ಉಳ್ಳಾಲ: ಸಿಪಿಐಎಂ ಹಿರಿಯ ಮುಖಂಡ ನಾರಾಯಣ ತಲಪಾಡಿ ನಿಧನ

ಉಳ್ಳಾಲ: ಸಿಪಿಐಎಂ ಪಕ್ಷದ ಹಿರಿಯ ಮುಖಂಡ ತಲಪಾಡಿ ನಾರ್ಲ ನಿವಾಸಿ ನಾರಾಯಣ ತಲಪಾಡಿ( 68) ಹೃದಯಾಘಾತದಿಂದ ಇಂದು ನಿಧನ ಹೊಂದಿದರು. ಪಕ್ಷದ ಚಟುವಟಿಕೆ ನಿಮಿತ್ತ ಉಪ್ಪಳದ ಮುಖಂಡರೊಬ್ಬರ ಮನೆಗೆ ತೆರಳಿ ವಾಪಸ್ಸಾಗುವಾಗ ಹೃದಯಾಘಾತ ಉಂಟಾಗಿದೆ.
ಇವರು ಸಿಪಿಐಎಂ ಉಳ್ಳಾಲ ವಲಯ ಸಮಿತಿ ಸದಸ್ಯರು, ದಲಿತ ಹಕ್ಕುಗಳ ಹೋರಾಟ ಸಮಿತಿ ಜಿಲ್ಲಾ ಸದಸ್ಯರು, ಕೋಟೆಕಾರು ಸರ್ಕಲ್ ಬೀಡಿ ಲೇಬರ್ ಯೂನಿಯನ್ ವಲಯ ಸಮಿತಿ ಸದಸ್ಯ, ಕೆಪಿಆರ್ ಎಸ್ ರೈತ ಸಂಘದ ಜಿಲ್ಲಾ ಸಮಿತಿ ಸದಸ್ಯರು, ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘ ನಾಲ್ಕನೇ ಅವಧಿಯ ನಿರ್ದೇಶಕರಾಗಿದ್ದರು. ತಲಪಾಡಿ ಭಾಗದಲ್ಲಿ ಕೊರಗಜ್ಜನ ಪಾತ್ರಿಯಾಗಿಯೂ ದೈವಾರಾಧನೆಯಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಬೀಡಿ ಲೇಬರ್, ದಲಿತ ಹಕ್ಕುಗಳಿಗೆ ಹಾಗೂ ಮೂಲಭೂತ ಸೌಕರ್ಯಗಳಿಗಾಗಿ ಹೋರಾಟದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು. ಮೃತರು
ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮೃತರಿಗೆ
ಸಿಪಿಐಎಂ ಉಳ್ಳಾಲ ವಲಯ ಸಮಿತಿಯ ಕೃಷ್ಣಪ್ಪ ಸಾಲ್ಯಾನ್, ಪದ್ಮಾವತಿ ಶೆಟ್ಟಿ, ಜಯಂತ್ ನಾಯ್ಕ್, ಸುಕುಮಾರ್ ತೊಕ್ಕೊಟ್ಟು, ನಿತಿನ್ ಕುತ್ತಾರ್, ಮಹಾಬಲ ಟಿ., ಶೇಖರ ಕುಂದರ್, ರಝಾಕ್ ಮೊಂಟೆಪದವು, ರಿಝ್ವಾನ್ ಹರೇಕಳ , ರಝಾಕ್ ಮುಡಿಪು, ಶಿವಾನಂದ ತಲಪಾಡಿ, ಹರಿಣಾಕ್ಷಿ ತಲಪಾಡಿ, ಲೋಕಯ್ಯ ಪನೀರು ಸಂತಾಪ ವ್ಯಕ್ತಪಡಿಸಿದ್ದಾರೆ.

Related Posts

Leave a Reply

Your email address will not be published.