ಉಡುಪಿ : ಉಡುಪಿ ತಾಲೂಕು ವ್ಯಾಪ್ತಿಯಲ್ಲಿ ಅಕ್ರಮ ಮರಳು ಸಾಗಾಣಿಕೆ ಕುರಿತು ಸಾರ್ವಜನಿಕರಿಂದ ದೂರುಗಳು ಬಂದ ತಕ್ಷಣವೇ ಅಧಿಕಾರಿಗಳು ಕಾರ್ಯಪ್ರವೃತರಾಗಿ ಮರಳು ಸಾಗಾಣಿಕೆಯನ್ನು ತಡೆಯಲು ಕ್ರಮಕೈಗೊಳ್ಳುವಂತೆ ಉಡುಪಿ ತಾಲೂಕು ತಹಶೀಲ್ದಾರ್ ರವಿ ಎಸ್ ಅಂಗಡಿ ಹೇಳಿದರು.ಅವರು ಶುಕ್ರವಾರ ಉಡುಪಿ ತಾಲೂಕು ಕಚೇರಿಯಲ್ಲಿ ಉಡುಪಿ ತಾಲೂಕು ಮರಳು ಉಪಖನಿಜ ಅಕ್ರಮ ಸಾಗಾಣಿಕೆ,
ಉಡುಪಿ : ಕುಂದಾಪುರ ತಾಲೂಕು ವಂಡ್ಸೆ ಹೋಬಳಿಯ ಹಟ್ಟಿಯಂಗಡಿ ಹಾಗೂ ಹೆಮ್ಮಾಡಿ ಪರಿಸರದಲ್ಲಿ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಟಕ್ಕೆ ಸಂಬಂಧಿಸಿದಂತೆ ಶುಕ್ರವಾರ ರಾತ್ರಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿ ಸಂಧ್ಯಾ ಅವರು ಕಾರ್ಯಾಚರಣೆ ನಡೆಸಿ 5 ಟಿಪ್ಪರ್ ಲಾರಿಗಳನ್ನು ವಶ ಪಡಿಸಿಕೊಂಡಿದ್ದಾರೆ.ಹಟ್ಟಿಯಂಗಡಿ ಗ್ರಾಮದ ಹಟ್ಟಿಕುದ್ರು ಹಾಗೂ ಹೆಮ್ಮಾಡಿ ಗ್ರಾಮದ ಕನ್ನಡಕುದ್ರು ಎಂಬಲ್ಲಿ ಪಂಚಗಂಗವಲ್ಲಿ ನದಿಯಿಂದ ಅನಧಿಕೃತವಾಗಿ ಮರಳುಗಾರಿಕೆ ನಡೆಸಿ, ಸಾಗಾಟ
ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಯು.ಆರ್. ಸಭಾಪತಿ ಅಲ್ಪಕಾಲದ ಅಸೌಖ್ಯದಿಂದ ಇಂದು ಬೆಳಗ್ಗೆ ನಿಧನರಾದರು. 1987ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪರಿಷತ್ ನ ಉದ್ಯಾವರ ಕ್ಷೇತ್ರದ ಸದಸ್ಯರಾಗಿದ್ದ ಇವರು, ಪರಿಷತ್ ನ ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಅದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉತ್ತರ ವಿಭಾಗದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 1989ರಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಉಡುಪಿ ಕ್ಷೇತ್ರದಿಂದ ಟಿಕೆಟ್
ಪಡುಬೆಳ್ಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಲೋಕ ಕಲ್ಯಾಣಕ್ಕಾಗಿ ಅರ್ಚಕರಾದ ಮಧ್ವರಾಜ ಭಟ್ ಇವರು ವಿಶ್ವಹಿಂದೂ ಪರಿಷತ್ ಪಡುಬೆಳ್ಳೆ ಘಟಕದವರೊಂದಿಗೆ ಆಯೋಜಿಸಿರುವ ಭಾಗವತ ಸಪ್ತಾಹ ಕಾರ್ಯಕ್ರಮ ನಡೆಯಿತು. ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ ಭಾಗವತ ಪುರಾಣದಲ್ಲಿ ಬರುವ ವಿಷಯಗಳನ್ನು ನಮ್ಮಲ್ಲಿ ಅಳವಡಿಸಿ ಕೊಂಡು ಜೀವನ ಸಾರ್ಥಕ ಮಾಡಿಕೊಳ್ಳಬೇಕು. ಇದರಲ್ಲಿ ದೇವರ ಚಿಂತನೆಗಳೊಂದಿಗೆ ಜೀವನ ಮೌಲ್ಯಗಳನ್ನು ತಿಳಿಸುವ
ಚುನಾವಣೆಯಲ್ಲಿ ಕಾರ್ಯಕರ್ತರು ಒಂದು ಪಕ್ಷದ ಪರ ಮತ್ತು ವಿರುದ್ದ ಕೆಲಸ ಮಾಡುವುದು ಸಾಮಾನ್ಯ ಚಟುವಟಿಕೆ ಆದರೆ ನನ್ನ ವಿರುದ್ಧ ಕೆಲಸ ಮಾಡಿದವರನ್ನು ನೋಡಿಕೊಳ್ಳುತ್ತೇನೆ ಎಂದು ವಿಜಯೋತ್ಸವದಲ್ಲಿ ಶಾಸಕ ಸುನೀಲ್ ಕುಮಾರ್ ಆಡಿದ ಮಾತನ್ನು ತೀವ್ರವಾಗಿ ಖಂಡಿಸುತ್ತೇನೆ, ಕಾರ್ಯಕರ್ತರಿಗೆ ಬೆದರಿಕೆ ಹಾಕಿದ ಶಾಸಕನ ವಿರುದ್ಧ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕ್ರಮ ಜರುಗಿಸಬೇಕೆಂದು ಒತ್ತಾಯಿಸುತ್ತೇನೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ವಕ್ತಾರರಾದ
ಮೆಸೊಕಾನ್ 2023 – ಮಣಿಪಾಲ ಸರ್ಜಿಕಲ್ ಆಂಕೊಲಾಜಿ ಕಾನ್ಫರೆನ್ಸ್ ಅನ್ನು ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಕ್ಯಾನ್ಸರ್ ಶಸ್ತ್ರ ಚಿಕಿತ್ಸಾ ವಿಭಾಗವು 2023 ರ ಮೇ 12 ಮತ್ತು 13 ರಂದು ಕೆಎಂಸಿ ಮಣಿಪಾಲದ ಡಾ ಟಿಎಂಎ ಪೈ ಆಡಿಟೋರಿಯಂನಲ್ಲಿ ಆಯೋಜಿಸಿದೆ. ಈ ಸಮ್ಮೇಳನದಲ್ಲಿ 150 ಕ್ಕೂ ಹೆಚ್ಚು ಪ್ರತಿನಿಧಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು, ಅವರು ಮುಖ್ಯವಾಗಿ ಭಾರತದಾದ್ಯಂತ ವಿವಿಧ ಆಂಕೊಲಾಜಿ ಮತ್ತು ಶಸ್ತ್ರಚಿಕಿತ್ಸಾ
ಕಾರ್ಕಳ: ಆಯತಪ್ಪಿ ಬಾವಿಗೆ ಬಿದ್ದ ಮಹಿಳೆಯನ್ನು ಕಾರ್ಕಳ ಅಗ್ನಿಶಾಮಕ ದಳದ ತಂಡ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಕಾರ್ಕಳ ತಾಲೂಕು ಕಚೇರಿ ಸಮೀಪದ ಬಂಗ್ಲೆಗುಡ್ಡೆ ಕೆಎಂಇಎಸ್ ಶಾಲೆ ಎದುರಿನ ನಿವಾಸಿ ನಸೀಬಾ ಬಾನು(33) ಎಂಬವರು ಗುರುವಾರ ಸಂಜೆ 5 ಗಂಟೆ ಸುಮಾರಿಗೆ ತಮ್ಮ ಮನೆಯ ಬಾವಿಗೆ ಬಿದ್ದಾಗ ಆಕೆಯ ಗಂಡ ಹುಸೇನ್ ಎಂಬವರು ತಕ್ಷಣವೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ತಿಳಿಸಿದ್ದರು.ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ
ಚಲಿಸುತ್ತಿದ್ದ ಅಟೋ ರಿಕ್ಷಾವೊಂದಕ್ಕೆ ಮರವೊಂದು ಬಿದ್ದ ಪರಿಣಾಮ ಅಟೋ ರಿಕ್ಷಾ ಪ್ರಯಾಣಿಕರಿಬ್ಬರು ದಾರುಣಾವಾಗಿ ಮೃತಪಟ್ಟ ಘಟನೆ ಕಾಪು ಮಜೂರು ಸ್ವಾಗತ ನಗರ ಬಳಿ ರಾತ್ರಿ ನಡೆದಿದೆ. ಮೃತರು ಶಿರ್ವ ರೈಸ್ ಮಿಲ್ ಬಳಿಯ ಶಾಂತಿಗುಡ್ಡೆ ನಿವಾಸಿ ಪುಷ್ಪಾ ಹಾಗೂ ಅವರ ಮೈದುನ ಎನ್ನಲಾಗಿದೆ. ಕಾಪುವಿನ ಶರೀಫ್ ಎಂಬವರ ಅಟೋ ಏರಿಕೊಂಡು ಮನೆಕಡೆಗೆ ಹೋಗುತ್ತಿದ್ದ ವೇಳೆ ಬೀಸಿದ ಮಳೆಗಾಳಿಗೆ ಮರವೊಂದು ರಸ್ತೆಯಲ್ಲಿ ಸಾಗುತ್ತಿದ್ದ ಅಟೋ ರಿಕ್ಷಾದ ಮೇಲೆರಗಿದೆ. ಮರಬಿದ್ದ ಪರಿಣಾಮ
ತನ್ನ ಹಕ್ಕನ್ನು ಚಲಾಯಿಸಿ ಮನೆಗೆ ತೆರಳಿದ 93ರ ಹರೆಯದ ವಯೋವೃದ್ದೆಯೊರ್ವರು ಹೃದಯಾಘಾತಕ್ಕೆ ಬಲಿಯಾದ ಘಟನೆ ಹೆಜಮಾಡಿಯಲ್ಲಿ ನಡೆದಿದೆ. ಮೃತರು ಹೆಜಮಾಡಿ ನಿವಾಸಿ ಮರಿಯಮ್ಮ 94 ವರ್ಷ ಮುಂಜಾನೆ ಹೆಜಮಾಡಿಯ ಪೇಟೆ ಸಮೀಪದ ಸರ್ಕಾರಿ ಶಾಲಾ ಬೂತಲ್ಲಿ ತನ್ನವರೊಂದಿಗೆ ವೀಲ್ಹ್ ಚಯರ್ ಸಹಕಾರದಿಂದ ಮತಗಟ್ಟೆಗೆ ಹೋಗಿ ಮತ ಚಲಾಯಿಸಿದ್ದರು. ವಿಶೇಷವೆಂದರೆ ವಯೋವೃದ್ದೆಯನ್ನು ಕಂಡ ಪೊಲೀಸ್ ಅಧಿಕಾರಿಯೋರ್ವರು ಹಿರಿಯರೆಂಬ ಕರುಣೆಯಿಂದ ಅವರನ್ನು ಮಾತನಾಡಿಸಿ ನೂರಾರು ದೇವರು ನಿಮಗೆ
ಉಡುಪಿ: ಚಿತ್ರನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಉಡುಪಿಯಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, “ಮತದಾನ ಮಾಡುವುದು ಬಹಳ ಮುಖ್ಯ. ಅದು ನಮ್ಮ ಜವಾಬ್ದಾರಿ. ನನಗೆ ಪಕ್ಷದ ಮೇಲೆ ಒಲವಿದೆ. ಪ್ರಚಾರಕ್ಕೆ ಹೋಗಲ್ಲ. ಆ ಕ್ಷೇತ್ರದಲ್ಲಿ ಜನರಿಗಾಗಿ ಕೆಲಸ ಮಾಡುವ ನಾಯಕರನ್ನು ಆಯ್ಕೆ ಮಾಡುವುದು ಒಳ್ಳೆಯದು.” ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.




























