ಮಂಜೇಶ್ವರ :ರಾಷ್ಟೀಯ ಹೆದ್ದಾರಿ ಅಭಿವೃದ್ಧಿಯಲ್ಲಿ ಅವೈಜ್ಞಾನಿಕ ನಿರ್ಮಾಣ ಸೇರಿದಂತೆ ಪ್ರತಿಯೊಂದು ವಿಷಯದಲ್ಲೂ ಮಂಜೇಶ್ವರದ ಕೂಗಿಗೆ ಕಿಂಚತ್ತೂ ಬೆಲೆಯನ್ನು ಕಲ್ಪಿಸದ ಅಧಿಕಾರಿಗಳ, ಜನಪ್ರತಿನಿಧಿಗಳ ಕಣ್ಣು ಮುಚ್ಚಾಲೆಯಾಟದಿಂದ ಬೇಸೆತ್ತಿರುವ ಮಂಜೇಶ್ವರದ ಸಮಾನ ಮನಸ್ಕರು ಸೇರಿ ಕೊಂಡು ಹೊಸಂಗಡಿಯ ವ್ಯಾಪಾರಿ ಭವಣದಲ್ಲಿ ಮಂಜೇಶ್ವರ ನಾಗರಿಕ ಹಿತರಕ್ಷಣಾ ವೇದಿಕೆ ಎಂಬ
ಟೆಲಿ ಚಿತ್ರ ಆಲ್ಬಾಂ ಹಾಡುಗಳ ಮೂಲಕ ಜನಮನ್ನಣೆ ಪಡೆದ ಹರ್ಷಿತ್ ಸೋಮೇಶ್ವರ ಅವರು ಮತ್ತೊಂದು ಹೊಸ ಪ್ರಯೋಗಕ್ಕೆ ಸಜ್ಜಾಗಿದ್ದು, ಅವರ ನಿರ್ದೇಶನದಲ್ಲಿ ಪಯಣ ಎಂಬ ಕನ್ನಡ ಆಲ್ಬಾಂ ಸಾಂಗ್ ಇದೇ ಭಾನುವಾರ ಯೂಟ್ಯೂಬ್ ಚಾನೆಲ್‍ನಲ್ಲಿ ಬಿಡುಗಡೆಗೊಳ್ಳಲಿದೆ. ಕನ್ನಡ ಪ್ರಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ವಾಸುಕೀ ವೈಭವ್ ಅವರ ಕಂಠದಲ್ಲಿ ಈ ಹಾಡು ಮೂಡಿಬಂದಿದೆ. ಈ ಬಗ್ಗೆ ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಟೆಲಿ
75ನೇ ಸ್ವಾತಂತ್ರೋತ್ಸವದ ಅಂಗವಾಗಿ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಡೆದ ಕಾಲ್ನಡಿಗೆ ಜಾಥವನ್ನು ಎಐಸಿಸಿ ಕಾರ್ಯದರ್ಶಿ ಮಯೂರ್ ಜಯಕುಮಾರ್ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದ್ದಾರೆ. ಬಳಿಕ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷವು… ದೇಶ ಸ್ವಾತಂತ್ರ್ಯ ಪಡೆಯಲು ಬಹಳಷ್ಟು ತ್ಯಾಗ ಬಲಿದಾನಗಳನ್ನು ನಡೆಸಿದೆ. ಇದೀಗ ದೇಶ ಕಾಯುವೆ ಎಂಬವರು ನಾನಾ ಹೆಸರಲ್ಲಿ ಗುರುತಿಸಿಕೊಂಡು ಬ್ರಿಟಿಷರೊಂದಿಗೆ ಸೇರಿಕೊಂಡು ದೇಶಕ್ಕೆ ಮೋಸ ಮಾಡಿದವರಾಗಿದ್ದಾರೆ ಎಂದರು. ಮಾಜಿ ಸಚಿವ
ಸ್ವಾತಂತ್ರೋತ್ಸವ ಸಂದರ್ಭದಲ್ಲಿ ಸಾರ್ವಜನಿಕರು ಪ್ಲಾಸ್ಟಿಕ್ ಧ್ವಜವನ್ನು ಮಾರಾಟ ಮಾಡುವುದಾಗಲಿ, ಬಳಸುವುದಾಗಲಿ, ಬೇಕರಿಗಳಲ್ಲಿ ರಾಷ್ಟ್ರಧ್ವಜದ ಕೇಕ್ ತಯಾರಿಸುವುದಾಗಲಿ ಮಾಡಬಾರದು ಎಂದು ಇಲ್ಲಿಯ ಹಿಂದೂ ಜನಜಾಗೃತಿ ವೇದಿಕೆ ಹಾಗೂ ಸನಾತನ ಸಂಸ್ಥೆಯ ವತಿಯಿಂದ ಪುತ್ತೂರು ಸಹಾಯಕ ಆಯುಕ್ತರಿಗೆ ಮನವಿ ಮಾಡಲಾಯಿತು. ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿ75ನೇ ವರ್ಷದ ಸ್ವಾತಂತ್ರೋತ್ಸವ ಸಂದರ್ಭದಲ್ಲಿ ಪ್ಲಾಸ್ಟಿಕ್ ಧ್ವಜ ಮಾರಾಟ, ಬಳಕೆ ಮಾಡಿದ ಬಳಿಕ ಎಲ್ಲೆಂದರಲ್ಲಿ
ವರಲಕ್ಷ್ಮೀ ವ್ರತ ಎಂದು ಶ್ರಾವಣ ಮಾಸದಲ್ಲಿ ಲಕ್ಷ್ಮೀ ಪೂಜೆ ಮಾಡುತ್ತಾರೆ. ಸಂಸ್ಕೃತದಲ್ಲಿ ಒಂದು ಶಬ್ದದ ಮುಂದೆ ಬರುವ ಇನ್ನೊಂದು ಶಬ್ದದ ಆಧಾರದಲ್ಲಿ ಅರ್ಥ ಕಲ್ಪನೆಯಾಗುತ್ತದೆ. ವರ ಎಂಬ ಶಬ್ದಕ್ಕೆ ಅನೇಕ ಅರ್ಥಗಳಿವೆ. ವಧುವಿಗೆ ವರ, ವರದಾನ ಇತ್ಯಾದಿ ಶಬ್ದ ಪ್ರಯೋಗಗಳಲ್ಲಿ ವಿವಿಧ ಅರ್ಥ ಕಲ್ಪನೆ ಬರುತ್ತದೆ. ಇಲ್ಲಿ ವರ ಶಬ್ದದ ಅನಂತರ ಲಕ್ಷ್ಮೀ ಬಂದಿದ್ದಾಳೆ. ಅಂದರೆ ಹೇ ಲಕ್ಷ್ಮೀಯೇ ಸಂತೃಪ್ತಿಯನ್ನು ನೀಡು. ನೆಮ್ಮದಿಯನ್ನು ನೀಡು ಎಂಬುದಾಗಿದೆ. ಶ್ರೀಮನ್ನಾ ರಾಯಣನ
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಮುಟ್ಠಳ್ಳಿಯಲ್ಲಿ ಮಳೆಯಿಂದಾಗಿ ಅಪಾರ ಹಾನಿಗೊಳಗಾಗಿದ್ದು, ಸಿಎಂ ಬಸರವಾಜ್ ಬೊಮ್ಮಾಯಿ ಅವರು ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲಿಸಿದರು. ಮುಟ್ಠಳ್ಳಿಯಲ್ಲಿ ಮನೆಯ ಮೇಲೆ ಗುಡ್ಡ ಕುಸಿತವಾದ ಸ್ಥಳ ವೀಕ್ಷಣೆ ಮಾಡಿದರು. ನಿನ್ನೆ ದಿನ ಲಕ್ಷ್ಮಿ ನಾರಾಯಣ ನಾಯ್ಕ ರವರ ಮನೆಯಮೇಲೆ ಗುಡ್ಡ ಕುಸಿದು ಅನಂತನಾಯ್ಕ(,35), ಮಗಳು ಲಕ್ಷ್ಮಿ ನಾಯ್ಕ, (40) ಮೊಮ್ಮಗ ಪ್ರವೀಣ್ (16) ಒಟ್ಟು ನಾಲ್ಕು ಜನ ಭೂಸಮಾದಿಯಾಗಿದ್ದರು. ಮೃತ
ಪ್ರವೀಣ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ವಿಚಾರಣೆಯಲ್ಲಿ ಪೊಲೀಸ್ ಇಲಾಖೆ ತೊಡಗಿದೆ. ಈ ಮಧ್ಯೆ ಎಡಿಜಿಪಿ ಅಲೋಕ್ ಕುಮಾರ್ ಬೆಳ್ಳಾರೆ ಠಾಣೆಗೆ ಭೇಟಿ ನೀಡಿ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನಾವಣೆ, ಡಿವೈಎಸ್ಪಿ ಗಾನ ಪಿ. ಕುಮಾರ್, ಬೆಳ್ಳಾರೆ ಠಾಣಾ ಎಸ್.ಐ ಸುಹಾಸ್ ಅವರೊಂದಿಗೆ ತನಿಖೆಯ ಬಗ್ಗೆ ಮಾಹಿತಿ ಪಡೆದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಎಡಿಜಿಪಿ ಅಲೋಕ್ ಕುಮಾರ್ “ಮಸೂದ್ ಹಾಗೂ ಪ್ರವೀಣ್ ನೆಟ್ಟಾರು ಕುರಿತ ಪ್ರಕರಣದ ಪ್ರಗತಿ ಯಾವ
ದ.ಕ. ಜಿಲ್ಲೆಯಾದ್ಯಂತ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ಸಂಜೆ 6ರಿಂದ ಬೆಳಗ್ಗೆ 6ರವರೆಗಿನ ನಿರ್ಬಂಧವನ್ನು ಸಡಿಲಗೊಳಿಸಲಾಗಿದೆ. ಆಗಸ್ಟ್ 5ರ ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಮೂರು ದಿನಗಳ ಕಾಲ ಈ ನಿರ್ಬಂಧ ವಿಧಿಸಿ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶಿದ್ದಾರೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದಂತೆ ಈ ದಿನಗಳಲ್ಲಿ ರಾತ್ರಿ 9 ಗಂಟೆಯಿಂದ ಅಂಗಡಿ ಮುಂಗಟ್ಟುಗಳು ಮುಚ್ಚಲಿದೆ. ಆ. 5ರಿಂದ ಮದ್ಯದಂಗಡಿಗಳು ಸಂಜೆ 6
ವಿದ್ಯೆಯೂ ಕಲೆಯೂ ಜೊತೆ ಜೊತೆಯಾಗಿ ಸಾಗಲಿ. ಇಂದು ಅವಕಾಶಗಳ ಆಕಾಶವೇ ನಮ್ಮ ಮುಂದಿದೆ ಅದನ್ನು ಸದುಪಯೋಗಪಡಿಸಿಕೊಳ್ಳಬೇಕು’ಎಂಬುದಾಗಿ ರಂಗಭೂಮಿ ಕಲಾವಿದ,ಚಲನಚಿತ್ರ ನಟ ಶ್ರೀ ಪ್ರಕಾಶ್ ತೂಮಿನಾಡು ನುಡಿದರು.ಅವರು ಮಂಜೇಶ್ವರ ಉಪಜಿಲ್ಲಾಮಟ್ಟದ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ 2022-23ನೇ ಶೈಕ್ಷಣಿಕ ವರ್ಷದ ಕಾರ್ಯ ಚಟುವಟಿಕೆಗಳನ್ನು ಜಿ.ವಿ.ಎಚ್.ಎಸ್.ಎಸ್.ಕುಂಜತ್ತೂರು ಶಾಲೆಯಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು.ಶಾಲೆಯ ಹಳೆ ವಿದ್ಯಾರ್ಥಿಯೂ ಆಗಿರುವ




























