Home Posts tagged V4News (Page 117)

ಮಂಗಳೂರು: ಡಾ. ಪ್ರಭಾಕರ ನೀರ್‌ಮಾರ್ಗ ಅವರಿಗೆ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಮಂಗಳೂರು ವಿಶ್ವ ವಿದ್ಯಾನಿಲಯದ ಮಾಜಿ ಉಪ ನೋಂದಣಾಧಿಕಾರಿ ಹಾಗೂ ಮ್ಯಾಪ್ಸ್ ಇವ್‌ನಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಭಾಕರ ನೀರ್‌ಮಾರ್ಗ ಅವರು ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಈ ಬಾರಿಯ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.ನಗರದ ನೆಹರೂ ಮೈದಾನದಲ್ಲಿ ಇಂದು ಬೆಳಗ್ಗೆ ನಡೆದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಅವರಿಗೆ ಜಿಲ್ಲಾ

ಮೂಡುಬಿದಿರೆ: ಅಸಹಾಯಕ ಮಹಿಳೆಗೆ ಸರ್ವೋದಯ ಫ್ರೆಂಡ್ಸ್ ನಿಂದ ಮನೆ ಹಸ್ತಾಂತರ

ಮೂಡುಬಿದಿರೆ: ಪಡುಮಾರ್ನಾಡು ಗ್ರಾಪಂ ವ್ಯಾಪ್ತಿಯ ಅಮನಬೆಟ್ಟು ಬಳಿಯ ಬಡ ಮಹಿಳೆ ಸುಮಾ ಕುಟುಂಬಕ್ಕೆ ಸರ್ವೋದಯ ಫ್ರೆಂಡ್ಸ್ ಬೆದ್ರದಿಂದ ರೂ.7 ಲಕ್ಷ ವೆಚ್ಚದಲ್ಲಿ `ಸರ್ವೋದಯ ನಿಲಯ’ ಎಂಬ ಹೆಸರಿನ ಮನೆ ನಿರ್ಮಿಸಿದ್ದು ಅದನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಮೂಡುಬಿದಿರೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಶ್ರೀಪತಿ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ನಾವು ನಮ್ಮ ಧರ್ಮವನ್ನು ಉಳಿಸಿದರೆ ನಮ್ಮನ್ನು ಧರ್ಮ ರಕ್ಷಿಸುತ್ತದೆ. ಬಡವರಿಗೆ,

ಕಡಬ: ಸಂಪೂರ್ಣ ಹದಗೆಟ್ಟ ನೆಲ್ಯಾಡಿ-ಪಡುಬೆಟ್ಟು ರಸ್ತೆ: ಕೆಸರು ತುಂಬಿದ ರಸ್ತೆ, ವಾಹನ ಸವಾರರ ಪರದಾಟ

ಕಡಬದ ನೆಲ್ಯಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನೆಲ್ಯಾಡಿಯಿಂದ-ಪಡುಬೆಟ್ಟು ತನಕ ಹೋಗುವ ರಸ್ತೆ ಕೆಸರು ತುಂಬಿದ್ದು, ವಾಹನ ಸವಾರರು ಮತ್ತು ಪಾದಚಾರಿಗಳು ಸಂಚರಿಸಲು ಕಷ್ಟ ಅನುಭವಿಸುತ್ತಿದ್ದಾರೆ. ಕಡಬ ತಾಲೂಕಿನ ನೆಲ್ಯಾಡಿ ಗ್ರಾಮ ಪಂಚಾಯತ್ ಗೆ ಒಳಪಟ್ಟ ನೆಲ್ಯಾಡಿಯಿಂದ-ಪಡುಬೆಟ್ಟು ತನಕ ಹೋಗುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಪಂಚಾಯತ್ ವತಿಯಿಂದ ಮಣ್ಣುಹಾಕಿ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ಜನಸಾಮಾನ್ಯರು ಹಾಗೂ ವಾಹನ ಸವಾರರು ರಸ್ತೆಯಲ್ಲಿ ಸಂಚರಿಸಲು

ಮೂಡುಬಿದಿರೆ: ಕೃಷಿಕ, ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ ನಿಧನ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವರ ತಂದೆ ಕೃಷಿಕ, ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ (106)ರು ಅಲ್ಪಕಾಲದ ಅನಾರೋಗ್ಯದಿಂದ ಮಂಗಳವಾರ ಮಧ್ಯಾಹ್ನದ ವೇಳೆ ನಿಧನರಾಗಿದ್ದಾರೆ.

ಕಡಬ: ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ: ನಿಶ್ವಿತ್ ಗೆ ಚಿನ್ನ

ವಿದ್ಯಾಭಾರತಿ ಅಖಿಲ ಭಾರತ ಶಿಕ್ಷಾ ಸಂಸ್ಥಾನ, ಮಧ್ಯ ಪ್ರದೇಶದ ದೇವಾಸ್ ನಲ್ಲಿ ನಡೆಸಿದ 17ರ ವಯೋಮಿತಿಯ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ದಕ್ಷಿಣ ಮಧ್ಯ ಕ್ಷೇತ್ರವನ್ನು ಪ್ರತಿನಿಧಿಸಿದ ಸರಸ್ವತಿ ವಿದ್ಯಾಲಯ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿ ನಿಶ್ವಿತ್ ಪಿ ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನವನ್ನು ಪಡೆದು ದೆಹಲಿಯಲ್ಲಿ ನಡೆಯುವ SGFI ಗೆ ಆಯ್ಕೆಯಾಗಿರುತ್ತಾನೆ. ಇವನು ಕಡಬ ತಾಲೂಕಿನ 102 ನೆಕ್ಕಿಲಾಡಿ ಗ್ರಾಮದ ಪೊನ್ನೈತ್ತೂರು ಸುರೇಶ ಮತ್ತು

ಮೂಡುಬಿದಿರೆ: ದ.ಕ. ಜಿಲ್ಲಾಮಟ್ಟದ ಕ್ರೀಡಾಕೂಟ, ಕಡಬದ ಚರಿಷ್ಮಾ ಕೂಟ ದಾಖಲೆ

ಮೂಡುಬಿದಿರೆಯಲ್ಲಿ ನಡೆಯುತ್ತಿರುವ ದ.ಕ. ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಪ್ರೌಢಶಾಲಾ ಬಾಲಕಿಯರ ವಿಭಾಗದ 1500 ಮತ್ತು 3000 ಕಿ.ಮೀ ಓಟದಲ್ಲಿ ಪುತ್ತೂರು ತಾಲೂಕಿನ ಕಡಬ ಸ.ಪ.ಪೂ.ಕಾಲೇಜಿನ ಚರಿಷ್ಮಾ ಕೂಟ ದಾಖಲೆಯನ್ನು ನಿರ್ಮಿಸಿದ್ದಾರೆ. ಎಡಪದವು ಪ.ಪೂ.ಕಾಲೇಜಿನ ಸೌಮ್ಯ ಕೆ.ಪಿ ಅವರು 2004ರಲ್ಲಿ 5:01.70 ಸೆಕುಂಡು ನಲ್ಲಿ ಕ್ರಮಿಸಿ ಮಾಡಿರುವ ದಾಖಲೆಯನ್ನು ಚರಿಷ್ಮಾ ಅವರು 4:53.9 ಸೆಕುಂಡಿನಲ್ಲಿ ಕ್ರಮಿಸುವ ಮೂಲಕ ಹಾಗೂ 3000 ಓಟದಲ್ಲಿ 10:44.7 ಸೆಕುಂಡಿನಲ್ಲಿ

ಪಡುಬಿದ್ರಿ: ಮರವಂತೆಯ ಮಗುವಿನ ಚಿಕಿತ್ಸಾ ವೆಚ್ಚಕ್ಕಾಗಿ ಬಣ್ಣ ಹಚ್ಚಿದ ಯುವಕರು..!!

ಪರರ ನೋವಿಗೆ ಸ್ಪಂದಿಸುವ ಮನಸ್ಸು ನಮ್ಮಲ್ಲಿದ್ದರೆ ಜಾತಿ ಮತ ಭೇದಕ್ಕೆ ಜಾಗವೇ ಇಲ್ಲ ಎಂಬುದನ್ನು ಪಡುಬಿದ್ರಿಯ ಯುವಕರ ತಂಡವೊಂದು ತೋರಿಸಿಕೊಟ್ಟಿದ್ದಾರೆ. ಪುಟ್ಟ ಅನಾರೋಗ್ಯ ಪೀಡಿತ ಮಗುವಿನ ಚಿಕಿತ್ಸೆಗಾಗಿ ಬಣ್ಣ ಹಚ್ಚಿ ಅದರಿಂದ ಸಂಗ್ರಹಗೊಂಡ ಹಣನ್ನು ಆ ಮಗುವಿನ ಕುಟುಂಬಕ್ಕೆ ಹಸ್ತಾಂತರ ಮಾಡುವ ಮೂಲಕ ಸಾಭೀತು ಪಡಿಸಿದ್ದಾರೆ. ಮರವಂತೆಯ ಬಡ ಕುಟುಂಬದ ಶಂಕರ ಪೂಜಾರಿ ಎಂಬವರ ಏಳರ ಹರೆಯದ ಪುಟ್ಟ ಬಾಲೆ ವೈಷ್ಣವಿಗೆ ಕಾಲು ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ವೈದ್ಯರಲ್ಲಿ

ಮಂಗಳೂರು: ಪ್ರೆಸ್‍ಕ್ಲಬ್ ಅತಿಥಿಯಾಗಿ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಗೌರವ

ಬೆಂಗಳೂರಿನ ಅರಮನೆ ಮೈದಾನದಲ್ಲಿ ನ. 25 ಮತ್ತು 26ರಂದು ನಡೆಯಲಿರುವ ‘ಬೆಂಗಳೂರು ಕಂಬಳ- ನಮ್ಮ ಕಂಬಳ’ಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಈಗಾಗಲೇ ಒಂದು ಹಂತದ ಕಂಬಳ ಕರೆಗಳ ನಿರ್ಮಾಣವಾಗಿದ್ದು, ಅದನ್ನು ನೋಡಲೆಂದೇ ದಿನವೊಂದಕ್ಕೆ ಸಾವಿರಾರು ಜನ ಸೇರುತ್ತಿದ್ದಾರೆ ಎಂದು ಬೆಂಗಳೂರು ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ಹೇಳಿದ್ದಾರೆ. ಮಂಗಳೂರು ಪ್ರೆಸ್‍ಕ್ಲಬ್ ನ ಗೌರವ ಅತಿಥಿಯಾಗಿ ಭಾಗವಹಿಸಿ ಗೌರವ ಸ್ವೀಕರಿಸಿದ ಅವರು ಬೆಂಗಳೂರು

ಮಂಗಳೂರು: ‘ಕರ್ನಾಟಕಕ್ಕೆ 50ರ ಸಂಭ್ರಮ’: ಶೃಂಗಾರಗೊಂಡ ಮಂಗಳೂರು ಪಾಲಿಕೆ ಆವರಣ

ರಾಜ್ಯಕ್ಕೆ ‘ಕರ್ನಾಟಕ’ ಎಂದು ಹೆಸರಿಟ್ಟು 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವೈವಿಧ್ಯಮಯವಾಗಿ ನಾಡಹಬ್ಬ ಆಚರಣೆಗೆ ಸರ್ಕಾರ ನಿರ್ಧರಿಸಿದೆ. ಇದರಂತೆ ಮಂಗಳೂರು ಮಹಾನಗರ ಪಾಲಿಕೆ ಆವರಣ ಕನ್ನಡ ಬಾವುಟದ ಮುಖಾಂತರ ಶೃಂಗಾರಗೊಂಡಿದೆ. ಮಂಗಳೂರು ಪಾಲಿಕೆ ಕಚೇರಿಯ ಮುಖ್ಯ ಪ್ರವೇಶ ದ್ವಾರವನ್ನು ಕನ್ನಡ ಬಾವುಟದಿಂದಲೇ ವಿಶೇಷವಾಗಿ ಅಲಂಕರಿಸಲಾಗಿದೆ. ಪಾಲಿಕೆ ಕಚೇರಿ ಮುಂಭಾಗ ಕನ್ನಡ ಬಾವುಟದ ಸ್ವಾಗತ ಕಮಾನುಗಳು, ಶುಭಾಯ ಕೋರಿ ಹಾಕಿದ ನಾಮಫಲಕ, ನಾಡು ನುಡಿ

ಬೆಳ್ತಂಗಡಿ: ಕಳೆಂಜ ಗ್ರಾಮದ ಅರಣ್ಯ ವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ: ಪ್ರತಾಪ್ ಸಿಂಹ ನಾಯಕ್

ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದಲ್ಲಿ ಅರಣ್ಯ ವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಹೇಳಿದರು. ಅವರು ಬೆಳ್ತಂಗಡಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಹಿಂದೆ 2016ರಲ್ಲಿ ಸಿದ್ದರಾಮಯ್ಯನವರ ಸರ್ಕಾರ ಇರುವಾಗ ಪ್ರಸ್ತಾಪ ಸಲ್ಲಿಸಿದ್ದರು. ನಂತರ ಬಿಜೆಪಿ ಸರ್ಕಾರ ಬಂದ ನಂತರ ಕಾರ್ಯರೂಪಕ್ಕೆ ತಂದಿದ್ದೇವೆ. ಈಗ ಸಿದ್ದರಾಮಯ್ಯರ ಸರಕಾರ ಅದನ್ನು ಮುಂದುವರೆಸಿಕೊಡು ಹೋಗಬೇಕು ಎಂದು ಹೇಳಿದರು.