ಮಂಗಳೂರು: ಪ್ರತಿಷ್ಠಿತ ದೀಪಾ ಕಂಫರ್ಟ್ ಮಾಲಕಿ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಉಪಾಧ್ಯಕ್ಷರಾದ ಊರ್ಮಿಳಾ ರಮೇಶ್ ಅವರ ಮಾತೃಶ್ರೀ ರಾಧಾ ಡಿ. ಅಮೀನ್(93) ಗುರುವಾರ ಮಂಗಳೂರು ಗಾಂಧಿನಗರದ ನಿವಾಸದಲ್ಲಿ ನಿಧನರಾದರು. ಅವರು ಪುತ್ರ, ಪುತ್ರಿ ಸೇರಿ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ವಿಧಿ ಗಾಂಧಿನಗರದ ನಿವಾಸದಲ್ಲಿ ಇಂದು ಸಂಜೆ
ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಪಡಿತರ ವರ್ತಕರು ಮಂಜೇಶ್ವರಂ ತಾಲೂಕು ಕಚೇರಿಯಲ್ಲಿ ಧರಣಿ ನಡೆಸಿದರು.ಇ-ಪೆÇೀಸ್ ಮಿಷನ್ ಸರಿಯಾಗಿ ಕೆಲಸ ಮಾಡಲು ವ್ಯವಸ್ಥೆ ಕಲ್ಪಿಸಬೇಕು, ಪಡಿತರ ವರ್ತಕರು ಇ- ಪೋಸ್ ಮಿಷನ್ ಗೆ ಅಡ್ಡಿ ಮಾಡುತ್ತಿದ್ದಾರೆ ಎಂದು ಕೇರಳ ವಿಧಾನಸಭೆಯಲ್ಲಿ ಸಚಿವರ ದಿಕ್ಕು ತಪ್ಪಿಸುವ ಹೇಳಿಕೆ ಹಿಂಪಡೆಯಬೇಕು, ಪಡಿತರ ವರ್ತಕರ ವೇತನ ಪರಿಷ್ಕರಣೆ ಮಾಡಬೇಕು, ಸುಪ್ರೀಂ ಕೋರ್ಟ್ ತೀರ್ಪಿನ ಹೊರತಾಗಿಯೂ ಕಮಿಷನ್ ನೀಡದೆ ಕಿಟ್ ಕಮಿಷನ್ ವಿಳಂಬ ಮಾಡುವುದನ್ನು
ಬಂಟ್ವಾಳ: ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ರಥಬೀದಿಯಲ್ಲಿದ್ದ ಬೃಹತ್ ಗಾತ್ರದ ಅರಳಿ ಮರ(ಅಶ್ವತ್ಥ)ವೊಂದು ಗುರುವಾರ ಬೆಳೆಗ್ಗೆ ಧರೆಗುರುಳಿದ್ದು, ಮರ ವಿದ್ಯುತ್ ತಂತಿಯ ಮೇಲೆ ಬಿದ್ದು 5-6 ವಿದ್ಯುತ್ ಕಂಬಗಳು ಧರೆಗುರುಳಿರುವ ಜತೆಗೆ ರಸ್ತೆಗೆ ಬಿದ್ದ ಪರಿಣಾಮ ಕೆಲವೊತ್ತು ಸಂಚಾರ ವ್ಯತ್ಯಯ ಉಂಟಾಯಿತು. ಬೆಳ್ಳಗ್ಗಿನ ಹೊತ್ತು ಜನಸಂಚಾರ ಹಾಗೂ ವಾಹನ ಸಂಚಾರ ಹೆಚ್ಚಿರುವ ಸಮಯವಾದರೂ, ದೇವರ ಪವಾಡದ ರೀತಿಯಲ್ಲಿ ಯಾವುದೇ ಜೀವಹಾನಿ ಉಂಟಾಗಿಲ್ಲ. ಕಳೆದೆರಡು ದಿನಗಳಲ್ಲಿ
ವಾಹನಕ್ಕೆ ಸೈಡ್ ಕೊಡುವ ವಿಚಾರವಾಗಿ ನಡೆದ ಗಲಾಟೆಯು ಪರಸ್ಪರ ಹಲ್ಲೆ ನಡೆದು ಕೆಲಕಾಲ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾದ ಘಟನೆ ಕಾಟಿಪ್ಪಳ್ಳದ ಗಣೇಶಪುರದಲ್ಲಿ ನಡೆದಿದೆ. ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಯಾದ ಫಾಝಿಲ್ ಸಹೋದರ ಆದಿಲ್ ಮತ್ತು ನಾಗೇಶ್ ಎಂಬವರ ನಡುವೆ ಸೈಡ್ ಕೊಡುವ ವಿಚಾರವಾಗಿ ಗಲಾಟೆ ನಡೆದಿದೆ. ನಾಗೇಶ್ ಹಾಗು ಜೊತೆಗಿದ್ದವರು ಫಾಝಿಲ್ ಸಹೋದರ ಆದಿಲ್ ಮೇಲೆ ಹಲ್ಲೆ ನಡೆಸಿದ್ದು, ಹಲ್ಲೆ ನಡೆಸಿದವರನ್ನು ಸಾರ್ವಜನಿಕರು ಪೆÇಲೀಸರಿಗೆ ಒಪ್ಪಿಸಿದ್ದಾರೆ.
ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 22, 2023 ರಿಂದ ಮಾರ್ಚ್ 05, 2023 ರವರೆಗೆ ನಡೆಯಲಿರುವ ಅತಿರುದ್ರ ಮಹಾಯಾಗ ಪ್ರಯುಕ್ತ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ ಮತ್ತು ಅತಿರುದ್ರ ಮಹಾಯಾಗ ಸಮಿತಿ ವತಿಯಿಂದ ಫೆಬ್ರವರಿ 12, 2023 ರ ಭಾನುವಾರದಂದು ಮಣಿಪಾಲ ಸರಳೇಬೆಟ್ಟುವಿನ ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇಗುಲದ ಸನಿಹದಲ್ಲಿರುವ ಯಾಗ ಮಂಟಪದ ಬಳಿ “ಸಮರ್ಪಣಾ ದಿವಸ” ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಪುತ್ತೂರು: ಪ್ರತಿಷ್ಟಿತ ಕ್ಯಾಂಪ್ಕೋ ಸಂಸ್ಥೆ, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ, ಇದರ ಸಂಯುಕ್ತ ಆಶ್ರಯದಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆವರಣದಲ್ಲಿ ಫೆಬ್ರವರಿ 10 ರಿಂದ 12 ರ ತನಕ 3 ದಿನಗಳ ಕಾಲ ನಡೆಯಲಿರುವ 5 ನೇ ಬೃಹತ್ ಕೃಷಿಯಂತ್ರ ಮೇಳ-2023 ಮತ್ತು ಕನಸಿನ ಮನೆ ಪ್ರದರ್ಶನಕ್ಕೆ ಎಲ್ಲಾ ಸಿದ್ದತೆಗಳು ಮುಕ್ತಾಯದ ಹಂತದಲ್ಲಿವೆ ಎಂದು ಕ್ಯಾಂಪೆÇ್ಕೀ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅವರು
ಮೂಡುಬಿದಿರೆ: ರಾಷ್ಟ್ರ ಮಟ್ಟದಲ್ಲಿ ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಇಬ್ಬರು ವಿದ್ಯಾರ್ಥಿಗಳು 99 ಪರ್ಸೆಂಟೈಲ್‌ಗಿಂತ ಅಧಿಕ ಅಂಕ ಪಡೆದಿದ್ದಾರೆ. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಒಟ್ಟು 25 ಮಂದಿ 95 ಪರ್ಸೆಂಟೈಲ್‌ಗಿಂತ ಅಧಿಕ, 60 ಮಂದಿ 90 ಪರ್ಸೆಂಟೈಲ್‌ಗಿಂತ ಅಧಿಕ, ಹಾಗೂ 103 ಮಂದಿ 85 ಪರ್ಸೆಂಟೈಲ್‌ಗಿಂತ ಅಧಿಕ, ಫಲಿತಾಂಶ ಗಳಿಸಿದ್ದಾರೆ. ಶರತ್ ಸಂಗಮೆಶ್ ಬಿರದರ್ (99.23), ಪ್ರಧ್ಯುಮ್ನ ಭಟ್ (99.07), ಸಂಭವ್ ಪವರ್ (98.87),
ಮಂಜೇಶ್ವರ: ಗಡಿಪ್ರದೇಶವಾದ ಕರ್ನಾಟಕ ಪೆಟ್ರೋಲ್ ಪಂಪ್ ಎದುರು ಹಾಕಿರುವ ಪ್ಲೆಕ್ಸ್ ಬೋರ್ಡ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕೇರಳಕ್ಕಿಂತ 8 ರೂಪಾಯಿ ಕಡಿಮೆ ದರದಲ್ಲಿ ಇಂಧನ ಸಿಗುತ್ತದೆ ಎಂಬುದಾಗಿ ಫಲಕ ಹಾಕಿರುವುದು ಇದೀಗ ವೈರಲಾಗುತ್ತಿದೆ. ಕೇರಳಕ್ಕೆ ಹೋಲಿಸಿದರೆ ಕರ್ನಾಟಕದ ಡೀಸೆಲ್ ದರ 8 ರೂ. ಹಾಗೂ ಪೆಟ್ರೋಲ್ 5 ರೂಪಾಯಿ ಕಡಿಮೆಯಾಗಿದೆ. ಕೇರಳ ಬಜೆಟ್ ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಎರಡು ರೂಪಾಯಿ ಸೆಸ್ ಹೇರಲಾಗಿದೆ. ಇದು ಏಪ್ರಿಲ್ ನಿಂದ
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಪುರುಷರ ಮತ್ತು ಮಹಿಳೆಯರ ಪವರ್ ಲಿಫ್ಟಿಂಗ್ ಸ್ಪರ್ಧೆಯು ಫೆಬ್ರವರಿ 11 ಮತ್ತು 12ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಮಿನಿ ಪುರಭವನದಲ್ಲಿ ಜರುಗಲಿದೆ ಎಂದು ದ.ಕ.ಜಿಲ್ಲಾ ಪವರ್ ಲಿಫ್ಟಿಂಗ್ ಎಸೋಸಿಯೇಶನ್ ಕಾರ್ಯದರ್ಶಿ ಮಧುಚಂದ್ರ ತಿಳಿಸಿದರು. ಅವರು ನಗರದ ಪ್ರೆಸ್ ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಮಂಗಳೂರು ಮಹಾನಗರಪಾಲಿಕೆ ಸಹಯೋಗದೊಂದಿಗೆ ಮೇಯರ್ ಕಪ್ ಪ್ರಶಸ್ತಿ ಸ್ಪರ್ಧೆ ಮಂಗಳೂರು ಬಾಲಾಂಜನೇಯ
ಮಣಿಪಾಲ ಸರಳೆಬೆಟ್ಟುವಿನ ಶಿವಪಾಡಿಯಲ್ಲಿರುವ ಶ್ರೀ ಉಮಾಮಹೇಶ್ವರ ದೇಗುಲದಲ್ಲಿ ಫೆಬ್ರವರಿ 22, 2023 ರಿಂದ ಮಾರ್ಚ್ 05, 2023 ರವರೆಗೆ ಲೋಕಕಲ್ಯಾಣಕ್ಕಾಗಿ ನಡೆಯಲಿರುವ “ಅತಿರುದ್ರ ಮಹಾಯಾಗ” ಪ್ರಯುಕ್ತ ದೇವಸ್ಥಾನದಲ್ಲಿ ಹಲವಾರು ಕಾರ್ಯಕ್ರಮಗಳೊಂದಿಗೆ ಅತಿರುದ್ರ ಮಹಾಯಾಗಕ್ಕೆ ಸಾಕಷ್ಟು ತಯಾರಿಗಳು ಬಿಡುವಿಲ್ಲದೆ ನಡೆಯುತ್ತಿವೆ. ಈಗಾಗಲೇ ಉಡುಪಿ ತಾಲೂಕು ಮಟ್ಟದ ಪುಟಾಣಿಗಳ ಚಿತ್ರಕಲಾ ಪ್ರತಿಭೆಯನ್ನು ಗುರುತಿಸಲು “ಶಿವ ಚಿತ್ತಾರ”




























