ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ ಶೇ.80ರಷ್ಟು ಮಂದಿಗೆ ಲಸಿಕೆ ಹಾಕಿಸಲಾಗಿದೆ. ಆದರೆ ಬಾಕಿ ಉಳಿದವರಿಗೆ ಲಸಿಕೆ ಹಾಕಿಸುವುದು ತುಂಬಾ ಸವಾಲಿನ ಕೆಲಸ ಆಗಲಿದೆ. ಅದಕ್ಕಾಗಿ ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಂಡು ಇಂದಿನ ಲಸಿಕಾ ಅಭಿಯಾನವನ್ನು ಮಾಡುತ್ತಿದ್ದೇವೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ. ದಕ್ಷಿಣ ಕನ್ನಡ
ಮಹಿಳೆಯ ಮೇಲೆ ನಡೆಯುತ್ತಿರುವ ಅತ್ಯಾಚಾರ ಹಾಗೂ ಅಮಾನುಷವಾಗಿ ಹತ್ಯೆ ಮಾಡಿದ ಪ್ರಕರಣವನ್ನು ಖಂಡಿಸಿ ಮೂಡಬಿದ್ರೆಯಲ್ಲಿ ಎಸ್‌ಡಿಪಿಐ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಮಾತನಾಡಿದ ಎಸ್‌ಡಿಪಿಐ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಆಸಿಫ್ ಕೋಟೆಬಾಗಿಲು,ಅತ್ಯಾಚಾರ ಪ್ರಕರಣಗಳ ತನಿಖೆಯನ್ನು ಶೀಘ್ರ ಮುಕ್ತಾಯಗೊಳಿಸಿ ಆರೋಪಿಗಳಿಗೆ ಮರಣದಂಡನೆ ವಿಧಿಸುವ ಹೊಸ ಕಾನೂನನ್ನು ಜಾರಿಗೆ ತರಬೇಕೆಂದು ಆಗ್ರಹಿಸಿದ್ರು. ಹೋರಾಟಗಾರ ಅಚ್ಯುತ ಸಂಪಿಗೆ
ಶೈಕ್ಷಣಿಕ ಮತ್ತು ಮೆಡಿಕಲ್ ಹಬ್ ಎಂದೇ ಗುರುತಿಸಲ್ಪಟ್ಟಿರುವ ಕುತ್ತಾರ್-ದೇರಳಕಟ್ಟೆ ಪರಿಸರದ ಪ್ರಮುಖ ರಸ್ತೆಯ ಬದಿ ಅಂದರೆ ಮದನಿ ನಗರದ ಮೂರನೆ ಅಡ್ಡರಸ್ತೆಯ ಬಳಿ ರಾಶಿ ಹಾಕಲಾಗಿದ್ದ ತ್ಯಾಜ್ಯ ವಸ್ತುವನ್ನು ಮುನ್ನೂರು ಗ್ರಾಮದ 5ನೆ ವಾರ್ಡಿನ ಸದಸ್ಯೆ ರೆಹನಾ ಭಾನು ತಡರಾತ್ರಿಯವರೆಗೂ ಸ್ವತಃ ನಿಂತು ತೆರವುಗೊಳಿಸುವ ಮೂಲಕ ಗಮನ ಸೆಳೆದಿದ್ದಾರೆ. ಕಳೆದೊಂದು ವಾರದಿಂದ ತ್ಯಾಜ್ಯ ವಸ್ತುಗಳು ರಾಶಿ ಬೀಳುತ್ತಿತ್ತು. ಇದರಿಂದ ಪರಿಸರ ಗಬ್ಬೆದ್ದು ನಾರುತ್ತಿತ್ತಲ್ಲದೆ
ಪುತ್ತೂರು: ಶುಕ್ರವಾರ ಪುತ್ತೂರು ಹಾಗೂ ಕಡಬ ತಾಲೂಕಿನ ಸುಮಾರು 76 ಕಡೆಗಳಲ್ಲಿ ಲಸಿಕೆ ಅಭಿಯಾನ ನಡೆಯಲಿದ್ದು, ನಗರಸಭೆ ವ್ಯಾಪ್ತಿಯೊಳಗೆ ಆರು ಕಡೆ ನಡೆಯಲಿದೆ. ಈ ಮೂಲಕ ನಗರಸಭಾ ವ್ಯಾಪ್ತಿಯನ್ನು ಲಸಿಕೆ ಮುಕ್ತ ನಗರ ಮಾಡುವ ನಿಟ್ಟಿನಲ್ಲಿ ಈ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ಲಸಿಕೆ ಪಡೆಯದ ಎಲ್ಲಾ ಸಾರ್ವಜನಿಕರು ಲಸಿಕೆ ಪಡೆದು ಸಹಕರಿಸುವಂತೆ ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ತಿಳಿಸಿದ್ದಾರೆ. ದ.ಕ.ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಕೋವಿಡ್ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿ, ಶಾಲೆ ಕಾಲೇಜುಗಳು ಸಹಿತ ಎಲ್ಲವೂ ಸಹಜ ಸ್ಥಿತಿಗೆ ಬಂದಿದ್ದರೂ ಜಿಲ್ಲೆಯಲ್ಲಿ ಸಿನಿಮಾ ಮಂದಿರಗಳನ್ನು ಪೂರ್ಣ ಪ್ರಮಾಣದಲ್ಲಿ ತೆರೆಯಲು ಅವಕಾಶ ನೀಡದಿರುವುದು ಹಾಗೂ ನಾಟಕ ತಂಡಗಳಿಗೆ ಪ್ರದರ್ಶನಕ್ಕೆ ಅವಕಾಶ ಮಾಡಿ ಕೊಡದಿರುವುದರಿಂದ ಕಲಾವಿದರ ಪರಿಸ್ಥಿತಿ ಹದಗೆಟ್ಟಿದೆ. ನಾಟಕ, ಸಿನಿಮಾದಿಂದಲೇ ಜೀವನ ಸಾಗಿಸುವ ಕಲಾವಿದರ ಸ್ಥಿತಿ ತುಂಬಾ ಕಠಿಣವಾಗಿದೆ. ಹೀಗಾಗಿ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ರಾಜ್ಯದ ಮುಖ್ಯಮಂತ್ರಿಯವರಿಗೆ
ಹೆದ್ದಾರಿ ಸೂಚನಾ ಫಲಕಗಳಿಗೆ ಅನದಿಕೃತವಾಗಿ ಕಟೌಟ್ ನಿರ್ಮಾಣ ಗುತ್ತಿಗೆ ಪಡೆದ ಮಂದಿ ಅಳವಡಿಸಿದ ಕಟೌಟ್ ಗಳ ಬಗ್ಗೆ ಹೆದ್ದಾರಿ ಸಂಚಾರಿಗಳಿಗೆ ಆಗುತ್ತಿರುವ ಸಮಸ್ಯೆಗಳ ಸವಿಸ್ತಾರವಾಗಿ ವಿ4 ನ್ಯೂಸ್ ವರದಿ ಪ್ರಕಟಿಸಿದ್ದು, ಈ ವರದಿಗೆ ಸ್ಪಂದನೆ ನೀಡಿದ ಹೆದ್ದಾರಿ ಇಲಾಖೆ ಹೆಜಮಾಡಿ ಟೋಲ್ ಪ್ಲಾಜಾ ಸಿಬ್ಬಂದಿಗಳ ಮೂಲಕ ಕಟೌಟ್ ತೆರವು ಕಾರ್ಯ ನಡೆದಿದೆ. ಕಟೌಟ್ ಅಳವಡಿಸಲು ಯಾವುದೇ ಸಂಸ್ಥೆಗಳು ಗುತ್ತಿಗೆ ನೀಡಿದ್ದಲ್ಲಿ ಕಂಬ ಅಳವಡಿಸುವ ಕಷ್ಟ ತಪ್ಪಿಸಲು ಹೆದ್ದಾರಿ ಪಕ್ಕದ
ಹಾವೇರಿ ಜಿಲ್ಲೆಯ ಹಲ್ಲೂರು ಗ್ರಾಮದ 23 ವರ್ಷದ ಯುವತಿ ಕವನ ಎಂಬವರು ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ಬಳಿ ರಸ್ತೆ ಅಪಘಾತಕ್ಕೀಡಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸೆ.12ರಂದು ಮಧ್ಯಾಹ್ನ ನಗರದ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತಲೆಗೆ ಗಂಭೀರ ಗಾಯದಿಂದ ಅವರ ಮಿದುಳು ನಿಷ್ಕ್ರೀಯಗೊಂಡಿತ್ತು. ಇದನ್ನು ತಿಳಿದ ಕವನಳ ಸಹೋದರಿ ಅಂಗಾಂಗ ದಾನಕ್ಕೆ ಮುಂದಾದರು. ಈ ಮಾಹಿತಿಯನ್ನು ಆಸ್ಪತ್ರೆಯಿಂದ ಜೀವನ ಸಾರ್ಥಕತೆ ಕರ್ನಾಟಕ ಸರ್ಕಾರದಿಂದ ಸ್ಥಾಪಿತವಾದ
ಪುರಾತನವಾದ ದೇವಸ್ಥಾನಗಳನ್ನು ಹೊತ್ತುಗೊತ್ತು ಇಲ್ಲದ ವೇಳೆಯಲ್ಲಿ ತುಘಲಕ್ ನೀತಿಯಂತೆ ಅಕ್ರಮವಾಗಿ ತೆರವು ಗೊಳಿಸಿವುದನ್ನು ವಿಶ್ವ ಹಿಂದೂ ಪರಿಷತ್ ತೀವ್ರವಾಗಿ ಖಂಡಿಸುತ್ತದೆ ಎಂದು ವಿಶ್ವ ಹಿಂದೂ ಪರಿಷತ್ ಬಜರಂಗದಳದ ಪ್ರಾಂತ ಕಾರ್ಯಾಧ್ಯಕ್ಷರಾದ ಎಂ.ಬಿ. ಪುರಾಣಿಕ್ ಹೇಳಿದರು. ಅವರು ರಾಜ್ಯದಲ್ಲಿ ಪುರಾತನ ದೇವಸ್ಥಾನ ತೆರವುಗೊಳಿಸುವ ಸರ್ಕಾರದ ನಿರ್ಧಾರವನ್ನು ಖಂಡಿಸಿ ನಗರದ ಕದ್ರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು. ಜಿಲ್ಲಾಡಳಿತ ಸುಪ್ರೀಂ ಕೋರ್ಟ್‍ನ
ಕುಂದಾಪುರ: ಅನಾರೋಗ್ಯ ಪೀಡಿತ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಆಂಬುಲೆನ್ಸ್ ನ ಟಯರ್ ಸ್ಪೋಟಗೊಂಡ ಪರಿಣಾಮ ಆಂಬುಲೆನ್ಸ್ ರಸ್ತೆ ವಿಭಾಜಕವೇರಿ ಆವರಣಗೋಡೆಗೆ ಢಿಕ್ಕಿ ಹೊಡೆದ ಘಟನೆ ಬ್ರಹ್ಮಾವರ ತಾಲೂಕಿನ ಮಾಬುಕಳ ಸೇತುವೆಯಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದೆ. ಉತ್ತರಕನ್ನಡ ಮೂಲದ ಅನಾರೋಗ್ಯಪೀಡಿತ ಮಗುವನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲು ತೆರಳುತ್ತಿದ್ದ ಆಂಬುಲೆನ್ಸ್‌ನ ಟಯರ್ ಏಕಾಏಕಿ ಸ್ಪೋಟಗೊಂಡಿದ್ದು ಚಾಲಕನ ನಿಯಂತ್ರಣ ತಪ್ಪಿ
ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸುವ ಕುರಿತು ಉಂಟಾಗಿರುವ ಗೊಂದಲಗಳ ಬಗ್ಗೆ ಮುಖ್ಯಮಂತ್ರಿ ಶ್ರೀ ಬಸವರಾಜು ಬೊಮ್ಮಾಯಿ ಅವರೊಂದಿಗೆ ಈಗಾಗಲೇ ಚರ್ಚಿಸಿದ್ದೇನೆ. ಕರಾವಳಿ ಭಾಗದಲ್ಲಿರುವ ದೇವಸ್ಥಾನ, ದೈವಸ್ಥಾನಗಳು ಪೌರಾಣಿಕ ಹಿನ್ನೆಲೆಗಳಿರುವ ಮತ್ತು ಅತ್ಯಂತ ಪುರಾತನವಾಗಿರುವುದೇ ಆಗಿದೆ. ಹಾಗಾಗಿ ಯಾವುದೇ ಧಾರ್ಮಿಕ ಕೇಂದ್ರಗಳಿಗೂ ಇಲ್ಲಿ ಹಾನಿಯಾಗುವುದಿಲ್ಲ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಭರವಸೆ ನೀಡಿದ್ದಾರೆ. ಭಾರತೀಯ ಜನತಾ ಪಾರ್ಟಿಯು


















