Home Posts tagged #v4news karnataka (Page 141)

ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ನೇತೃತ್ವದಲ್ಲಿ : ಕೊಲ್ಲೂರು ಕ್ಷೇತ್ರದಲ್ಲಿ ನಡೆದ ಶತ ಚಂಡಿ ಮಹಾ ಯಾಗ

ಕುಂದಾಪುರ: ಕೊಲ್ಲೂರಿನಲ್ಲಿ ಕಳೆದ ನಾಲ್ಕು ದಿನಗಳಿಂದ ಲೋಕ ಕಲ್ಯಾಣಾರ್ಥವಾಗಿ ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ಚಂಡಿಕಾ ಪಾರಾಯಣ ಹಾಗೂ ಶತ ಚಂಡಿ ಮಹಾಯಾಗಕ್ಕೆ ಶುಕ್ರವಾರ ಮಧ್ಯಾಹ್ನ ಪೂರ್ಣಾಹುತಿ ನೀಡಲಾಯಿತು.ಕೊಲ್ಲೂರು ದೇವಳದ ಮೂರ್ತಿದಾರಕ ಮೂರ್ತಿ ಕಾಳಿದಾಸ ಭಟ್ ಅವರ ನಿವಾಸದಲ್ಲಿ ನಡೆದ ಶತ ಚಂಡಿ ಯಾಗಕ್ಕೆ ಋತ್ವಿಜರ

ಮರಗಳು ಉರುಳಿಬಿದ್ದು `ಕೊಲ್ಯ ಕೆರೆ’ಗೆ ಹಾನಿ

ಪುತ್ತೂರು : ಪುತ್ತೂರು ತಾಲ್ಲೂಕಿನ ಆರ್ಯಾಪು ಗ್ರಾಮದ ಸಂಪ್ಯ ಸಮೀಪದಲ್ಲಿರುವ ಪುರಾತನ ಕಾಲದ ಕೊಲ್ಯ ಕೆರೆ' ಯ ಬದಿಯಲ್ಲಿದ್ದ ಬೃಹತ್ ಗಾತ್ರದ ಮರಗಳೆರಡು ಬುಡಸಮೇತ ಉರುಳಿಬಿದ್ದು, ಸಂಪೂರ್ಣವಾಗಿ ಕೆರೆಯನ್ನು ಆವರಿಸಿಕೊಂಡಿದೆ, ಮಾತ್ರವಲ್ಲದೆ ಅಭಿವೃದ್ಧಿಗೊಂಡಿದ್ದ ಕೆರೆಗೆ ಹಾನಿಯಾಗಿದೆ. ಮರಗಳು ಬುಡಸಮೇತ ಉರುಳಿ ಬಿದ್ದಿರುವ ಪರಿಣಾಮವಾಗಿ ಕೆರೆಯ ಬದಿಯಲ್ಲಿರುವ ರಸ್ತೆ ಭಾಗ ಕುಸಿದು ಅಪಾಯದ ಸ್ಥಿತಿಯಲ್ಲಿದ್ದು, ರಸ್ತೆ ಸಂಪರ್ಕಕ್ಕೆ ತಡೆಯಾಗುವ ಆತಂಕ ಎದುರಾಗಿದೆ.

ವಿಂಟೇಜ್ ಹ್ಯಾಂಡ್ ಲೂಮ್ ಸೀರೆಗಳ ಫ್ಯಾಶನ್ ಶೋ

ಇದೊಂದು ಅಪರೂಪದ ಫ್ಯಾಶನ್ ವಾಕ್ , ಹ್ಯಾಂಡ್ಲೂಮ್ ಸೀರೆಗಳನ್ನು ಜನಪ್ರಿಯಗೊಳಿಸಬೇಕೆಂಬ ಕಾಳಜಿಯಿಂದ ನಡೆದ ಫ್ಯಾಶನ್ ಶೋ ಇದಾಗಿತ್ತು. ಇಲ್ಲಿ ಹೊಸ ಸೀರೆಯ ಜೊತೆಗೆ 45 ವರ್ಷಗಳ ಹಳೆಯ ಸೀರೆಯೊಂದಿಗೆ ನೀರೆಯರು ರ್‍ಯಾಂಪ್ ವಾಕ್ ಮಾಡಿ ಗಮನ ಸೆಳೆದರು. ರಾಷ್ಟ್ರೀಯ ಕೈಮಗ್ಗ ಸಪ್ತಾಹದ ಅಂಗವಾಗಿ ನೇಕಾರ ಸಮುದಾಯವನ್ನು ಬೆಂಬಲಿಸುವ ಸಲುವಾಗಿ ಈ ಫ್ಯಾಶನ್ ಶೋ ಕಾರ್ಯಕ್ರಮವನ್ನು ರೇಣುಕಾ ಪ್ರಕಾಶ್ ಗೌಡ ಅವರ ನೇತೃತ್ವದ “ಸಿಕ್ಸ್ ಯಾರ್ಡ್ಸ್ ಲವ್” ಸೀರೆ ಪ್ರೀಯರ ಬಳಗ

ಕಡಂದಲೆ : ವಿದ್ಯುತ್ ಸಬ್ ಸ್ಟೇಶನ್ , ಗ್ರಾಮಸ್ಥರಿಗೆ ಸುಳ್ಳು ಮಾಹಿತಿ ನೀಡಿ ಸರ್ವೆ ನಡೆಸಿದ್ದು ಯಾಕೆ

ಮೂಡುಬಿದಿರೆ: ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡಂದಲೆ ಗ್ರಾಮದಲ್ಲಿ 400/220 ಕೆ.ವಿ ವಿದ್ಯುತ್ ಸ್ಥಾಪನೆಯ ಕುರಿತು ಈಗಾಗಲೇ ಪಂಚಾಯತ್‍ಗೆ ಮಾಹಿ ತಿಯನ್ನು ನೀಡಿದ್ದೇವೆ ಎಂದು ಸುಳ್ಳು ಮಾಹಿತಿಯನ್ನು ನೀಡಿ ಪಂಚಾಯತ್‍ನ ಅಭಿವೃದ್ಧಿ ಅಧಿಕಾರಿ, ಅಧ್ಯಕ್ಷರು, ಸದಸ್ಯರ ಹಾಗೂ ಗ್ರಾಮಸ್ಥರ ಯಾರ ಗಮನಕ್ಕೂ ಬಾರದೇ ಜನ ವಾಸ್ತವ್ಯವಿರುವ ಪ್ರದೇಶ, ಕೃಷಿ ಭೂಮಿಯಲ್ಲಿ ವಿದ್ಯುತ್ ಸಬ್ ಸ್ಟೇಶನ್ ಅನುಷ್ಠಾನಗೊಳಿಸಲು ಕೆ.ಪಿ.ಟಿ.ಸಿ.ಎಲ್‍ನ

ಜಿಲ್ಲಾ ಮಟ್ಟದ ಸ್ಕೇಟಿಂಗ್ ಚಾಂಪಿಯನ್‍ಶಿಫ್ ಸ್ಪರ್ಧೆ : ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಸಾಧನೆ

ಬಂಟ್ವಾಳ: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಲಾದ ಜಿಲ್ಲಾ ಮಟ್ಟದ ಸ್ಕೇಟಿಂಗ್ ಚಾಂಪಿಯನ್‍ಶಿಪ್ ಸ್ಪರ್ಧೆಯಲ್ಲಿ ಪೊಳಲಿ ಶ್ರೀ ರಾಮಕೃಷ್ಣ ತಪೋವನದಲ್ಲಿ ತರಬೇತಿ ಪಡೆಯುತ್ತಿರುವ 8 ಮಂದಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆಯನ್ನು ಮಾಡಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಸ್ಪರ್ಧಾ ಕೂಟದಲ್ಲಿ ಕಳ್ಳಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಹಂಸಿಕಾ ಹಾಗೂ ಗಿತೇಶ್ ದ್ವಿತೀಯ ಸ್ಥಾನ ಗೆದ್ದುಕೊಂಡಿದ್ದಾರೆ ಪೊಳಲಿ

10 ರೂ. ಮೌಲ್ಯದ ಕಾಯಿನ್ ,ಅಪಪ್ರಚಾರಕ್ಕೆ ಕಿವಿಗೊಡದೆ ಮುಕ್ತವಾಗಿ ಬಳಸಿ : ಜೋ ಡಿಸೋಜ

ಪುತ್ತೂರು: ಪ್ರಸ್ತುತ ದೇಶದಾದ್ಯಂತ ಚಲಾವಣೆಯಲ್ಲಿರುವ 10 ರೂ. ಮೌಲ್ಯದ ಕಾಯಿನ್ ಆರ್‍ಬಿಐ ಸಂಯೋಜಿತ ಅಧಿಕೃತ ಚಲಾವಣೆಯಾಗಿದ್ದು, ಯಾರೂ ಅಪಪ್ರಚಾರಕ್ಕೆ ಕಿವಿಗೊಡದೆ ಮುಕ್ತವಾಗಿ ದೈನಂದಿನ ಹಣಕಾಸು ವ್ಯವಹಾರದಲ್ಲಿ ಬಳಸಬೇಕು ಎಂದು ಪುತ್ತೂರು ವರ್ತಕ ಸಂಘದ ಅಧ್ಯಕ್ಷ ಜೋ ಡಿಸೋಜ ಹಾಗೂ ಕೆನರಾ ಬ್ಯಾಂಕ್ ಪುತ್ತೂರು ವಿಭಾಗೀಯ ಮ್ಯಾನೇಜರ್ ನರೇಂದ್ರ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.10 ರೂ. ಕಾಯಿನ್ ಚಲಾವಣೆಯಲ್ಲಿ ಇಲ್ಲ ಎಂಬ ಕುರಿತು ಸಾರ್ವಜನಿಕ ವಲಯದಲ್ಲಿ

ಭವಿಷ್ಯ ನಿಧಿ ಕಚೇರಿಯ ಮುಂದೆ ಪಿಂಚಣಿದಾರರ ಪ್ರತಿಭಟನೆ

ಮಂಗಳೂರು, ಆ.25: ಪೆನ್‌ಶನ್‌ ಏಕತಾ ಸಂಘರ್ಷ ಮಂಚ್ ದೇಶವ್ಯಾಪಿ ಕರೆ ನೀಡಲಾದ ಪ್ರತಿಭಟನಾ ಪ್ರದರ್ಶನಕ್ಕೆ ಬೆಂಬಲವಾಗಿ ಮಂಗಳೂರಿನ ಭವಿಷ್ಯ ನಿಧಿ ಕಚೇರಿಯ ಮುಂದೆ ಗುರುವಾರ ಪಿಂಚಣಿದಾರರು ಪ್ರತಿಭಟಿಸಿದರು. ಪಿಂಚಣಿದಾರರ ಸಂಘದ ದ.ಕ.ಜಿಲ್ಲಾಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ ಮಾತನಾಡಿ ಕಳೆದ 8 ವರ್ಷಗಳಿಂದ ಪಿಂಚಣಿಯಲ್ಲಿ ಏರಿಕೆ ಆಗಿಲ್ಲ. ಕೊಶಿಯಾರಿ ಸಮಿತಿಯು ಕನಿಷ್ಠ ಪಿಂಚಣಿ 3,000 ರೂ.ಕೊಡಬಹುದು ಎಂದು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿ 3 ವರ್ಷ ಕಳೆದರೂ ಕೂಡ ಸರಕಾರ

ಕಾಲ್ತೋಡಿ : ಕಾಲುಸಂಕದಿಂದ ಬಿದ್ದು ಮೃತ ಬಾಲಕಿ ಪೋಷಕರಿಗೆ ಸಂಸದ ರಾಘವೇಂದ್ರ ಸಾಂತ್ವಾನ

ಕುಂದಾಪುರ: ಇತ್ತೀಚೆಗೆ ಕಾಲು ಸಂಕದಿಂದ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಕಾಲ್ತೋಡು ಬೋಳಂಬಳ್ಳಿಯ ಮೃತ ಬಾಲಕಿ ಸನ್ನಿಧಿ ಪೋಷಕರು ಸಂಸದ ಬಿವೈ ರಾಘವೇಂದ್ರ ಅವರನ್ನು ಕೊಲ್ಲೂರು ಪ್ರವಾಸಿ ಮಂದಿರಲ್ಲಿ ಗುರುವಾರ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಮೃತ ಬಾಲಕಿಯ ಪೋಷಕರಿಗೆ ಸಾಂತ್ವನ ತಿಳಿಸಿದ ಅವರು, ಸನ್ನಿಧಿ ಪೋಷಕರಾದ ಪ್ರದೀಪ್ ಮತ್ತು ಸುಮಿತ್ರಾ ಅವರಿಗೆ ವೈಯಕ್ತಿಕವಾಗಿ ಆರ್ಥಿಕ ಸಹಾಯ ನೀಡಿದರು. ಈ ವೇಳೆ ಶಾಸಕ ಸುಕುಮಾರ ಶೆಟ್ಟಿ, ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್

ಕನ್ನಡ ಸಂಸ್ಕ್ರತಿ ಇಲಾಖೆ ಟ್ರಸ್‍ಗಳ ಸದಸ್ಯರ ನೇಮಕಾತಿಯಲ್ಲಿ ಅಚಾತುರ್ಯ : ಮರಣ ಹೊಂದಿದ ಇಬ್ಬರ ಹೆಸರು ಸೇರಿ ಪ್ರಮಾದ

ಕನ್ನಡ ಸಂಸ್ಕ್ರತಿ ಇಲಾಖೆ ಟ್ರಸ್‍ಗಳ ಸದಸ್ಯರ ನೇಮಕಾತಿಯಲ್ಲಿ ಅಚಾತುರ್ಯದ ಬಗ್ಗೆ ಸಚಿವ ಸುನೀಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವೇ ವ್ಯಕ್ತಿಗಳ ತಂಡಕ್ಕೆ ಸೀಮಿತವಾಗಿದ್ದ ಟ್ರಸ್ಟ್ ಗಳ ಪುನರ್ ರಚನೆ ಮಾಡಿದ್ದೇವೆ. ಟ್ರಸ್ಟ್‍ಗಳು ಬಹು ವರ್ಷಗಳ ಕಾಲ ನೆನೆಗುದಿಗೆ ಬಿದ್ದಿತ್ತು. ಡಿಸೆಂಬರ್ ನಲ್ಲಿಯೇ ಈ ಪಟ್ಟಿ ಮಾಡಲಾಗಿತ್ತು, ನಿನ್ನೆ ಸರಕಾರ ಅನುಮೋದನೆ ಕೊಟ್ಟಿತ್ತು. ಮರಣ ಹೊಂದಿದ ಇಬ್ಬರ ಹೆಸರು ಪಟ್ಟಿಯಲ್ಲಿ ಸೇರಿ ಸಣ್ಣ

ಪುಟ್ಟ ಬಾಲಕಿಯ ಚಿಕಿತ್ಸೆಗಾಗಿ ವೇಷ ತೊಟ್ಟ ಶಟರ್ ಬಾಕ್ಸ್ ತಂಡ

ತುಳುನಾಡಿನ ಫೇಮಸ್ ಯ್ಯೂಟ್ಯೂಬರ್ ಸಚಿನ್ ಶೆಟ್ಟಿ ಕೈಗೊಂಡಿರುವ ಸಾಮಾಜಿಕ ಕೈಕಂರ್ಯಕ್ಕೆ ಎಲ್ಲೆಡೆಯಿಂದ ಭಾರೀ ಪ್ರಶಂಸೆಗಳು ಕೇಳಿ ಬರ್ತಾ ಇದೆ. ಹೆಬ್ರಿಯ ಕುಚ್ಚೂರು ಗ್ರಾಮದ ಸಾನ್ವಿ ಎನ್ನುವ ಪುಟ್ಟ ಬಾಲಕಿಗೆ ತಲಸೆಮಿಯಾ ಮೆಜರ್ ಎನ್ನುವ ರೋಗದ ಬಳಲುತ್ತಿದ್ದು ,ಇದಕ್ಕೆ ಬೋನ್ ಮ್ಯಾರೊವ್ ಎನ್ನುವ ಚಿಕಿತ್ಸೆಗಾಗಿ ನಲ್ವತ್ತು ಲಕ್ಷ ಹಣದ ಅವಶ್ಯಕತೆಯಿತ್ತು.ಇದನ್ನ ಅರಿತ ಸಚಿನ್ ಶೆಟ್ಟಿಯವರ ತಂಡ ಅಷ್ಟಮಿಯ ದಿನ ವೇಷ ಧರಿಸಿ ಧನ ಸಹಾಯಕ್ಕೆ ಮುಂದಾಗಿದ್ದರು.ಅಚ್ಚರಿಯ ಸಂಗತಿ