Home Posts tagged #v4news karnataka (Page 30)

ನಿಮ್ಮ ಆಶೆಯೇ ನನ್ನ ಆಶೆ- ಕ್ಷೇತ್ರದ ಜನತೆಗೆ ಕೋಟ್ಯಾನ್‌ ಅಭಯ

ಮೂಡುಬಿದಿರೆ: ಕ್ಷೇತ್ರದ ಜನತೆಯ ಮನದಲ್ಲಿರುವ ಆಶೆಯೇ ನನ್ನ ಆಶೆಯೂ ಆಗಿದೆ. ನಿಮ್ಮ ತಲೆಯಲ್ಲಿ ಏನೆಲ್ಲ ಯೋಚನೆಗಳಿವೆಯೋ ಅವೆಲ್ಲವೂ ನನ್ನ ಯೋಚನೆಯೂ ಆಗಿದೆ. ಸರ್ವಾಂಗೀಣ ರೀತಿಯಲ್ಲಿ ಮೂಡಬಿದರೆ ವಿಧಾನ ಸಭಾ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವುದಷ್ಟೇ ನನ್ನ ಗುರಿಯಾಗಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್‌ ಹೇಳಿದರು. ಮೂಡುಬಿದರೆ ಕನ್ನಡ ಭವನದಲ್ಲಿ ನಡೆದ ಮುಲ್ಕಿ

ಕಾರ್ಕಳ ಶ್ರೀ ಮಾರಿಯಮ್ಮ ದೇವಿಯ ಪುನರ್ ಪ್ರತಿಷ್ಠಾ ಮಹೋತ್ಸವ

ಕಾರ್ಕಳ, ಶ್ರೀ ಮಾರಿಯಮ್ಮ ದೇವಿಯ ಪುನರ್ ಪ್ರತಿಷ್ಠಾ ಮಹೋತ್ಸವ ನಡೆಯುತ್ತಿದ್ದು, ಶ್ರೀ ಮುಖ್ಯ ಪ್ರಾಣ ದೇವರ ಅಷ್ಟಬಂಧ ಸಹಿತ ಪ್ರತಿಷ್ಠೆ ,ಪ್ರತಿಷ್ಠಾ ಕಲಶಾಭಿಷೇಕ , ಪ್ರಸನ್ನ ಪೂಜೆ,108 ಕಲಶ ಸಹಿತ ಬ್ರಹ್ಮ ಕುಂಭಾಭಿಷೇಕ , ಪ್ರಸನ್ನ ಪೂಜೆ, ನ್ಯಾಸ ಪೂಜೆ,ಚಂಡಿಕಾ ಯಾಗ, ಮಾರಿಯಮ್ಮ ಮತ್ತು ಉಚ್ಚಂಗಿ ಮಾರಿಯಮ್ಮ ನ ಬಿಂಬ ಶುದ್ದಿ ಪ್ರಕ್ರಿಯೆ, ಬಿಂಬ ಶುದ್ದಿ ಹೋಮ ಗಳು ಮನ್ಯುಸುಕ್ತ ಯಾಗ, ಕಾಳಿ ಗಾಯತ್ರಿ ಮಂತ್ರ ಹೋಮ, ಮದ್ಯಾಹ್ನ ಅನ್ನ ಸಂತರ್ಪಣೆ ಶ್ರೀ ಮಾರಿಯಮ್ಮ

ಉಡುಪಿ ನಗರದೊಳಗೆ ಸಂಚರಿಸುವ ಆಟೋ ಚಾಲಕರ ಸಮಸ್ಯೆ ಬಗೆ ಹರಿಸದಿದ್ದರೆ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಉಡುಪಿ ಶಾಸಕ ರಘುಪತಿ ಭಟ್ ವಿರುದ್ದ ಅಟೋ ಚಾಲಕರು ತಿರುಗಿ ಬಿದ್ದಿದ್ದಾರೆ. ನಗರದ ಒಳಗಡೆ ಓಡಾಡುವ ಅಟೋಚಾಲಕರ ಮಧ್ಯೆ ಬಿರುಕು ಮೂಡಿಸಿ, ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎನ್ನುವ ಅರೋಪಗಳನ್ನು ಅಟೋ ಚಾಲಕರು ಮಾಡಿದ್ದಾರೆ.ಅಷ್ಟೇ ಅಲ್ಲ ನಗರದೊಳಗಡೆ ಸಂಚರಿಸುವ ಅಟೋ ಚಾಲಕರ ಸಮಸ್ಯೆಗಳನ್ನು ಬಗೆ ಹರಿಸದಿದ್ದಲ್ಲಿ ಚುನಾವಣಾ ಬಹಿಷ್ಕಾರದ ಎಚ್ಚರಿಕೆಯನ್ನು ಕೂಡ ಅಟೊ ಚಾಲಕರು ನೀಡಿದ್ದಾರೆ. ನಿಯಮದಂತೆ ನಗರದಲ್ಲಿ ಸಂಚರಿಸುವ ಅಟೋಗಳು ರೋಟೆಶನ್ ಮಾದರಿಯಲ್ಲಿ

ಕುಡ್ಲ ಕಬಡ್ಡಿ-2023″ ಉದ್ಘಾಟನಾ ಸಮಾರಂಭ

ಸುರತ್ಕಲ್: ವರುಣ್ ಶೇಣವ ಅವರ ನೇತೃತ್ವದಲ್ಲಿ ನಡೆದ ಸೇವಾಶಿಖರ್ ಫೌಂಡೇಶನ್ ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಹಾಗೂ ಮಂಗಳೂರು ತಾಲೂಕು ಕಬಡ್ಡಿ ಅಸೋಸಿಯೇಷನ್ ಇದರ ಸಹಯೋಗದಲ್ಲಿ “ಕುಡ್ಲ ಕಬಡ್ಡಿ-2023” ಇದರ ಉದ್ಘಾಟನಾ ಸಮಾರಂಭ ಆದಿತ್ಯವಾರ ಬೆಳಗ್ಗೆ ಪಣಂಬೂರಿನ ಎನ್ಎಂಪಿಎ ಮೈದಾನದಲ್ಲಿ ಜರುಗಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಬಂಟರ ಯಾನೆ ನಾಡವರ ಮಾತ್ರ ಸಂಘದ ಅಧ್ಯಕ್ಷರಾದ ಅಜಿತ್ ಕುಮಾರ್

ಬಾಲಕಿ ಸಾವಿನ ಬೆನ್ನಲ್ಲೆ ಹೆದ್ದಾರಿ ದುರಾವಸ್ಥೆಗೆ ಮತ್ತೊಂದು ಬಲಿ

ಕಾಪುವಿನಲ್ಲಿ ಹೆದ್ದಾರಿ ದುರವಸ್ಥೆಗೆ ಬಾಲಕಿ ಬಲಿಯಾದ ಸ್ಥಳದಲ್ಲೇ ಮತ್ತೊರ್ವ ಯುವಕ ಬಲಿಯಾಗುವ ಮೂಲಕ ಹೆದ್ದಾರಿ ಪ್ರಯಾಣ ಕಠಿಣವಾಗುತ್ತಿದೆ.ಬಾಲಕಿ ಸಾವಿನ ಕಹಿ ನೆನಪು ಮಾಸುವ ಮೊದಲೇ ಅದೇ ಸ್ಥಳದಲ್ಲಿ ಆಂಬುಲೆನ್ಸ್ ಇನೋವ ಕಾರು ಬೈಕ್ ಸವಾರನಿಗೆ ಡಿಕ್ಕಿಯಾಗುವ ಮೂಲಕ ಯುವಕ ದಾರುಣಾವಾಗಿ ಮೃತಪಟ್ಟಿದ್ದಾನೆ. ಮೃತ ಯುವಕ ಉಚ್ಚಿಲ ನಿವಾಸಿ ರೀತೇಶ್ ದೇವಾಡಿಗ(25) ಈತ ವಾದ್ಯ ನುಡಿಸುವ ಕಾಯಕವನ್ನು ನಡೆಸುತ್ತಿದ್ದ ಎನ್ನಲಾಗಿದ್ದು, ಈತ ಉಡುಪಿ ಕಡೆಗೆ ಹೆದ್ದಾರಿ ಮೂಲಕ

ಸಾಹಿತ್ಯ ಅಕಾಡೆಮಿ ದೆಹಲಿ ಕೊಂಕಣಿ ಭಾಷಾ ಮುಖ್ಯಸ್ಥರಾಗಿ ಮಂಗಳೂರು ಮೂಲದ ಕವಿ ಮೆಲ್ವಿನ್ ರೊಡ್ರಿಗಸ್ ಆಯ್ಕೆ

ಕೊಂಕಣಿ ಕವಿ, ಕಾರ್ಯಕರ್ತ ಹಾಗು ಕೊಂಕಣಿ ಕಾವ್ಯದ ಅಭಿವೃದ್ದಿಗಾಗಿ ಶ್ರಮಿಸುತ್ತಿರುವ ಕವಿತಾ ಟ್ರಸ್ಟ್ ಇದರ ಸ್ಥಾಪಕ ಕರಾವಳಿ ಮೂಲದ ಕವಿ ಮೆಲ್ವಿನ್ ರೊಡ್ರಿಗಸ್ ಸಾಹಿತ್ಯ ಅಕಾಡೆಮಿ, ದೆಹಲಿಯಲ್ಲಿ ಕೊಂಕಣಿ ಭಾಷೆಯ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ. ಇಂದು ದಿನಾಂಕ 11 ಮಾರ್ಚ್ 2023 ರಂದು, ಸಂವಿಧಾನದ ಎಂಟನೆ ಪರಿಚ್ಚೇದದಲ್ಲಿ ಮಾನ್ಯತೆ ಪಡೆದಿರುವ ಭಾರತದ ಎಲ್ಲಾ ಭಾಷೆಗಳ ಸುಮಾರು 99 ಪ್ರತಿನಿಧಿಗಳು ಭಾಗವಹಿಸಿದ್ದ ಸಾಹಿತ್ಯ ಅಕಾಡೆಮಿ ಜನರಲ್ ಕಾವ್ನ್‌ಸಿಲ್

ಮೀನುಗಾರಿಕಾ ಇಲಾಖೆಯಿಂದ 5 ಸಾವಿರ ಮೀನು ಮರಿಗಳ ವಿತರಣೆ

ಸುಳ್ಯ. ಮೀನುಗಾರಿಕೆ ಇಲಾಖೆಯ ವತಿಯಿಂದ 5 ಸಾವಿರ ಮೀನು ಮರಿಗಳ ವಿತರಣೆ ಕಾರ್ಯಕ್ರಮ ನಡೆಯಿತು. ಸಚಿವ ಎಸ್. ಅಂಗಾರ ಅವರು ಸುಮಾರು 80 ಫಲಾನುಭವಿಗಳಿಗೆ ಉಚಿತವಾಗಿ ಮೀನುಗಾರಿಕೆ ಇಲಾಖೆಯಿಂದ ಮೀನು ಮರಿಗಳನ್ನು ವಿತರಿಸಿ ಮತನಾಡಿದರು. ಈ ಸಂದರ್ಭದಲ್ಲಿ ಮೀನುಗಾರಿಕಾ ನಿಗಮದ ಅಧ್ಯಕ್ಷರಾದ ಎ ವಿ ತೀರ್ಥರಾಮ , ಬಿಜೆಪಿ ಮಂಡಲ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ , ರಾಧಾಕೃಷ್ಣ ಬೋಳ್ಳೂರ್, ಹಾಗೂ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಜುಳಾ ಶ್ರೀ ಶೆಣೈ, ಮೀನುಗಾರಿಕಾ

ನೀರ್ಕೆರೆಯಲ್ಲಿ ಕುಡುಬಿ ಜನಾಂಗದಿಂದ ಹೋಳಿ ಉತ್ಸವ

ಮೂಡುಬಿದಿರೆ ತಾಲೂಕಿನ ರಾಧಾಕೃಷ್ಣ ಭಜನಾ ಮಂದಿರ ನೀರ್ಕೆರೆ ಪೂಮಾವಾರದಲ್ಲಿ ರಾತ್ರಿ ಹೋಳಿ ಉತ್ಸವ ನಡೆಯಿತು.ಹೋಳಿ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ ಆಗಮಿಸಿ ಪ್ರಸಾದ ಸ್ವೀಕರಿಸಿದರು. ಕರಾವಳಿಯಲ್ಲಿ ಕೃಷಿಯನ್ನೇ ತಮ್ಮ ಬದುಕನ್ನಾಗಿಸಿ, ಮೂಲತಃ ಗೋವಾ ವಲಸಿಗರಾಗಿರುವ ಕೊಂಕಣಿ ಭಾಷೆಕ ಕುಡುಬಿ ಸಮುದಾಯಕ್ಕೆ ಹೋಳಿ ಹಬ್ಬವು ಶಿವರಾತ್ರಿಯಿಂದ ಯುಗಾದಿಯವರೆಗೆ ತಮ್ಮ ತಮ್ಮ ಕೂಡುಕಟ್ಟುಗಳಲ್ಲಿ ಆಚರಿಸುವ ಒಂದು ವಿಶಿಷ್ಟ ಸಂಪ್ರದಾಯ ಸಂಸ್ಕೃತಿಯ

ರಸ್ತೆ ದಾಟಲು ನಿಂತಿದ್ದ ಬಾಲಕಿ ಮೇಲೆ ಹರಿದ ಖಾಸಗಿ ಬಸ್ – ಬಾಲಕಿ ಮೃತ್ಯು

ಬಹಳಷ್ಟು ಅಮಾಯಕರ ಬಲಿ ಪಡೆದ ರಾಷ್ಟ್ರೀಯ ಹೆದ್ದಾರಿ ಇದೀಗ ರಸ್ತೆ ದಾಟಲು ನಿಂತಿದ್ದ, ಬಾಲಕಿ ಮೇಲೆ ತಡೆರಹಿತ ಖಾಸಗಿ ಬಸ್ ಹರಿದು ಮೃತಪಟ್ಟ ಘಟನೆ ನಡೆದಿದೆ. ಸ್ಥಳೀಯ ದಂಢತೀರ್ಥ ಶಾಲಾ ಎಂಟನೇ ತರಗತಿ ಬಾಲಕಿ ವರ್ಷೀತಾ ಶೇರ್ವೇಗಾರ್(13) ಎಂಬಾಕೆ ಮೃತಪಟ್ಟ ಬಾಲಕಿ. ಗಂಭೀರ ಗಾಯಗೊಂಡ ಬಾಲಕಿಯನ್ನು ಉಡುಪಿ ಆಸ್ಪತ್ರೆಗೆ ಸಾಗಿಸಿದರೂ ಫಲಕಾರಿಯಾಗದೆ ಬಾಲಕಿ ಮೃತ ಪಟ್ಟಿದ್ದಾಳೆ. ರಾಷ್ಟ್ರೀಯ ಹೆದ್ದಾರಿ ಅಗೆದು ಹಾಕಿ ನಿರ್ಲಕ್ಷ್ಯದಿಂದ ಆಮೆಗತಿಯ ಕಾಮಗಾರಿ ನಡೆಸುತ್ತಿದ್ದರಿಂದ

ಸ್ಕೇಟಿಂಗ್ ಚಾಂಪಿಯನ್ ಆರ್ನಾ ರಾಜೇಶ್ ಗೆ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ

ಮಂಗಳೂರು:ಕಿರಿಯ ವಯಸ್ಸಿನಲ್ಲೇ ಸ್ಕೇಟಿಂಗ್ ಕ್ರೀಡೆಯಲ್ಲಿ ಅಸಾಧಾರಣ ಸಾಧನೆ ಮಾಡಿದ ಕುಮಾರಿ‌ ಆರ್ನಾ ರಾಜೇಶ್ ಗೆ ಈ ವರ್ಷದ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ಕರ್ನಾಟಕ ರಾಜ್ಯ ಮಹಿಳಾ ಆಯೋಗ ಬೆಂಗಳೂರು,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದಕ್ಷಿಣ ಕನ್ನಡ ಇದರ ವತಿಯಿಂದ 2023 ರ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಜಿಲ್ಲಾ ಮಟ್ಟದ ಮಕ್ಕಳ ಅಸಾಧಾರಣ ಪ್ರತಿಭೆ ಪ್ರಶಸ್ತಿಯನ್ನು