ರಾಷ್ಟ್ರೀಯ ಹೆದ್ದಾರಿ 66ರ ಬಳಿಯ ಕಟಪಾಡಿ ಗ್ರೀನ್ ವ್ಯಾಲಿಯಲ್ಲಿ ಉಡುಪಿ ಜಿಲ್ಲಾ ಮಟ್ಟದ ಫಲಾನುಭವಿಗಳ ಸಮಾವೇಶವು ಉದ್ಘಾಟನೆ ಗೊಂಡಿತು. ಸಮಾವೇಷವನ್ನು ಜಿಲ್ಲಾ ಉಸ್ತುವಾರಿ ಹಾಗೂ ಮೀನುಗಾರಿಕಾ ಸಚಿವ ಎಸ್ ಅಂಗಾರ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಒಟ್ಟು 155 ಗ್ರಾಪಂನ ವಿವಿಧ ಯೋಜನೆಗಳಡಿ ಸುಮಾರು 15 ಸಾವಿರ ಫಲಾನುಭವಿಗಳು ಪಾಲ್ಗೊಂಡಿದ್ದರು.
ಉಡುಪಿ : ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆ ವತಿಯಿಂದ ಮಹಿಳಾ ದಿನಾಚರಣೆಯ ಪ್ರಯುಕ್ತ ಸಾಧಕ ಮಹಿಳೆ ಯರಿಗೆ ಸನ್ಮಾನ ಮತ್ತು ಸಂವಾದ ಕಾರ್ಯಕ್ರಮವನ್ನು ಬುಧವಾರ ಉಡುಪಿ ಶಾಖೆಯಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಉಡುಪಿ ಶಿಶು ಅಭಿವೃದ್ಧಿ ಜಿಲ್ಲಾ ಯೋಜನಾ ಅಧಿಕಾರಿ ಶ್ರೀಮತಿ ವೀಣಾ ಮಹಿಳಾ ದಿನಾಚರಣೆ ಎಂಬುದು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರಬಾರದು, ಮಹಿಳೆಯರಿಗೆ ಸಿಗಬೇಕಾದ ಸಮಾನ ಗೌರವ, ಪ್ರತಿದಿನವೂ
ವಿಶ್ವ ಮೂತ್ರಪಿಂಡ ಖಾಯಿಲೆಗಳ ದಿನದ ಪ್ರಯುಕ್ತ ಮಾರ್ಚ್ 09, 2023 ರ ಗುರುವಾರದಂದು ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಮೂತ್ರಪಿಂಡ ಖಾಯಿಲೆಗಳ ತಜ್ಞ ವೈದ್ಯರಾದ ಡಾ. ಮೇಘಾ ಪೈ ರವರ ನೇತೃತ್ವದಲ್ಲಿ ಡಯಾಲಿಸಿಸ್ ಚಿಕಿತ್ಸೆಗೆ ಒಳಪಡುವ ರೋಗಿಗಳಿಗಾಗಿ ಬೃಹತ್ ಉಚಿತ ಮೂತ್ರಪಿಂಡದ ಖಾಯಿಲೆಗಳ ತಪಾಸಣಾ ಶಿಬಿರ ನಡೆಯಿತು. ಈ ಕಾರ್ಯಕ್ರಮವನ್ನು ಉಡುಪಿ ಆದರ್ಶ ಆಸ್ಪತ್ರೆಯ ಖ್ಯಾತ ನೆಫ್ರೊಲೊಜಿಸ್ಟ್ ಡಾ. ಮೇಘಾ ಪೈ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ
ಟ್ಯೂಬ್ ಮೂಲಕ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿ ಸಮುದ್ರದ ತೆರೆಯ ಅಬ್ಬರಕ್ಕೆ ಸಿಲುಕಿ ಸಮುದ್ರ ಪಾಲಾದ ಘಟನೆ ಉಳಿಯಾರಗೋಳಿ ಕಡಲ ಕಿನಾರೆಯಲ್ಲಿ ನಡೆದಿದೆ. ಉಳಿಯಾರಗೋಳಿ ಯಾರ್ಡ್ ಬಳಿಯ ನಿವಾಸಿ ಸಂತೋಷ್ (48) ಮೀನುಗಾರಿಕೆಗೆ ತೆರಳಿ ನಾಪತ್ತೆ ಯಾಗಿರುವ ವ್ಯಕ್ತಿ. ಸಾಂಪ್ರದಾಯಿಕ ರೀತಿಯಲ್ಲಿ ಬಲೆ ಬೀಸಿ ಮೀನುಗಾರಿಕೆ ನಡೆಸುತ್ತಿದ್ದ ಸಂತೋಷ್ ಬುಧವಾರ ಸಂಜೆ 5 ಗಂಟೆಯ ವೇಳೆಗೆ ಟ್ಯೂಬ್ ಧರಿಸಿಕೊಂಡು ಮೀನುಗಾರಿಕೆಗೆ ತೆರಳಿದ್ದು, ಬಲೆ ಬೀಸಿ
ವಿಶ್ವ ಮೂತ್ರಪಿಂಡ ಖಾಯಿಲೆಗಳ ದಿನದ ಪ್ರಯುಕ್ತ ಮಾರ್ಚ್ 09, 2023 ರ ಗುರುವಾರದಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ರವರೆಗೆ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಮೂತ್ರಪಿಂಡ ಖಾಯಿಲೆಗಳ ತಜ್ಞ ವೈದ್ಯರಾದ ಡಾ. ಮೇಘಾ ಪೈ ರವರ ನೇತೃತ್ವದಲ್ಲಿ ಡಯಾಲಿಸಿಸ್ ಚಿಕಿತ್ಸೆಗೆ ಒಳಪಡುವ ರೋಗಿಗಳಿಗಾಗಿ ಬೃಹತ್ ಉಚಿತ ಮೂತ್ರಪಿಂಡದ ಖಾಯಿಲೆಗಳ ತಪಾಸಣಾ ಶಿಬಿರ ನಡೆಯಲಿದೆ. ಈ ಶಿಬಿರದಲ್ಲಿ ಭಾಗವಹಿಸುವ ರೋಗಿಗಳಿಗೆ ರಕ್ತದ ಸಾಮಾನ್ಯ ಪರೀಕ್ಷೆಗಳು (CBC), ರಕ್ತದ ಸಕ್ಕರೆ ಅಂಶದ
ಸ್ಕೂಟರ್ ಗೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ದಂಪತಿಗಳು ಸ್ಧಳದಲ್ಲಿಯೇ ಸಾವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಮೂಲ್ಕಿ ಸಮೀಪದ ಬಪ್ಪನಾಡು ಸೇತುವೆ ಬಳಿ ನಡೆದಿದೆ. ಮೃತ ದಂಪತಿಗಳನ್ನು ತೀರ್ಥಹಳ್ಳಿ ಕೋಳಿ ಕಾಲು ಗುಡ್ಡೆ ನಿವಾಸಿಗಳಾದ ಅಕ್ಬರ್ ಭಾಷಾ (61) ವರ್ಷ ಹಾಗೂ ಖತಿಜಾ ಬಿ (46 ವರ್ಷ ) ಎಂದು ಗುರುತಿಸಲಾಗಿದೆ. ಮಂಗಳೂರಿನ ಪಾಸ್‌ಪೋರ್ಟ್ ಕಛೇರಿಗೆ ಪಾಸ್‌ಪೋರ್ಟ್ ಮಾಡಿಸಲೆಂದು ಮೃತ ದಂಪತಿಗಳು ಮುಂಜಾನೆ ತಮ್ಮ ಸ್ಕೂಟರಿನಲ್ಲಿ
ಬೃಹತ್ ಬಂಡೆಕಲ್ಲುಗಳನ್ನು ಟಿಪ್ಪರ್ ಗಳಲ್ಲಿ ಕಾನೂನು ಬಾಹಿರವಾಗಿ ಅಪಾಯಕಾರಿ ಸ್ಥಿತಿಯಲ್ಲಿ ಸಾಗಿಸುತ್ತಿದ್ದು, ಜನರ ಪ್ರಾಣಕ್ಕೆ ಕುತ್ತುತರುವ ಇಂಥಹ ಪ್ರಕ್ರಿಯೆಗೆ ಸಾರಿಗೆ ಇಲಾಖೆ ಕಡಿವಾಣ ಹಾಕ ಬೇಕಾಗಿದೆ ಎಂಬುದಾಗಿ ಸಾಮಾಜಿಕ ಕಾರ್ಯಕರ್ತ ಎಂ.ಪಿ. ಮೊಹಿದ್ಧಿನಬ್ಬ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಬಡಪಾಯಿಗಳಿಂದ ಸಂಚಾರದಲ್ಲಿ ಸಣ್ಣಪುಟ್ಟ ತೊಡಕುಗಳಾದರೂ ಸಾರಿಗೆ ಇಲಾಖೆ ಸಹಿತ ಪೊಲೀಸ್ ಇಲಾಖೆ ಕಾನೂನು ಕ್ರಮ ಕೈಗೊಳ್ಳುತ್ತಿದ್ದು, ಇಂಥಹ ಅಮಾಯಕರ ಪ್ರಾಣದ ಜೊತೆ
ಉಡುಪಿ ಜಿಲ್ಲೆಯ ವಕ್ಫ್ ಸಲಹಾ ಸಮಿತಿಯು ಮಸೀದಿಗಳ ಅನುದಾನ ಬಿಡುಗಡೆಗೆ ಶೇ. 20 ರಷ್ಟು ಮುಂಗಡವಾಗಿ ನಗದು ರೂಪದಲ್ಲಿ ನೀಡಬೇಕು ಎಂದು ಬೇಡಿಕೆ ಇಡುತ್ತಿದ್ದಾರೆ ಎಂದು ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಮಾಜಿ ಉಪಾಧ್ಯಕ್ಷ ಗುಲಾಂ ಮುಹಮ್ಮದ್ ಹೆಜಮಾಡಿ ಆರೋಪಿಸಿದ್ದಾರೆ.ಕಾಪು ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ವಕ್ಫ್ ಸಲಹಾ ಸಮಿತಿಯು ಜಿಲ್ಲೆಯಲ್ಲಿರುವ ಮಸೀದಿಗಳ ಮೂಲಸೌಕರ್ಯಗಳ ಅಭಿವೃದ್ಧಿಗೆ ಚಿಂತನೆ ನಡೆಸುವ ಮೂಲಕ
ಕಾಪು ತಾಲೂಕಿನ ತೆಂಕ ಎರ್ಮಾಳು ಪಡುತೋಟ ನಿವಾಸಿ ಕಮಲ ಪೂಜಾರ್ತಿ(95) ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಮಾ.1ರಂದ್ದು ಮೃತರಾಗಿದ್ದಾರೆ. ಇವರ ಅಂತ್ಯಕ್ರಿಯೆ ಮಾ.2ರಂದ್ದು ನಡೆದಿದೆ.ಮೃತರು ಮೂವರು ಗಂಡು ಹಾಗೂ ಮೂರು ಮಂದಿ ಹೆಣ್ಣು ಮಕ್ಕಳು ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಉಡುಪಿ ಜನತೆಗೆ ಬೆಳ್ಳಂಬೆಳಿಗ್ಗೆ ಒಂದೆಡೆ ಶಾಕ್ ಅದ್ರೆ ಮತ್ತೊಂದೆಡೆ ಖುಷಿ ,ಯಾಕೆಂದ್ರೆ ಕೃಷ್ಣ ನಗರಿ ಉಡುಪಿ ಇಂದು ಮುಂಜಾನೆ ಮಂಜಿನ ನಗರಿಯಾಗಿ ಮಾರ್ಪಡಾಗಿತ್ತು.ಮುಂಜಾನೆ ಮನೆಯಿಂದ ಹೊರ ಬಂದ ಜನರಿಗೆ ನಾವು ಉಡುಪಿಯಲ್ಲಿದ್ದೇವೋ..ಅಥವಾ ಮಡಕೇರಿಯಲ್ಲಿದ್ದೇವೋ ಅನ್ನೋ ಕನ್ಪೂಶನ್.ಎಂಟು ಗಂಟೆಯಾದರೂ ನಗರದಲ್ಲಿ ಮಂಜು ಮುಸುಕಿದ ವಾತಾವರಣ ಕಾಣಾಸಿಕ್ಕಿತ್ತು.ಹವಾಮಾನ ವೈಪರಿತ್ಯದಿಂದಲೋ ಗೊತ್ತಿಲ್ಲ ಒಟ್ಟಿನಲ್ಲಿ ಉಡುಪಿ ಜನತೆಯಂತೂ ಇಂದಿನ ಮುಂಜಾನೆ ವಾತವರಣವನ್ನು ಎಂಜಾಯ್



























