Home Posts tagged #v4news karnataka (Page 183)

ಕಾಡಮಲ್ಲಿಗೆ ಖ್ಯಾತಿಯ : ಬೆಳ್ಳಾರೆ ವಿಶ್ವನಾಥ ರೈ ಇನ್ನಿಲ್ಲ

ಬೆಳ್ಳಾರೆ ಸುಬ್ಬಯ್ಯ ರೈ ಮತ್ತು ಮಂಜಕ್ಕೆ ಇವರ ನಾಲ್ವರು ಮಕ್ಕಳಲ್ಲಿ ವಿಶ್ವನಾಥ ರೈ ಒಬ್ಬರು ಇವರು 28-2-1949 ರಲ್ಲಿ ಬೆಳ್ಳಾರೆಯಲ್ಲಿ ಜನಿಸಿದರು ಶಿಕ್ಷಣ 2 ನೇ ತರಗತಿ ಇಬ್ಬರು ಅಕ್ಕಂದಿರು ಒಬ್ಬಾಕೆ ತಂಗಿ. ಅಚ್ಚುತ ಮಣಿಯಾಣಿ ಯವರಿಂದ ಯಕ್ಷ ನಾಟ್ಯಾಭ್ಯಾಸ ಮಾಡಿ ತನ್ನ 9ನೇ ವರ್ಷ ಪ್ರಾಯದಲ್ಲಿ ರಂಗಪ್ರವೇಶ ಮಾಡಿದರು ರಾಜನ್ ಅಯ್ಯರ್ ಮತ್ತು ಕೇಶವ ಮಾಸ್ತರ್ ಅವರಿಂದ

ಸುಳ್ಯ ತಾಲೂಕಿನ ನಾಗೇಶ್ ಬೆಳ್ಳಾರೆ ಇವರಿಗೆ ಯುವ ರತ್ನ ಅಪ್ಪು ಪ್ರಶಸ್ತಿ

ದಿನಾಂಕ 25.6.2022. ಎ. ವಿ ವರದಚಾರ್ ಮೆಮೋರಿಯಲ್ ಹಾಲ್ ಮಲ್ಲೇಶ್ವರಂ ಬೆಂಗಳೂರು. ಕಲಾ ಸಂಗಮ ಬೆಂಗಳೂರು ಇವರು ಹಮ್ಮಿಕೊಂಡ ಕನ್ನಡ ರಾಜ ರತ್ನ ಸವಿ ನೆನಪಿಗಾಗಿ ಯುವ ರತ್ನ ಅಪ್ಪು ಗೀತಾ ಗಾಯನ, ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯ ವ್ಯಕ್ತಿಗಳು. ಡಾ. ಆಂಜನಪ್ಪ MBBS_MS, General surgery gastroenterologist, ಶಶಿಧರ್ ಕೋಟೆ ಚಲನಚಿತ್ರ ನಟರು ಮತ್ತು

ಬೈಂದೂರು: ಗಾಂಜಾ ಹಾಗೂ ಎಂಡಿಎಂಎ ಡ್ರಗ್ಸ್ ಸಹಿತ ಇಬ್ಬರ ಆರೋಪಿಗಳ ಬಂಧನ

ಬೈಂದೂರು: ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಕಾಯ್ಕಿಣಿ ಅವರಿಗೆ ಬಂದ ಖಚಿತ ಮಾಹಿತಿಯಂತೆ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ. ಅವರ ಉಪಸ್ಥಿತಿಯಲ್ಲಿ ಗಾಂಜಾ ಹಾಗೂ ಎಂಡಿಎಂಎ ಡ್ರಗ್ಸ್ ಸಹಿತ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾದ ಘಟನೆ ಬೈಂದೂರು ರಾಹುತನಕಟ್ಟೆ ಎಂಬಲ್ಲಿ ಮಂಗಳವಾರ ನಡೆದಿದೆ. ಭಟ್ಕಳ ನಿವಾಸಿ ಅಬ್ದುಲ್ ರೆಹಮಾನ್ (31), ಶಿರ್ವ ನಿವಾಸಿ ಅಬ್ದುಲ್ ಸಮದ್ (30) ಬಂಧಿತರಾಗಿದ್ದು, ಇವರಿಬ್ಬರು ಮಾದಕ ವಸ್ತುವನ್ನು ಸಲೀಮ್ ಮಂಚಿ ಎಂಬಾತನಿಂದ ಖರೀದಿಸಿ

ಗುರುಪುರ ಸಮೀಪದ ಅಣೆ ಬಳಿಯಲ್ಲಿ ಗುಡ್ಡ ಕುಸಿತ : ಲಘು ವಾಹನಗಳ ಸಂಚಾರಕ್ಕೆ ನಿರ್ಬಂಧ

ಕರಾವಳಿಯಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆಗೆ ಅಲ್ಲಲ್ಲಿ ಗುಡ್ಡ ಕುಸಿತ ಸೇರಿದಂತೆ ಅಪಾರ ಹಾನಿ ಸಂಭವಿಸಿದೆ. ಇನ್ನು ಗುರುಪುರ ಸಮೀಪದ ಅಣೆ ಬಳಿಯಲ್ಲಿ ಗುಡ್ಡ ಕುಸಿತಗೊಂಡಿದ್ದು, ರಸ್ತೆ ಅಪಾಯದಂಚಿನಲ್ಲಿದೆ. ಸ್ಥಳಕ್ಕೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ದೇರಳಕಟ್ಟೆಯ ಕಾನೆಕೆರೆ ಗುಡ್ಡ ಕುಸಿತ : ಹಾನಿಗೊಳಗಾದ ಪ್ರದೇಶಕ್ಕೆ ಶಾಸಕ ಯು.ಟಿ. ಖಾದರ್ ಭೇಟಿ

ಉಳ್ಳಾಲ: ಮಳೆಯಿಂದ ಹಾನಿಗೀಡಾದ ಬೆಳ್ಮ ಗ್ರಾ.ಪಂ ವ್ಯಾಪ್ತಿಯ ವಿವಿಧ ಪ್ರದೇಶಗಳಿಗೆ ಶಾಸಕ ಯು.ಟಿ ಖಾದರ್ ಭೇಟಿ ನೀಡಿ ತುರ್ತು ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದರು.ಬೋರುಗುಡ್ಡೆ ಎರಡು ಮನೆಗಳ ಮೇಲೆ ಗುಡ್ಡೆ ಜರಿತವಾಗಿ ಹಾನಿ, ರೆಂಜಾಡಿಯ ಪಾಲೆದಡಿ ಮಸೀದಿ ಬಳಿ ಹಾನಿ, ಕೊಳಕೆಬೈಲ್ ಗುಡ್ಡ ಜರಿತ ಹಾಗೂ ಕಾನಕೆರೆ ಬಳಿ ಪೆಟ್ರೋಲ್ ಪಂಪ್ ಹಿಂಭಾಗದ ಒಂದು ಭಾಗ ಜರಿತ ಉಂಟಾಗಿದೆ. ಇವೆಲ್ಲವನ್ನು ಸ್ಥಳೀಯ ಜನಪ್ರತಿನಿಧಿಗಳ ಜೊತೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಈ

ಕನ್ನಡಿಗ ಶ್ರೀನಿವಾಸ್ ಎನ್ ಕಾಂಚನ್ ಅವರಿಗೆ ರಾಷ್ಟ್ರೀಯ ನಿರ್ಮಾಣ ರತನ್ ಅವಾರ್ಡ್ ಫಾರ್ ಇಂಡಸ್ಟ್ರಿ ಡೆವಲಪ್ಮೆಂಟ್’ ಪ್ರಶಸ್ತಿ

ಅಖಿಲ ಭಾರತ ಉದ್ಯಮ ಅಭಿವೃದ್ಧಿ ಸಂಘವು ಮುಂಬೈ ಉದ್ಯಮಿ ಕನ್ನಡಿಗ ಶ್ರೀನಿವಾಸ್ ಎನ್ ಕಾಂಚನ್ ಅವರಿಗೆ ರಾಷ್ಟ್ರೀಯ ನಿರ್ಮಾಣ ರತನ್ ಅವಾರ್ಡ್ ಫಾರ್ ಇಂಡಸ್ಟ್ರಿ ಡೆವಲಪ್ಮೆಂಟ್’ ಎಂಬ ರಾಷ್ಟ್ರೀಯ ಪ್ರಶಸ್ತಿಯ ಗೌರವ ಪಡೆದರು. ಶ್ರೀನಿವಾಸ್ ಕಾಂಚನ್ ಅವರು ಹಿಂದುಳಿದ ಪ್ರದೇಶವಾದ ಮಹಾರಾಷ್ಟ್ರ ದ ನಾಸಿಕ್ ಗ್ರಾಮೀಣ ಪ್ರದೇಶದಲ್ಲಿ ಪಂಚಾವಟಿ ವಲ್ವೇಸ್ ಆಂಡ್ ಫ್ಲಾಲೆಂಗ್ಸ್ ಎಂಬ ಕಾರ್ಖಾನೆಯನ್ನು ಸ್ಥಾಪಿಸಿ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಹಾಗೂ ಸ್ಥಳೀಯರಿಗೆ

ವೆಸ್ಟ್ ಕೋಸ್ಟ್ ಮೋಟಾರ್ಸ್ ಹೀರೋ ಶೋರೂಂ : ಬೈಕ್ ಖರೀದಿಯ ಜೊತೆಗೆ ಆಕರ್ಷಕ ಬಹುಮಾನ

ಮಂಗಳೂರಿನ ಕಂಕನಾಡಿಯಲ್ಲಿರುವ ವೆಸ್ಟ್ ಕೋಸ್ಟ್ ಮೋಟಾರ್ಸ್‍ನ ಹೀರೋ ಶೋರೂಮ್ ನಲ್ಲಿ ಗ್ರಾಹಕರಿಗಾಗಿ ವಿಶೇಷ ಆಫರ್‍ಗಳನ್ನು ಘೋಷಿಸಿದ್ದಾರೆ. ದ್ವಿಚಕ್ರ ವಾಹನ ಸವಾರರಿಗೆ ಶುಭ ಸುದ್ದಿ… ನಗರದಲ್ಲಿರುವ ವೆಸ್ಟ್ ಕೋಸ್ಟ್ ಮೋಟಾರ್ಸ್ ಹೀರೋ ಶೋರೂಮ್ ಉತ್ತಮ ಗುಣಮಟ್ಟದ ದ್ವಿಚಕ್ರ ವಾಹನದ ಜೊತೆಗೆ ಗ್ರಾಹಕರನ್ನು ಸಂತ್ರಪ್ತಿಗೊಳಿಸಲು ಲಾಂಚಿಂಗ್ ಆಫರ್ ನ್ನು ನೀಡುತ್ತಿದ್ದಾರೆ. ಇನ್ನು ಜೊತೆಗೆ ಹೆಲ್ಮೆಟ್ ಆಗಿದೆ, ಟಿಶರ್ಟ್ ಟ್ರ್ಯಾಕ್ ಪ್ಯಾಂಟ್, ರೈನ್ ಕೋಟ್,

ಮೈಟ್ ಎಂಜಿನಿಯರಿಂಗ್ ಕಾಲೇಜಿನ ಆವರಣಗೋಡೆ ಕುಸಿದು ಬಿದ್ದು ಮೂರು ವಾಹನಗಳಿಗೆ ಹಾನಿ

ಮೂಡುಬಿದಿರೆ:ತಾಲ್ಲೂಕಿನ ವಿವಿದೆಡೆ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತೆಂಕಮಿಜಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮೈಟ್ ಎಂಜಿನಿಯರಿಂಗ್ ಕಾಲೇಜಿನ ಆವರಣಗೋಡೆ ಕುಸಿದು ಬಿದ್ದು ಮೂರು ವಾಹನಗಳಿಗೆ ಹಾನಿಯಾಗಿದೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರವೇಶ ನಡೆಯುತ್ತಿದ್ದು ಆವರಣಗೋಡೆಯ ಬದಿಯಲ್ಲಿ ಪೋಷಕರ ವಾಹನಗಳನ್ನು ನಿಲ್ಲಿಸಲಾಗಿತ್ತು. ನಿರಂತರ ಮಳೆಯಿಂದಾಗಿ ಸುಮಾರು 20 ಅಡಿ ಎತ್ತರದಲ್ಲಿದ್ದ ಆವರಣಗೋಡೆ ಕುಸಿದು ಹತ್ತಿರದಲ್ಲಿದ್ದ ಮೂರು

ಮರವಂತೆ ಕಡಲ್ಕೊರೆತ ಪ್ರದೇಶಕ್ಕೆ ಕೆ. ಗೋಪಾಲ ಪೂಜಾರಿ ಭೇಟಿ : ತಡೆಗೋಡೆಗೆ ಬೇಕಾದ ಅಗತ್ಯ ಕ್ರಮ ವಹಿಸಲು ಮನವಿ

ಕುಂದಾಪುರ: ಕಾಲಿನ ಶಸ್ತೃಚಿಕಿತ್ಸೆಗೊಳಗಾಗಿ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದರೂ ಊರುಗೋಲಿನ ಸಹಾಯದಿಂದ ಮರವಂತೆ ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿದ ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅವರು ಸ್ಥಳೀಯ ನಿವಾಸಿಗಳಿಗೆ ಧೈರ್ಯ ತುಂಬಿದರು.ಪಕ್ಷದ ಮುಖಂಡರೊಂದಿಗೆ ಕಡಲ್ಕೊರೆತ ಪ್ರದೇಶ ಮರವಂತೆಗೆ ಭೇಟಿ ನೀಡಿದ ಅವರು, ಸ್ಥಳೀಯ ನಿವಾಸಿಗಳೊಂದಿಗೆ ಮಾತುಕತೆ ನಡೆಸಿದರು. ಈ ವೇಳೆಯಲ್ಲಿ ಮಾತನಾಡಿದ ಸ್ಥಳೀಯರು ಕಳೆದ ಹನ್ನೆರಡು ದಿನಗಳಿಗೂ ಅಧಿಕ

ಕಡಬದಲ್ಲಿ ದಾರಿ ತಕರಾರು ಪರಿಶೀಲಿಸಿದ ಜಿಲ್ಲಾಧಿಕಾರಿ

ಕಡಬದಲ್ಲಿ ಜರಗಿದ ಡಿಸಿ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ ವಿ 45ಕ್ಕೂ ಹೆಚ್ಚು ಅರ್ಜಿಗಳನ್ನು ಪರಿಶೀಲಿಸಿದರು. ದಾರಿ ತಕರಾರುಗಳ ಅರ್ಜಿಗಳನ್ನು ಪರಿಶೀಲಿಸಿದ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವಂತೆ ಸಂಬಂಧಪಟ್ಟ ಪಿಡಿಓಗಳು ಹಾಗೂ ಕಂದಾಯ ಅಧಿಕಾರಿಗಳಿಗೆ ಆದೇಶಿಸಿದರು. 11 ಇ ಅರ್ಜಿಗಳ ವಿಲೇವಾರಿಗೆ ವೇಗ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದವರು ಆ