ಚಲನಚಿತ್ರದ ಹಾಸ್ಯ ನಟಿ ವಿನ್ನಿ ಫೆರ್ನಾಂಡೀಸ್ ಹೃದಯಘಾತದಿಂದ ನಿಧನ ಹೊಂದಿದ್ದಾರೆ.ಅವರಿಗೆ 63 ವಯಸ್ಸಾಗಿತ್ತು. ಕನ್ನಡ, ತುಳು ಮತ್ತು ಕೊಂಕಣಿ ಚಲನಚಿತ್ರದಲ್ಲಿ ನಟಿಸಿದ್ದಾರೆ. ಅವರು ಕನ್ನಡ ಮತ್ತು ಕೊಂಕಣಿ ಧಾರಾವಾಹಿಗಳಲ್ಲಿಯೂ ಕಾಣಿಸಿಕೊಂಡಿದ್ದರು. ಕೊಂಕಣಿ ನಾಟಕಗಳಲ್ಲಿನ ಪಾತ್ರಗಳೊಂದಿಗೆ ನಟನಾ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು ನಂತರ ತುಳು ಮತ್ತು ಕನ್ನಡ
ಮಂಗಳೂರು ಉತ್ತರ ರೋಟರಿ ವತಿಯಿಂದ ಯುವ ಸಾಧಕರಿಗೆ ಸನ್ಮಾನ ಕಾರ್ಯಕ್ರಮವೂ ನಗರದ ಲೇಡಿಹಿಲ್‌ನ ರೋಟರಿ ಬಾಲಭವನದಲ್ಲಿ ನಡೆಯಿತು. ರೋಟರಿ ಮಾಜಿ ಗವರ್ನರ್ ಮೇಜರ್ ಡೊನೊರ್ ರಂಗನಾಥ ಭಟ್ ಅವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಯುವ ಪ್ರತಿಭೆಗಳಿಗೆ ಗೌರವಿಸಿದ್ರು. ವಿಜ್ಞಾನ ಮತ್ತು ತಾಂತ್ರಿಕತೆ ಕ್ಷೇತ್ರದಲ್ಲಿ ಸ್ವಸ್ತಿಕ್ ಪದ್ಮ, ಪವರ್ ಲಿಫ್ಟಿಂಗ್ ನಲ್ಲಿ ವೇನೇಝಿಯಾ ಆನ್ನಿ ಕಾರ್ಲೊ ಹಾಗೂ ಸುರೇಶ್ ಶೇಟ್ ,ನೃತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ಅನುಷಾ ಜೇನ್ ಡಿಸೋಜ,
ಮಂಗಳೂರಿನ ಹೊರವಲಯದ ಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯ ಕಾಮಗಾರಿಯ ಹಿನ್ನಲೆ ಪಕ್ಕದಲ್ಲಿದ್ದ ಮೀನು ಮಾರುಕಟ್ಟೆಯ ಮೆಲ್ಚಾವಣಿಯನ್ನು ತೆಗದು ಮಾರುಕಟ್ಟೆಯನ್ನು ನೆಲಸಮ ಮಾಡಲು ಹೊರಟಿರುವುದು ಮೀನು ಮಾರಾಟ ಮಾಡುವ ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದೆ. ಎಐಸಿಸಿ ಕಾರ್ಯದರ್ಶಿ ಐವನ್ ಡಿ’ಸೊಜಾರವರು 2 ವರ್ಷದ ಹಿಂದೆ ಎಂಎಲ್‌ಸಿಯಾಗಿದ್ದ ಸಂದರ್ಭ ಎನ್‌ಹೆಚ್ 66 ಬೈಕಂಪಾಡಿಯಲ್ಲಿ ಮೀನುಗಾರ ಮಹಿಳೆಯರಿಗೆ ಸಹಾಯವಾಗುವ ನಿಟ್ಟಿನಲ್ಲಿ ಅನುದಾನ ನೀಡಿ
ಅಪ್ರಾಪ್ತ ವಯಸ್ಸಿನ ಬಾಲಕಿ ಜತೆ ಮೊಬೈಲ್ ಮೂಲಕ ಅನುಚಿತವಾಗಿ ವರ್ತಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಮಕ್ಕಳ ಕಲ್ಯಾಣ ಸಮಿತಿ ಮೂಲಕ ನೀಡಲಾದ ದೂರಿನ ಮೇರೆಗೆ ಮಂಗಳೂರು ನಗರ ಠಾಣೆಯೊಂದರ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಈ ಕುರಿತು ಮಂಗಳೂರಿನ ಕಮೀಷನರ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾತನಾಡಿ, ನಗರದ ಪೊಲೀಸ್ ಠಾಣೆ ಪ್ರಕರಣವೊಂದಕ್ಕೆ ಸಂಬಂಧಿಸಿ ಪೋಷಕರ ಜತೆ ದೂರು ನೀಡಲು ಬಂದಿದ್ದ ಬಾಲಕಿಯಿಂದ ಮೊಬೈಲ್ ಸಂಖ್ಯೆಯನ್ನು
ಕೋರೋನಾ ಭೀತಿಯ ನಡುವೆಯೂ ಮತ್ತೆ ಎಸೆಸೆಲ್ಸಿ ಪರೀಕ್ಷೆ ಕರ್ನಾಟಕದಾದ್ಯಂತ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಈ ಯಶಸ್ವಿನ ಹಿಂದೆ ಶಿಕ್ಷಣ ಇಲಾಖೆ ಜೊತೆ ಹಲವು ಸಂಘ ಸಂಸ್ಥೆಗಳು ಕೈಜೋಡಿಸಿದೆ. ಈ ಪೈಕಿ ಪ್ರಮುಖ ಪಾತ್ರ ವಹಿಸಿ, ಪರೀಕ್ಷೆ ಸುಸೂತ್ರವಾಗಿ ನಡೆಯಲು ಕಾರಣವಾದವರ ಪೈಕಿ ಈ ತಂಡದ ಪ್ರಯತ್ನ ಕೂಡಾ ಪ್ರಶಂಸಾರ್ಹ. ಅಷ್ಟಕ್ಕೂ ಆ ತಂಡ ಯಾವುದು? ಎಸೆಸೆಲ್ಸಿ ಪರೀಕ್ಷಾ ಕೇಂದ್ರಗಳಲ್ಲಿ ಅವರು ಮಾಡಿದ ಸೇವೆ ಏನು? ಬನ್ನಿ ನೋಡೋಣ ನೀಲಿ ಬಣ್ಣದ ಸಮವಸ್ತ್ರ, ತಲೆಗೊಂದು ಟೋಪಿ
ಕುಂದಾಪುರ: ಸೈಕಲ್ ನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ವೇಳೆ ಕಾರೊಂದು ಢಿಕ್ಕಿಯಾದ ಪರಿಣಾಮ ವ್ಯಕ್ತಿಯೋರ್ವ ಗಂಭೀರ ಗಾಯಗೊಂಡು ಸಾವನ್ನಪ್ಪಿದ ದಾರುಣ ಘಟನೆ ಇಲ್ಲಿನ ಹೆಮ್ಮಾಡಿ ಸಮೀಪದ ಜಾಲಾಡಿಯಲ್ಲಿ ನಡೆದಿದೆ. ಹೆಮ್ಮಾಡಿಯ ಸಂತೋಷನಗರ ನಿವಾಸಿ ರಾಮ ಕುಲಾಲ್(60) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿ.ರಾಮ ಕುಲಾಲ್ ಅವರು ಹೆಮ್ಮಾಡಿಯಿಂದ ತಮ್ಮ ಸೈಕಲ್ ನಲ್ಲಿ ತಲ್ಲೂರಿಗೆ ತೆರಳುತ್ತಿರುವ ಹೊತ್ತಿಗೆ ಈ ಅಪಘಾತ ನಡೆದಿದೆ. ಸೈಕಲ್ ಡಿವೈಡರ್
ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಟ್ವೀಟ್ ಮೂಲಕ ನೂತನ ಸಿಎಂಗೆ ಅಭಿನಂದನೆ ಸಲ್ಲಿಸಿದ್ರು. ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ಕೆಲಸ ಮಾಡ್ತಾರೆ ಎನ್ನುವ ವಿಶ್ವಾಸವಿದೆ ಎಂದು ಮೋದಿ ಟ್ವೀಟ್ ಮೂಲಕ ಹೇಳಿಕೊಂಡಿದ್ದಾರೆ. ಇದೇ ವೇಳೆ ಮಾಜಿ ಸಿಎಂ ಬಿಎಸ್‌ವೈ ಅವರನ್ನು ಟ್ವೀಟ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಡಿ ಹೊಗಳಿದ್ದಾರೆ. ಬಿಎಸ್‌ವೈಗೆ ಪಕ್ಷ ಮೇಲಿನ ಬದ್ಧತೆ ಅವರ್ಣನೀಯವಾಗಿದೆ. ಸಾಮಾಜಿಕ ನ್ಯಾಯ,
ಮುಖ್ಯ ಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಪ್ರಮಾಣವಚನ ಸ್ವೀಕಾರಿಸಿದ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ರು, ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರು ನೇತೃತ್ವದಲ್ಲಿ ಉಡುಪಿಯ ಕ್ಲಾಕ್ ಟವರ್ ಬಳಿ ಸೇರಿದ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ,ಜೈಕಾರ ಹಾಕಿ ಸಂಭ್ರಮಿಸಿದರು. ಇನ್ನು ಉಡುಪಿ ಜಿಲ್ಲಾ ಉಸ್ತುವಾರಿ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಸಿಎಂ
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಬಸವರಜ ಬೊಮ್ಮಾಯಿ ಅವರಿಗೆ ಪ್ರಮಾಣ ಬೋಧಿಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಧಿಕಾರ ಮತ್ತು ಗೌಪ್ಯತೆ ಪ್ರಮಾಣ ವಚನ ಬೋಧಿಸಿದರು. ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರು ಕಾರ್ಯಕ್ರಮ
ಕಾಪು ಹೊಸ ಮಾರಿಯಮ್ಮ ದೇವಸ್ಥಾನದಲ್ಲಿ ವಾರ್ಷಿಕ ಆಟಿ ಮಾರಿ ಪೂಜೆಯು ಕೊವೀಡ್ ಸಮಸ್ಯೆಯಿಂದಾಗಿ ಸರಳವಾಗಿ ನಡೆದಿದೆ. ವಾರ್ಷಿಕವಾಗಿ ತುಳು ತಿಂಗಳುಗಳಾದ ಸುಗ್ಗಿ, ಜಾರ್ದೆ ಹಾಗೂ ಆಟಿ ಮಾರಿಪೂಜೆ ನಡೆಯುತ್ತಿದ್ದು, ಈ ಧಾರ್ಮಿಕ ಕಾರ್ಯಕ್ರಮಗಳಿಗೆ ಜಿಲ್ಲೆ ಹೊರಜಿಲ್ಲೆ, ಹೊರ ರಾಜ್ಯ, ದೇಶ ವಿದೇಶಗಳಿಂದಲೂ ಲಕ್ಷಾಂತರ ಭಕ್ತಾಧಿಗಳು ಆಗಮಿಸುತ್ತಿದ್ದು, ಆದರೆ ಈ ಬಾರಿ ಕೋವಿಡ್ ಸಮಸ್ಯೆಯಿಂದಾಗಿ ಸರ್ಕಾರದ ಸೂಚನೆಯಂತೆ ಸರಳವಾಗಿ ನಡೆಯುವುದರಿಂದ ಭಕ್ತಾಧಿಗಳ ಸಂಖ್ಯೆಯೂ ವಿರಳ


















