ಮಠದ ಸ್ವಾಮಿಗಳಾದ ಶ್ರೀ ಶ್ರೀ ವೇದದವರ್ಧನ ತೀರ್ಥರು ತಾಮ್ರದಿಂದ ತಯಾರಿಸಿದ ಸುದರ್ಶನ ಹಾಗೂ ಪಾಂಚಜನ್ಯ ಮುದ್ರೆಯನ್ನು, ಅದೇ ಅಗ್ನಿಯಲ್ಲಿ ಕಾಯಿಸಿ ಎಲ್ಲಾ

ರೋಗರುಜಿನಗಳಿಂದ ರಕ್ಷಣೆಗಾಗಿ ‘ತಪ್ತ ಮುದ್ರಾಧಾರಣೆ’ : ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಮುದ್ರಾಧಾರಣೆಗೆ ಮುಂದಾದ ಭಕ್ತರು

ಉಡುಪಿ: ಮಳೆಗಾಲ ಬಂತು ಅಂದರೆ ನಾನಾ ರೋಗರುಜಿನಗಳ ಆಗಮನವಾಯಿತೆಂದೇ ಅರ್ಥ. ಈ ಸಮಯದಲ್ಲಿ ಒಂದಲ್ಲ ಒಂದು ರೀತಿಯ ರೋಗಕ್ಕೆ ತುತ್ತಾಗುವುದು ಸಾಮಾನ್ಯ. ಆದರೆ ಮಳೆಗಾಲದಲ್ಲಿ ಬರಬಹುದಾದ ರೋಗರುಜಿನಗಳಿಂದ ರಕ್ಷಣೆಯ ಸಲುವಾಗಿ ತಪ್ತ ಮುದ್ರಾಧಾರಣೆ ಮಾಡುವ ಎಂಬ ನಂಬಿಕೆಯಿದೆ. ಮುದ್ರಾಧಾರಣೆಯನ್ನು ಚಾತುರ್ಮಾಸ್ಯದ ಮೊದಲ ದಿನ ಸರ್ವೈಕಾದಶಿಯಂದೇ ನಡೆಸಲಾಗುತ್ತದೆ. ಈ ಸಲುವಾಗಿ ಇಂದು ಉಡುಪಿಯ ಶ್ರೀ ಕೃಷ್ಣ ಮಠ ಹಾಗೂ ಅಷ್ಟಮಠಗಳಲ್ಲಿ ಮುದ್ರಾಧಾರಣೆ ನಡೆಯಿತು. ಮಳೆಗಾಲದ

ಉಡುಪಿಯಲ್ಲಿ ಸಂಭ್ರಮದ ಈದ್-ಅಲ್-ಅಧಾ ಆಚರಣೆ

ಉಡುಪಿ : ಕರಾವಳಿಯ ಮುಸ್ಲಿಮರು ಇಂದು ಅತ್ಯಂತ ಸಡಗರ, ಸಂಭ್ರಮದಿಂದ ಈದ್-ಅಲ್-ಅಧಾ ಆಚರಿಸುತ್ತಿದ್ದು, ಹಲವೆಡೆ ಮುಸ್ಲಿಮರಿಂದ ಸಾಮೂಹಿಕ ಪ್ರಾರ್ಥನೆ ನಡೆಯುತ್ತಿದೆ. ಉಡುಪಿ ನಗರದ ಜುಮಾ ಮಸೀದಿಯಲ್ಲಿ ಸಾಮೂಹಿಕ ನಮಾಝ್, ಈದ್ ಸಂದೇಶ, ಪ್ರವಚನ, ಈದ್ ಶುಭಾಶಯ, ನೆರೆಮನೆ ಹಾಗೂ ಸಂಬಂಧಿಕರ ಮನೆಗೆ ಸೌಹಾರ್ದ ಭೇಟಿಯ ಮೂಲಕ ಹಬ್ಬಕ್ಕೆ ಸಂಭ್ರಮ ತಂದರು. ಇನ್ನೂ ಕೆಲವೆಡೆ ಮಳೆಯ ನಡುವೆ ಪ್ರಾರ್ಥನೆ ಸಲ್ಲಿಸಲಾಗಿದೆ. ಈ ನಡುವೆ ಅಲ್ಲಲ್ಲಿ ಮಳೆಯಾಗುತ್ತಿದ್ದು, ಇದನ್ನು

ರಸ್ತೆಯಲೆಲ್ಲಾ ಡೀಸೆಲ್ ಚೆಲ್ಲಿ ವಾಹನ ಸವಾರರ ಪರದಾಟ

ಉಡುಪಿ: ರಸ್ತೆಯಲ್ಲಿ ಡೀಸೆಲ್ ಚೆಲ್ಲಿದ ಪರಿಣಾಮ ವಾಹನಗಳು ಸ್ಕಿಡ್ ಆದ ಘಟನೆ ಉಡುಪಿ ನಗರದ ಸಿಟಿ ಬಸ್ ತಂಗುದಾಣದ ಬಳಿ ಬುಧವಾರ ರಾತ್ರಿ ನಡೆದಿದೆ. ಕಲ್ಸಂಕದಿಂದ ಉಡುಪಿಯತ್ತ ತೆರಳುತ್ತಿದ್ದ ಟ್ರಕ್ ಒಂದರಿಂದ ರಸ್ತೆಯ ಮೇಲೆ ಡೀಸೆಲ್ ಚೆಲ್ಲಲ್ಪಟ್ಟಿದೆ. ಈ ವೇಳೆ ಉಡುಪಿಯತ್ತ ತೆರಳುತ್ತಿದ್ದ ದ್ವಿಚಕ್ರ ವಾಹನಗಳು ಸ್ಕಿಡ್ ಆದ ಘಟನೆ ನಡೆದಿದೆ. ಸುಮಾರು 15ರಿಂದ 20 ರಷ್ಟು ದ್ವಿಚಕ್ರ ವಾಹನಗಳು ಸ್ಕಿಡ್ ಆಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ

ಉಡುಪಿಯ ಇನ್ಸ್ ಪಾಯರ್ ನೀಟ್ ಅಕಾಡೆಮಿಯಲ್ಲಿ ಜೂಲೈ 1 ರಿಂದ ತರಗತಿಗಳು ಪ್ರಾರಂಭ

ಉಡುಪಿ : ನೀಟ್, ಸಿಇಟಿ ಮತ್ತು ಜೆಇಇ ಕೋರ್ಸ್ಗಳ ಅತ್ಯುತ್ತಮ ತರಬೇತಿಯನ್ನು ನೀಡುವ ಉಡುಪಿಯ ಮದರ್ ಆಫ್ ಸಾರೋಸ್ ಚರ್ಚ್ ಕಾಪೌಂಡ್‌ನಲ್ಲಿರುವ ನೂತನವಾಗಿ ಆರಂಭಗೊಂಡ ‘ಇನ್ಸ್ ಪಾಯರ್ ನೀಟ್ ಅಕಾಡೆಮಿ’ಯಲ್ಲಿ ತರಗತಿಗಳು ಜುಲೈ 01, 2023 ರಂದು ಪ್ರಾರಂಭವಾಗಲಿದೆ. ಇಲ್ಲಿ ನೀಟ್ ದೀರ್ಘಾವಧಿಯ ಕೋರ್ಸ್ಗಳು ನೀಟ್, ಸಿಇಟಿ, ಜೆಇಇ ನಿಯಮಿತ ವಾರಾಂತ್ಯದ ಬ್ಯಾಚ್ ಲಭ್ಯವಿದೆ. ಕರ್ನಾಟಕ ಮತ್ತು ಹೊಸದಿಲ್ಲಿಯ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ 16 ವರ್ಷಗಳ ಕಾಲ ಬೋಧನಾ

ಕಾರ್ಕಳ : ಮನೆಯ ಬೀಗ ಮುರಿದು ಕಳ್ಳತನಕ್ಕೆ ಯತ್ನ

ಮನೆಯೊಂದರ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ್ದ ಘಟನೆ ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಗೀತಾ ಎಂಬವರ ಮನೆಯಲ್ಲಿ ನಡೆದಿದೆ. ಸುಂದರ ಕುಲಾಲ್ ಎಂಬವರ ಪತ್ನಿ ಗೀತಾ ಅವರು ಅತ್ತೂರಿನ ತಾಯಿ ಮನೆಗೆ ಹೋಗಿದ್ದರು. ರಾತ್ರಿಯ ವೇಳೆಗೆ ಕಳ್ಳರು ಮನೆಯ ಮುಂದಿನ ಬಾಗಿಲನ್ನು ಮುರಿದು ಕಳ್ಳತನಕ್ಕೆ ವಿಫಲ ಯತ್ನ ಮಾಡಿದ್ದಾರೆ. ನೆರೆಮನೆಯವರು ಗೀತಾ ಅವರ ಮನೆಯ ಬಾಗಿಲು ತೆರೆದಿದ್ದ ಕಾರಣ ಬಂದು ನೋಡಿದಾಗ ಮನೆಯಲ್ಲಿ ದರೋಡೆಯಾದ ವಿಚಾರ ಬೆಳಕಿಗೆ ಬಂದಿದೆ. ಮನೆಯೊಳಗಿದ್ದ