ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಮತ್ತು ಗೃಹ ಸಚಿವರ ರಾಜೀನಾಮೆಗೆ ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಬೆಂಗಳೂರಿನಲ್ಲಿ ಅರಗ ಜ್ಞಾನೇಂದ್ರ ಅವರ ನಿವಾಸಕ್ಕೆ ಮುತ್ತಿಗೆ ಹಾಕಿ ಸರ್ಕಾರದ ವಿರುದ್ಧ ಹಾಗೂ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲಾ ಹುಡುಗರು ಹಬ್ಬದ ಸಡಗರದಲ್ಲಿ ಸಂಭ್ರಮಿಸುತ್ತಿರುವಾಗ ಇಲ್ಲೊಬ್ಬರು ಒಬ್ಬರ ಜೀವ ಉಳಿಸಲೆಂದು ವೇಷ ಹಾಕಿ ಜನಮನಸೆಳೆಯುತ್ತಿದ್ದಾರೆ. ಇವರ ಹೆಸರು ಬೆಂಕಿ ಮಣಿ ಸಂತು ಈ ಹಿಂದೆ ಅದೆಷ್ಟೋ ಬಡವರ ಶಸ್ತ್ರಚಿಕಿತ್ಸೆಗೆ ಸಹಾಯ ಮಾಡಿದ ಕೀರ್ತಿ ಇವರದ್ದು ಶ್ರೀ ಮಹಾರಾಜ ವರಹ ಸ್ವಾಮಿ ದೇವಸ್ಥಾನದಲ್ಲಿ ಕರ್ಕಾಟಕ ಅಮಾಸ್ಯೆ ಪ್ರಯುಕ್ತ ನಡೆದ ಜಾತ್ರಾ ಮಹೋತ್ಸವದಲ್ಲಿ ಬಡ ರೋಗಿಯೊಬ್ಬ ಸಹಾಯಾರ್ಥವಾಗಿ ಬೆಳ್ಳಿಗೆ 3ಗಂಟೆ ಜಾವದಲ್ಲಿ ಉಡುಪಿಯ ಕಟಪಾಡಿ ಹೋಗಿ ತನ್ನ ಇಡೀ ದೇಹದ ಮೇಲೆ
ಸುರತ್ಕಲ್ ಮಂಗಳಪೇಟೆ ನಿವಾಸಿ ಫಾಝಿಲ್ ಹತ್ಯೆಯಿಂದ ಅಘೋಷಿತ ಬಂದ್ ವಾತಾವರಣಕ್ಕೆ ತಿರುಗಿದ್ದ ಸುರತ್ಕಲ್ ಪಟ್ಟಣ ಇಂದು ಸಹಜ ಸ್ಥಿತಿಗೆ ಮರಳಿದೆ.ಅಂಗಡಿ-ಮುಂಗಟ್ಟುಗಳು ತೆರೆದು ಎಂದಿನಂತೆ ಕಾರ್ಯಾಚರಿಸುತ್ತಿದ್ದು ಆಟೋರಿಕ್ಷಾಗಳು, ಬಸ್‍ಗಳು ಎಂದಿನಂತೆ ಓಡಾಡುತ್ತಿವೆ. ಶುಕ್ರವಾರ ಸಂಜೆ ಕಮಿಷನರ್ ಶಶಿಕುಮಾರ್ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ, ಕೆಎಸ್‍ಆರ್‍ಪಿ ತುಕಡಿಗಳು ಪಥಸಂಚಲನ ನಡೆಸಿ ಜನರಲ್ಲಿ ಭದ್ರತೆಯ ವಿಶ್ವಾಸ ಮೂಡಿಸಿದ್ದರು.
ಉಳ್ಳಾಲ: ಜಿಲ್ಲೆಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಯ ಬಳಿಕ ಗಡಿಪ್ರದೇಶದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, ತಲಪಾಡಿ ಗಡಿಯಲ್ಲಿ ಕೇರಳದಿಂದ ಮಂಗಳೂರು ಕಡೆಗೆ ಆಗಮಿಸುತ್ತಿರುವ ವಾಹನಗಳ ತಪಾಸಣೆಯನ್ನು ನಡೆಸುತ್ತಿದ್ದು , ಮಂಗಳೂರಿನಿಂದ ಕೇರಳ ಕಡೆಗೆ ಸಂಚರಿಸುವ ವಾಹನಗಳನ್ನು ಕೇರಳ ಪೊಲೀಸರು ತಪಾಸಣೆ ಆರಂಬಿಸಿದ್ದಾರೆ,. ಕೇರಳ – ಕರ್ನಾಟಕ ಗಡಿಭಾಗವಾಗಿರುವ ತಲಪಾಡಿ, ದೇವಿಪುರ, ನೆತ್ತಿಲಪದವು ಬಳಿ ತಪಾಸಣೆ ನಡೆಸುತ್ತಿದ್ದು, ನೆತ್ತಿಲಪದವು
ದ.ಕ.ಜಿಲ್ಲೆಯಾದ್ಯಂತ ಇಂದು ಮುಂಜಾನೆ ಸುರಿದ ಭಾರೀ ಮಳೆಯಿಂದಾಗಿ ನಗರದ ಪ್ರಮುಖ ಸ್ಥಳಗಳಲ್ಲಿ ನೆರೆ ನೀರು ನಿಂತು ಜಲಾವೃತಗೊಂಡಿದ್ದು, ಮುನ್ನೆಚ್ಚರಿಕೆಯ ಕ್ರಮವಾಗಿ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿ ಮತ್ತು ಮುಲ್ಕಿ, ಉಳ್ಳಾಲ, ಬಂಟ್ವಾಳ, ಮೂಡುಬಿದಿರೆ ವ್ಯಾಪ್ತಿಯಲ್ಲಿ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ. ನಗರದ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಸಹಿತ ನಗರದ ಬಹುತೇಕ ಕಡೆಗಳಲ್ಲಿ ನೀರು ನಿಂತಿದ್ದು, ಪಾದಚಾರಿ, ವಾಹನಿಗರು
ಪರಮಪೂಜ್ಯ ಡಾಕ್ಟರ್ ಪ್ರಣವಾನಂದ ಸ್ವಾಮೀಜಿಯವರು ಪ್ರವೀಣ್ ನೆಟ್ಟಾರ್ ರವರ ಹುಟ್ಟೂರಾದ ಬೆಳ್ಳಾರೆ ಗ್ರಾಮಕ್ಕೆ ತೆರಳಿ ಕುಟುಂಬದ ಸದಸ್ಯರ ಜೊತೆಗೆ ಹಾಗೂ ಅವರ ಶ್ರೀಮತಿ ಅವರ ಜೊತೆಗೂ ದೇವರು ದುಃಖವನ್ನು ಬರಿಸುವ ಶಕ್ತಿಯನ್ನು ನೀಡಲೆಂದು ಮತ್ತು ನಾರಾಯಣ ಗುರುಗಳ ಹೆಸರಿನಲ್ಲಿ ಪೂಜಾ ವಿಧಾನವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಶ್ರೀಗಳ ಜೊತೆಯಲ್ಲಿ ಬಿಲ್ಲವ ಸಮುದಾಯದ ಕುದ್ರೋಳಿ ದೇವಸ್ಥಾನದ ಸಮಿತಿಯ ಕಾನೂನು ಸಲಹೆಗಾರರಾಗಿರ್ತಕ್ಕಂತ ಶ್ರೀ ಪದ್ಮರಾಜ್ ನ್ಯಾಯವಾದಿಗಳು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಭವಿಸಿದ ಅಹಿತಕರ ಘಟನೆ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ನಿಟ್ಟಿನಲ್ಲಿ ಸಮುದಾಯದ ಪ್ರಮುಖರೊಂದಿಗೆ ಶನಿವಾರ(ಜು.30) ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶಾಂತಿ ಸಭೆ ಆಯೋಜಿಸಲಾಗಿದೆ.ಶಾಂತಿ ಕಾಪಾಡುವಲ್ಲಿ ಜಿಲ್ಲೆಯ ಜನತೆಯ ಸಹಕಾರ ಅತಿ ಮುಖ್ಯ. ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಮುದಾಯದ ಪ್ರಮುಖರೊಂದಿಗೆ ನಾಳೆ(ಜು.30) ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶಾಂತಿ ಸಭೆ ಆಯೋಜಿಸಲಾಗಿದೆ ಎಂದು ದ.ಕ.
ತಮ್ಮ ಸಮಸ್ಯೆಗಳನ್ನು ಬಗೆಹರಿಸದಿರುವ ಉಡುಪಿಯ ಸ್ವಿಗ್ಗಿ ಮೆನೇಜರ್ ವಿರುದ್ದ ಸ್ವಿಗ್ಗಿ ಬಾಯ್ಸ್ ಸಿಡಿದೆದ್ದಿದ್ದಾರೆ .ಉಡುಪಿ ಮಣಿಪಾಲದಲ್ಲಿ ಡೆಲಿವೆರಿ ಮಾಡುತ್ತಿದ್ದ ನೂರಾರು ಡೆಲಿವೆರಿ ಬಾಯ್ಸ್ ಡೆಲಿವೆರಿ ಸ್ಥಗಿತಗೊಳಿಸುವುದರ ಮೂಲಕ ಪ್ರತಿಭಟನೆ ನಡೆಸಿದ್ದಾರೆ.ಕಳೆದ ಮೂರು ವರುಷಗಳಿಂದ ಡೆಲಿವೆರಿ ಬಾಯ್ಸ್ ಗಳು ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಒಬ್ಬ ಅಧಿಕಾರಿಯಿಲ್ಲ.ಉಡುಪಿಗೊಂದು ಕಚೇರಿಯಿಲ್ಲ .ಮೆನೇಜರ್
ಬೆಳ್ಳಾರೆಯಲ್ಲಿ ಮಂಗಳವಾರ ರಾತ್ರಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವಮೋರ್ಚಾದ ಕಾರ್ಯಕಾರಿ ಸಮಿತಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿ, ಕುಟುಂಬ ಸದಸ್ಯರಿಗೆ ನೆರವು ನೀಡುವಂತೆ ಶ್ರೀ ಕ್ಷೇತ್ರ ಗೆಜ್ಜೆಗಿರಿ ಜೊತೆ ಕಾರ್ಯದರ್ಶಿ ಮೋಹನ ದಾಸ್ ಬಂಗೇರ ಮನವಿ ಮಾಡಿದ್ದಾರೆ. ಪ್ರವೀಣ್ ನೆಟ್ಟಾರು ಅವರು ಧಾರ್ಮಿಕ ಸಂಘಟನೆಯಲ್ಲಿ ತೊಡಗಿಸಿಕೊಂಡು, ಬೇಧಬಾವ ಮಾಡದೇ ಎಲ್ಲಾರನ್ನು ಅತ್ಯಂತ ಗೌರವಯುತ್ತ ನೋಡುತ್ತಿದ್ದರು. ಮಂಗಳವಾರ ರಾತ್ರಿ ನಡೆದ ಪ್ರವೀಣ್


















